ಕಾರ್ಕಳ: ಇಲ್ಲಿನ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ವಿಜೇತ ವಿಶೇಷ ಶಾಲೆ ಮತ್ತು ಇತರ ಸಂಸ್ಥೆಗಳ ಸಹಯೋಗದಲ್ಲಿ ವಿಶೇಷ ಶಿಕ್ಷಕ -ಶಿಕ್ಷಕೇತರರಿಗೆ ರಾಜ್ಯಮಟ್ಟದ ‘ಜಾನಪದ ನೃತ್ಯ ಸ್ಪರ್ಧೆ ವಿಜೇತೋತ್ಸವ - 2026’ ಯಶಸ್ವಿಯಾಗಿ ಸಂಪನ್ನಗೊಂಡಿತು. ವಿಜೇತೋತ್ಸವವನ್ನು ಹಿರಿಯ ಸಿಎ ಕಮಲಾಕ್ಷ ಕಾಮತ್ ಹಾಗೂ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸ್ಥಾಪಕ ಮತ್ತು ಪ್ರಾಂಶುಪಾಲರಾದ ಗಣಪತಿ ಉದ್ಘಾಟಿಸಿ ಶುಭ ಹಾರೈಸಿದರು. ಬಳ್ಳಾರಿಯ ಅನುಗ್ರಹ ಸ್ಪೆಷಲ್ ಸ್ಕೂಲ್ನ ಪ್ರತಿಭಾನ್ವಿತ ಶಿಕ್ಷಕ ವಸಂತ ಕುಮಾರ್ ಅವರನ್ನು ಅಭಿನಂದಿಸಲಾಯಿತು.ಜಿಲ್ಲಾ ವಿಕಲಚೇತನರ ಸಬಲೀಕರಣ ಇಲಾಖೆಯ ಅಧಿಕಾರಿ ರತ್ನಾ, ಕ್ರಿಯೇಟಿವ್ ಪಿಯು ಕಾಲೇಜಿನ ಸಹಸಂಸ್ಥಾಪಕ ಡಾ. ಗಣನಾಥ್ ಶೆಟ್ಟಿ ಹಾಗೂ ಅಶ್ವಥ್ ಎಸ್.ಎಲ್, ತುಳುನಾಡ ತುಳುವೆರ್ ಕೂಟದ ಆಶಾ ಹರೀಶ್ ಸುರತ್ಕಲ್, ವಿಶೇಷ ಮಕ್ಕಳ ಪಾಲಕರ ಸಂಘದ ಅಧ್ಯಕ್ಷ ಜಯವಿಠಲ್,ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ-ಶಿಕ್ಷಕೇತರರ ಸಂಘದ ಗೌರವಾಧ್ಯಕ್ಷೆ ಆಗ್ನೆಸ್ ಕುಂದರ್, ಪ್ರ. ಕಾರ್ಯದರ್ಶಿ ಡಾ. ವಸಂತ್ ಕುಮಾರ್ ಶೆಟ್ಟಿ, ಕಾರ್ಯಾಧ್ಯಕ್ಷೆ ಡಾ. ಕಾಂತಿ ಹರೀಶ್, ವಿಶೇಷ ಶಾಲೆಯ ಅಧ್ಯಕ್ಷ ಶಿವಕುಮಾರ್ ರಾಣೇಬೆನ್ನೂರ್, ಉಪಾಧ್ಯಕ್ಷ ರವೀಂದ್ರ ಹೆಚ್., ಕೋಶಾಧಿಕಾರಿ ಕರೆಪ್ಪ ಬಿ.ಹೆಚ್., ಸಾಧ್ಯ ಟ್ರಸ್ಟ್ನ ಮುಖ್ಯಸ್ಥೆ ಆರತಿ ಅಚ್ಚುಡ, ಉಡುಪಿ ವಿಶೇಷ ಶಿಕ್ಷಕರ ಸಂಘದ ಕಾರ್ಯದರ್ಶಿ ಶಶಿಕಲಾ ಕೋಟ್ಯಾನ್, ಸುರತ್ಕಲ್ ಲಯನ್ಸ್ ವಿಶೇಷ ಶಾಲೆಯ ಮುಖ್ಯಸ್ಥೆ ಸೌಮ್ಯ ದೇವಾಡಿಗ, ಹಿರ್ಗಾನ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ ಭಾಗವಹಿಸಿದ್ದರು. ವಿಜೇತ ವಿಶೇಷ ಶಾಲೆಯ ಆಡಳಿತ ವಿಶ್ವಸ್ಥ ಹರೀಶ್ ಮತ್ತು ಸಿಎಸ್ಆರ್ ಮುಖ್ಯಸ್ಥರಾದ ಜಯಾನಂದ್ ಪೀಟರ್ ಇದ್ದರು.