ಎಲ್.ಎಸ್. ಶ್ರೀಕಾಂತ್
ನಗರದ ಜೆ.ಕೆ. ಮೈದಾನಲ್ಲಿ ಭಾನುವಾರ ನಡೆದ ಶ್ವಾನ ಪ್ರದರ್ಶನಕ್ಕೆ ಭಾರಿ ಜನಸ್ತೋಮವೇ ಸೇರಿದ್ದರಿಂದ ಮೈದಾನದೊಳಗೆ ಬರಲು ಸಾರ್ವಜನಿಕರು, ವಾಹನ ನಿಲುಗಡೆಗಾಗಿ ಪರದಾಡಿದರು.
ತಮ್ಮ ಮುದ್ದು ಮುದ್ದಾದ ಶ್ವಾನಗಳನ್ನು ಕರೆ ತಂದಿದ್ದ ಮಾಲೀಕರು ಮತ್ತು ಶ್ವಾನ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರು, ಪ್ರಾಣಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಲ್ಲಿ ಬಂದ ಕಾರಣ ಕಿರಿಕಿರಿ ಉಂಟಾಯಿತು.ಜೆ.ಕೆ. ಮೈದಾನಕ್ಕೆ ಬರುವುದಕ್ಕೆ ಬಹಳ ಸಾಹಸ ಪಡುತ್ತಿದ್ದರು.
ವಾಹನ ನಿಲುಗಡೆಗೂ ತೊಂದರೆ
ಕಾರ್ಯಕ್ರಮ ಮುಕ್ತಾಯಗೊಂಡಿದ್ದ ಸ್ಥಳದಲ್ಲಿ ಹಾಕಲಾಗಿದ್ದ ಪೆಂಡಾಲ್ ಗಳನ್ನು ತೆರವು ಗೊಳಿಸಿದ್ದರೆ ಇಷ್ಟೊಂದು ಅವ್ಯವಸ್ಥೆಯಾಗುತ್ತಿರಲಿಲ್ಲ. ಮೈದಾನಕ್ಕೆ ಇನ್ನೊಂದು ದ್ವಾರವಿದ್ದಿದ್ದರೆ ಅನುಕೂಲವಾಗುತ್ತಿತ್ತು, ಒಟ್ಟಿನಲ್ಲಿ ಜೆ.ಕೆ. ಮೈದಾನದಿಂದ ಒಳ ಮತ್ತು ಹೊರಗಡೆ ಹೋಗಲು ಸಾರ್ವಜನಿಕ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು.
ವಿವಿಧ ಕಾರ್ಯಕ್ರಮಗಳನ್ನು ಜೆ.ಕೆ. ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಪ್ರದರ್ಶನ ಮಳಿಗೆ ಮತ್ತು ಅಕ್ವೇರಿಯಂ ಗ್ಯಾಲರಿ, ರೈತ ದಸರಾ ವಸ್ತು ಪ್ರದರ್ಶನ, ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ಒಂದೇಡೆ ಆಯೋಜಿಸುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಕೆಲವರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಹೋಗಿದ್ದರಿಂದ ಬೇರೆಯವರು ತಮ್ಮ ವಾಹನ ತೆಗೆದುಕೊಂಡು ಹೋಗಲು ಗಂಟೆಗಟ್ಟಲೆ ಕಾದರು.
ಒಂದೆಡೆ ಒಂದು ಪ್ರದರ್ಶನ ಆಯೋಜಿಸಿದರೆ ಜನರಿಗೆ ವೀಕ್ಷಿಸಲು ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ವಾದವಾಗಿತ್ತು.