ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸಾರ್ವಜನಿಕರು ಆರೋಗ್ಯದ ಬಗ್ಗೆ ಗಮನಹರಿಸಬೇಕು. ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕು. ಇದರಿಂದ ಮೊದಲ ಹಂತದಲ್ಲೇ ಆರೋಗ್ಯ ಸಮಸ್ಯೆಯನ್ನು ಕಂಡು ಹಿಡಿಯಲು ಸಾಧ್ಯವಾಗುತ್ತದೆ ಎಂದು ಡಾ. ಅಬ್ದುಲ್ ಬಶೀರ್ ವಿ.ಕೆ ತಿಳಿಸಿದರು.ಹ್ಯುಮಾನಿಟಿ ವೆಲ್‌ನೆಸ್ ಸೆಂಟರ್ ನೇತೃತ್ವದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ತಾಲೂಕು ಘಟಕದ ವತಿಯಿಂದ ಜನಪ್ರಿಯ ಆಸ್ಪತ್ರೆ ಹಾಸನ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಿಮ್ಸ್ ಆಸ್ಪತ್ರೆ ಹಾಸನ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಚೇರ್ಮನ್ ಭರತ್ ಕುಮಾರ್ ಎಚ್ . ಜಿ ಮಾತನಾಡಿ, ಹಲವಾರು ಜಿಲ್ಲೆಗಳಲ್ಲಿ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವು ವಿವಾದಾತ್ಮಕವಾಗಿ ನೆರವೇರುತ್ತದೆ. ಇಂಥ ಸಂದರ್ಭದಲ್ಲಿ ಈ ದಿನ ಹ್ಯುಮಾನಿಟಿ ವೆಲ್‌ನೆಸ್ ಸೆಂಟರ್ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ತಾಲೂಕು ಘಟಕವು ಸರ್ವ ಧರ್ಮವು ಸಮನ್ವಯ ಎಂಬ ನಿಟ್ಟಿನಲ್ಲಿ ತಾಲೂಕಿನ ಸರ್ವರಿಗೂ ಉಚಿತ ಆರೋಗ್ಯ ತಪಾಸಣಾ ನಡೆಸುವ ಅತ್ಯುತ್ತಮ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಶಿಬಿರದಲ್ಲಿ ಉಚಿತವಾಗಿ ಬಿ.ಪಿ ಶುಗರ್, ಕಣ್ಣಿನ ತಪಾಸಣೆ, ಹೃದಯ ತಪಾಸಣೆ, ಮೂಳೆ ಹಾಗೂ ಕೀಲು ತಪಾಸಣೆ, ದಂತ ತಪಾಸಣೆ, ಮಕ್ಕಳ ತಜ್ಞರು, ನರರೋಗ ತಜ್ಞರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಫಿಜಿಷಿಯನ್, ಶಸ್ತ್ರಚಿಕಿತ್ಸೆ ತಜ್ಞರು ಹಾಗೂ ಇತರೆ ಕಾಯಿಲೆಗಳಿಗೆ ವೈದ್ಯರು ಲಭ್ಯವಿರುವಂತೆ ಮತ್ತು ಉಚಿತ ಔಷಧಿಯನ್ನು ನೀಡುವ ವ್ಯವಸ್ಥೆಯನ್ನು ಈ ಸಂಸ್ಥೆಗಳು ಆಯೋಜಿಸಿದ್ದು 283 ಸಾರ್ವಜನಿಕರು ಇದರ ಅನುಕೂಲವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.ತಾಲೂಕು ಆರೋಗ್ಯ ಅಧಿಕಾರಿ ಡಾ. ತೇಜಸ್ವಿನಿ ಮಾತನಾಡಿ, ಈ ಶಿಬಿರದಲ್ಲಿ ಹಲವಾರು ಕಾಯಿಲೆಗಳಿಗೆ ಉಚಿತ ತಪಾಸಣೆಯೊಂದಿಗೆ ಉಚಿತ ಔಷಧಿಯನ್ನು ವ್ಯವಸ್ಥೆ ಮಾಡಿರುವುದು ಖುಷಿಯ ವಿಚಾರ ಹಾಗೂ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಶಿಬಿರದ ಅನುಕೂಲವನ್ನು ಪಡೆದುಕೊಳ್ಳುತ್ತಿದ್ದಾರೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ತಾಲೂಕಿನಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ ಎಂದು ತಿಳಿಸಿದರು.ಮುಸೇಬ್ರರವರು ಮಾತನಾಡಿ, ಈ ಕಾರ್ಯಕ್ರಮವು ವೈಯಕ್ತಿಕವಾಗಿ ನಮಗೆ ಬಹಳ ಖುಷಿ ಕೊಟ್ಟಿದೆ ಕಾರಣ ಸರ್ವ ಧರ್ಮವನ್ನು ಜೊತೆಗೂಡಿ ಬೃಹತ್ ಆರೋಗ್ಯ ಶಿಬಿರವನ್ನು ನಡೆಸುತ್ತಿರುವುದು ಎಲ್ಲಾ ಜಿಲ್ಲೆಗಳಿಗೂ ಮಾದರಿಯಾಗಬೇಕು ಹಾಗೂ ಉಚಿತ ಆರೋಗ್ಯ ಶಿಬಿರಗಳು ಎಲ್ಲಾ ಜಿಲ್ಲೆಗಳು ಹಾಗೂ ತಾಲೂಕಿನಲ್ಲಿ ಹೆಚ್ಚಾಗಬೇಕು ಎಂದು ಅಭಿಪ್ರಾಯವನ್ನು ತಿಳಿಸಿದರು.ಮಾತೃಭೂಮಿ ವೃದ್ಧಾಶ್ರಮ ಮುಖ್ಯಸ್ಥ ಜೈಹಿಂದ್ ನಾಗಣ್ಣ ಮಾತನಾಡಿ, ಸಮಾಜಕ್ಕೆ ಉತ್ತಮ ಸಂದೇಶ ಎಂದು ಭಾವಿಸುತ್ತೇನೆ ಕಾರಣ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸುತ್ತಿರುವುದು ಖುಷಿಯ ವಿಚಾರ. ಈ ಕಾರ್ಯಕ್ರಮವನ್ನು ಆಯೋಜಿಸಿದ ಹ್ಯುಮಾನಿಟಿ ವೆಲ್‌ನೆಸ್ ಸಂಸ್ಥೆ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ತಾಲೂಕು ಘಟಕ ಚನ್ನರಾಯಪಟ್ಟಣದ ಸರ್ವ ಸದಸ್ಯರಿಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ತಿಳಿಸಿದರು.ಹ್ಯುಮಾನಿಟಿ ವೆಲ್‌ನೆಸ್ ಸೆಂಟರ್ ಅಧ್ಯಕ್ಷ ಬಿಲಾಲ್, ಸಹರಾ ಫೌಂಡೇಶನ್ ಮುಖ್ಯಸ್ಥ ಇಮ್ರಾನ್, ಅಫೀಫ, ಮಕ್ಕಳ ತಜ್ಞ ಡಾ. ಪವನ್, ಅನಿತಾ, ಡಾ. ಫೈಝಲ್, ಡಾ.ಶ್ರೇಯಸ್, ಡಾ. ಅತೀಶ್, ಡಾ. ನಿಸರ್ಗ, ಡಾ. ರಂಜಿತ, ಡಾ. ಅವನಿ, ಡಾ. ವೈಷ್ಣವಿ, ಡಾ.ರಾಣಿ, ಡಾ. ಹರ್ಷ ಹಾಗೂ ಚಂದನ್, ಜನಪ್ರಿಯ ಆಸ್ಪತ್ರೆ ಸಿಬ್ಬಂದಿ ಹಾಗೂ ಹ್ಯುಮಾನಿಟಿ ವೆಲ್‌ನೆಸ್ ಸೆಂಟರ್ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
==============ಫೊಟೋ:
ಕಾರ್ಯಕ್ರಮವನ್ನು ಜನಪ್ರಿಯ ಆಸ್ಪತ್ರೆ ಮುಖ್ಯಸ್ಥ ಡಾ. ಅಬ್ದುಲ್ ಬಶೀರ್ ವಿ.ಕೆ, ಭರತ್ ಕುಮಾರ್ ಎಚ್.ಜಿ, ಡಾ. ತೇಜಸ್ವಿನಿ, ಮುಸೇಬ, ನಾಗಣ್ಣ ಹಾಗೂ ವೇದಿಕೆ ಗಣ್ಯರು ಉದ್ಘಾಟಿಸಿದರು.