ವಿದ್ಯಾರ್ಥಿಗಳ ಜೀವನದಲ್ಲಿ ಪಿಯುಸಿ ಪ್ರಮುಖ ಘಟ್ಟ

KannadaprabhaNewsNetwork |  
Published : Jul 20, 2025, 01:15 AM IST
ಪೋಟೋ 1 : ದಾಬಸ್‍ಪೇಟೆ ಪಟ್ಟಣದ ಜ್ಞಾನಸಂಗಮ ಹಾಗೂ ಸಿದ್ದಗಂಗಾ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಹಮ್ಮಿಕೊಂಡಿದ್ದ ಜ್ಞಾನಚಿಗುರು-2025 ಕಾರ್ಯಕ್ರಮವನ್ನು ಸರಿಗಮಪ ಸೀಸನ್ 17ರ ವಿಜೇತ ಅಶ್ವಿನ್ ಶರ್ಮಾ ಉದ್ಘಾಟಿಸಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಪಿಯುಸಿ ವ್ಯಾಸಂಗ ಭೌತಿಕ ಮತ್ತು ಮಾನಸಿಕ ಬದಲಾವಣೆ ತರುವ, ಬದುಕಿಗೆ ಬುನಾದಿ ಹಾಕುವ ಹಂತವಾಗಿದೆ. ವಿದ್ಯಾರ್ಥಿಗಳು ಕಷ್ಟಪಟ್ಟರೆ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಿದ್ದು, ವಿದ್ಯಾರ್ಥಿಗಳು ಪೋಷಕರ ಕಷ್ಟ ಅರಿತು ಉತ್ತಮ ವ್ಯಾಸಂಗ ಮಾಡಿ ಎಂದು ಸರಿಗಮಪ ಸೀಸನ್ 17ರ ವಿಜೇತ ಅಶ್ವಿನ್ ಶರ್ಮಾ ಹೇಳಿದರು.

ದಾಬಸ್‍ಪೇಟೆ: ಪಿಯುಸಿ ವ್ಯಾಸಂಗ ಭೌತಿಕ ಮತ್ತು ಮಾನಸಿಕ ಬದಲಾವಣೆ ತರುವ, ಬದುಕಿಗೆ ಬುನಾದಿ ಹಾಕುವ ಹಂತವಾಗಿದೆ. ವಿದ್ಯಾರ್ಥಿಗಳು ಕಷ್ಟಪಟ್ಟರೆ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಿದ್ದು, ವಿದ್ಯಾರ್ಥಿಗಳು ಪೋಷಕರ ಕಷ್ಟ ಅರಿತು ಉತ್ತಮ ವ್ಯಾಸಂಗ ಮಾಡಿ ಎಂದು ಸರಿಗಮಪ ಸೀಸನ್ 17ರ ವಿಜೇತ ಅಶ್ವಿನ್ ಶರ್ಮಾ ಹೇಳಿದರು.

ಪಟ್ಟಣದಲ್ಲಿ ಜ್ಞಾನಸಂಗಮ ಹಾಗೂ ಸಿದ್ದಗಂಗಾ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಹಮ್ಮಿಕೊಂಡಿದ್ದ ಜ್ಞಾನಚಿಗುರು-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತನ್ನದೇ ಆದ ಸಾಮರ್ಥ್ಯವಿದ್ದು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಯಶಸ್ಸು ಗಳಿಸಲು ಸಾಧ್ಯ ಎಂದರು.

ಟ್ರಸ್ಟ್ ಅಧ್ಯಕ್ಷ ನಟರಾಜು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಪದವಿ ಗಳಿಸಿದ ನಂತರ ಕೆಲಸ ಮಾಡುವ ಪರಿಸರಕ್ಕೆ ಹೊಂದಿಕೊಂಡು ಕಾರ್ಯನಿರ್ವಹಿಸುವ ಚಾಕಚಕ್ಯತೆ ರೂಢಿಸಿಕೊಂಡು ಸೇವೆ ಸಲ್ಲಿಸುವ ಮನೋಭಾವನೆ ರೂಡಿಸಿಕೊಳ್ಳಿ ಎಂದರು.

ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜ್ಞಾನಸಂಗಮ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ನಟರಾಜು, ಕಾರ್ಯದರ್ಶಿ ಸುಜಾತ, ವಿವೇಕಾನಂದ ವಿದ್ಯಾಮಂದಿರ ಶಾಲೆಯ ಸಂಸ್ಥಾಪಕ ವಿರುಪಾಕ್ಷಯ್ಯ, ವಿಕೇರ್ ಇಂಟರ್ ನ್ಯಾಷನಲ್ ಶಾಲೆಯ ಸಂಸ್ಥಾಪಕ ರಾಜಶೇಖರ್, ಪ್ರಾಂಶುಪಾಲ ಪುನೀತ್, ಎಒ ದಕ್ಷಿಣಮೂರ್ತಿ, ಜಗದೀಶ್, ಶಂಕರಲಿಂಗಯ್ಯ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಪೋಟೋ 1 :

ದಾಬಸ್‍ಪೇಟೆ ಜ್ಞಾನಸಂಗಮ ಹಾಗೂ ಸಿದ್ದಗಂಗಾ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಹಮ್ಮಿಕೊಂಡಿದ್ದ ಜ್ಞಾನಚಿಗುರು-2025 ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ