ಪಿಯುಸಿ ಫಲಿತಾಂಶ: ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜ್ ಸಾಧನೆ

KannadaprabhaNewsNetwork | Published : Apr 10, 2025 1:15 AM

ಸಾರಾಂಶ

ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ೬೦೦ರಲ್ಲಿ ೫೯೯ ಅಂಕ ಪಡೆದ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಅಮೂಲ್ಯ ಕಾಮತ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಮೂಲ್ಯ ಕಾಮತ್ ಅವರು ಐದು ವಿಷಯಗಳಲ್ಲಿ ತಲಾ ೧೦೦ ಅಂಕ ಪಡೆದಿರುತ್ತಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ೬೦೦ರಲ್ಲಿ ೫೯೯ ಅಂಕ ಪಡೆದ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಅಮೂಲ್ಯ ಕಾಮತ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಮೂಲ್ಯ ಕಾಮತ್ ಅವರು ಐದು ವಿಷಯಗಳಲ್ಲಿ ತಲಾ ೧೦೦ ಅಂಕ ಪಡೆದಿರುತ್ತಾರೆ. ೬೦೦ರಲ್ಲಿ ೫೯೭ ಅಂಕ ಪಡೆದ ಕಾಲೇಜಿನ ಶ್ರೇಯಸ್ ಎಸ್. ತೃತೀಯ ಸ್ಥಾನ, ೫೯೬ ಅಂಕ ಪಡೆದ ಶಡ್ಜಯ್ ಎ.ಪಿ. ನಾಲ್ಕನೇ ಸ್ಥಾನ ಪಡೆದರೆ, ೫೯೫ ಅಂಕ ಪಡೆದ ಧನ್ಯತಾ ಗೌಡ ಕೆ., ವಚನ ಅಲ್ಲಮಪ್ರಭು ಬಾಗೋಡಿ, ಚಿನ್ಮಯಿ ಆರ್., ಯು. ರೋಹನ್ ಎಚ್. ಶೆಣೈ ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಾರೆ. ಹೀಗೆ ಮೊದಲ ಹತ್ತು ಸ್ಥಾನವನ್ನು ಸಂಸ್ಥೆಯ ೩೩ ವಿದ್ಯಾರ್ಥಿಗಳು ಪಡೆಯುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ್ದಾರೆ.ಒಟ್ಟು ೧,೬೩೪ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ. ೯೯ಕ್ಕಿಂತ ಅಧಿಕ ಅಂಕಗಳನ್ನು ೧೦ ವಿದ್ಯಾರ್ಥಿಗಳು ಪಡೆದ್ದಾರೆ. ಅದೇ ರೀತಿ ಶೇ. ೯೮ಕ್ಕಿಂತ ಅಧಿಕ ೫೫, ಶೇ. ೯೭ಕ್ಕಿಂತ ಅಧಿಕ ೧೩೮, ಶೇ. ೯೬ಕ್ಕಿಂತ ಅಧಿಕ ೨೬೪, ಶೇ. ೯೫ಕ್ಕಿಂತ ಅಧಿಕ ೩೭೯ ವಿದ್ಯಾರ್ಥಿಗಳು ಪಡೆದರೆ, ಶೇ.೯೦ಕ್ಕಿಂತ ಅಧಿಕ ೯೬೬, ಶೇ.೮೫ಕ್ಕಿಂತ ಅಧಿಕ ೧,೨೬೫ ಹಾಗೂ ಶೇ.೮೦ಕ್ಕಿಂತ ಅಧಿಕ ೧,೪೨೯ ವಿದ್ಯಾರ್ಥಿಗಳು ಪಡೆದಿದ್ದಾರೆ. ಪರೀಕ್ಷೆ ಬರೆದ ೧,೬೩೪ ವಿದ್ಯಾರ್ಥಿಗಳಲ್ಲಿ ೧,೬೨೭ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.೭ ವಿದ್ಯಾರ್ಥಿಗಳು ೪ ವಿಷಯಗಳಲ್ಲಿ, ೩೭ ವಿದ್ಯಾರ್ಥಿಗಳು ೩ ವಿಷಯಗಳಲ್ಲಿ, ೧೫೮ ವಿದ್ಯಾರ್ಥಿಗಳು ೨ ವಿಷಯಗಳಲ್ಲಿ ಹಾಗೂ ೩೦೫ ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿರುತ್ತಾರೆ. ಇನ್ನು ಫಿಸಿಕ್ಸ್‌ನಲ್ಲಿ ೪೨ ವಿದ್ಯಾರ್ಥಿಗಳು, ಕೆಮೆಸ್ಟ್ರಿಯಲ್ಲಿ ೬೨, ಬಯೋಲಾಜಿಯಲ್ಲಿ ೨೧೨, ಮ್ಯಾಥಮೆಟಿಕ್ಸ್‌ನಲ್ಲಿ ೧೯೨, ಕಂಪ್ಯೂಟರ್ ಸೈನ್ಸ್‌ನಲ್ಲಿ ೫, ಇಲೆಕ್ಟ್ರಾನಿಕ್ಸ್‌ನಲ್ಲಿ ೪, ಸ್ಟ್ಯಾಟ್‌ನಲ್ಲಿ ೬, ಹೋಮ್ ಸೈನ್ಸ್‌ನಲ್ಲಿ ೨, ಸಂಸ್ಕೃತದಲ್ಲಿ ೪೭ ಹಾಗೂ ಕನ್ನಡದಲ್ಲಿ ೫೭ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ.ಮಲ್ಲಾಂಬಿಕಾ ೫೯೪, ವಿಸ್ಮಯ ಹಿರೇಮಠ ೫೯೪, ಪ್ರೇಕ್ಷಾ ಅವಭ್ರತ ೫೯೪, ಲಿಖಿತಾ ಕೆ.ಎಸ್. ೫೯೩, ಪ್ರಗತಿ ಎಂ.ಡಿ. ೫೯೨, ಯಶಸ್ ಗೌಡ ಎಚ್.ಪಿ. ೫೯೨, ಎನ್.ಬಿ. ಸಾನಿಕಾ ೫೯೨, ಹನಿ? ಶೆಟ್ಟಿ ೫೯೨, ಶಾರ್ವರಿ ೫೯೨, ಶ್ರೇಯಾನ್ ಕೆ. ೫೯೨, ಅವನೀಶ್ ಬಿ. ೫೯೨, ಕಾರ್ತಿಕೇಯ ಆರ್. ಮಯ್ಯ ೫೯೨, ನೂತನ್ ಲೋಕೇಶ್ ೫೯೧, ಭುವನ ೫೯೧, ಸಾನ್ವಿ ಎಸ್. ಗೌಡ ೫೯೧, ಶ್ರೀ ಹ? ಎಚ್. ವೈ. ೫೯೧, ಭವಧರಣಿ ಜಿ. ೫೯೧, ಹೀರ್ ರೆನೀಶ್ ದೇಡಾಕಿಯಾ ೫೯೧, ಅಸ್ಮಿತಾ ಶೆಟ್ಟಿ ೫೯೧, ಪ್ರಜ್ವಲ್ ಕುಮಾರ್ ವಿ. ಎಸ್. ೫೯೦, ತನ್ವಿ ಹೇಮಂತ್ ೫೯೦, ನಿಖಿಲ್ ಸೊನ್ನದ್ ೫೯೦, ಎಂ. ಮಹಿತಾ ೫೯೦, ವಿಕಾಸ್ ಎಸ್. ಪೊಲೀಸ್ ಪಾಟೀಲ್ ೫೯೦, ಜಾಹ್ನವಿ ಶೆಣೈ ೫೯೦, ನಿಧಿ ಕೆ.ಜಿ.೫೯೦ ಅಂಕ ಪಡೆದಿದ್ದಾರೆ.ಯು.ರೋಹನ್ ಎಚ್. ಶೆಣೈ, ಮಲ್ಲಾಂಬಿಕಾ, ಪ್ರಗತಿ ಎಂ.ಡಿ., ಹನಿ? ಶೆಟ್ಟಿ, ಕಾರ್ತಿಕೇಯ ಆರ್.ಮಯ್ಯ, ಹೀರ್ ರೆನೀಶ್ ದೇಡಾಕಿಯಾ ನಾಲ್ಕು ವಿಷಯದಲ್ಲಿ ತಲಾ ೧೦೦ ಅಂಕ ಪಡೆದಿದ್ದಾರೆ.ಅಮೂಲ್ಯ ಕಾಮತ್ ಅವರ ಸಾಧನೆಯು ಅಭೂತಪೂರ್ವವಾಗಿದೆ. ಆಕೆಯ ಸಾಧನೆಯು ನಮಗೆ ಹೆಮ್ಮೆಯ ವಿಚಾರವಾಗಿದೆ. ಇದು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ. ಮೊದಲ ೧೦ ಸ್ಥಾನದಲ್ಲಿ ಸಂಸ್ಥೆಯ ೩೩ ವಿದ್ಯಾರ್ಥಿಗಳು ಇರುವುದು ಹೆಮ್ಮೆಯ ವಿಚಾರವಾಗಿದೆ. ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಅವರು, ಆಡಳಿತ ವರ್ಗ, ಪ್ರಾಂಶುಪಾಲರು, ಎಲ್ಲ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳ ಪರವಾಗಿ ಅಭಿನಂದಿಸಿರುತ್ತಾರೆ.ಪ್ರತೀ ವರ್ಷ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅದ್ವಿತೀಯ ಸಾಧನೆ ಮಾಡುತ್ತಿರುವ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆ ಈ ವರ್ಷವೂ ಅದೇ ಸಾಧನೆಯ ಹಾದಿಯಲ್ಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್ ಅಭಿಪ್ರಾಯಪಟ್ಟಿದ್ದಾರೆ.

Share this article