ಸಿದ್ಧೇಶ್ವರ ಶ್ರೀಗಳ ವಿಶ್ರಾಂತಿ ಧಾಮ ಗುರುದೇವ ಆಶ್ರಮದ ಪೂಜೆ

KannadaprabhaNewsNetwork |  
Published : Feb 20, 2024, 01:49 AM IST
ಸಿದ್ಧೇಶ್ವರ ಸ್ವಾಮೀಜಿ ಭಾವಚಿತ್ರಕ್ಕೆ ಸುತ್ತೂರು ಶ್ರೀಗಳು ಪೂಜೆ ಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ವಿಜಯಪುರ:ಈ ಶತಮಾನದ ಸಂತ ಸಿದ್ಧೇಶ್ವರ ಸ್ವಾಮೀಜಿಯವರು ಇಷ್ಟಪಡುತ್ತಿದ್ದ ಪ್ರಕೃತಿಯ ವಾತಾವರಣದಂತೆ 4ಎಕರೆಯಲ್ಲಿ ಆಶ್ರಮ ನಿರ್ಮಿಸಲಾಗಿದ್ದು, ಆಶ್ರಮಕ್ಕೆ ಸುತ್ತೂರು ಮಠದ ದೇಶಿ ಕೇಂದ್ರ ಸ್ವಾಮೀಜಿಗಳು ಗುರುದೇವಾಶ್ರಮ, ಗುರುದೇವಪುರ ಎಂದು ನಾಮಕರಣ ಮಾಡಿದ್ದಾರೆ.

ವಿಜಯಪುರ:ಈ ಶತಮಾನದ ಸಂತ ಸಿದ್ಧೇಶ್ವರ ಸ್ವಾಮೀಜಿಯವರು ಇಷ್ಟಪಡುತ್ತಿದ್ದ ಪ್ರಕೃತಿಯ ವಾತಾವರಣದಂತೆ 4ಎಕರೆಯಲ್ಲಿ ಆಶ್ರಮ ನಿರ್ಮಿಸಲಾಗಿದ್ದು, ಆಶ್ರಮಕ್ಕೆ ಸುತ್ತೂರು ಮಠದ ದೇಶಿ ಕೇಂದ್ರ ಸ್ವಾಮೀಜಿಗಳು ಗುರುದೇವಾಶ್ರಮ, ಗುರುದೇವಪುರ ಎಂದು ನಾಮಕರಣ ಮಾಡಿದ್ದಾರೆ. ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಗುರುದೇವ ಕೋಲ್ಡ್ ಚೈನ್ ಸ್ಟೋರೇಜ್ ಮಾಲೀಕ ವಿಠ್ಠಲಗೌಡ ಬಿರಾದಾರ ಈ ವಿಶ್ರಾಂತಿಧಾಮ ನಿರ್ಮಿಸಿದ್ದಾರೆ. ಶ್ರೀಗಳು ಈ ಹಿಂದೆ ಹಲವಾರು ಬಾರಿ ಭೇಟಿ ನೀಡಿ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರಂತೆ. ಹೀಗಾಗಿ ಅವರ ಆಶಯದಂತೆ ಗುರುದೇವಪುರ ಎಂದು ಹೆಸರಿಟ್ಟು ಅದಕ್ಕೆ ಗುರುದೇವ ಆಶ್ರಮಮೆಂದು ನಾಮಪಕರಣ ಮಾಡಲಾಗಿದೆ. ಶ್ರೀಗಳ ಆಶಯದಂತೆ ಆಶ್ರಮದಲ್ಲಿ ರಾಸಾಯನಿಕ ಗೊಬ್ಬರ ಬಳಸದೆ ಸಿರಿಧಾನ್ಯ, ನೈಸರ್ಗಿಕವಾಗಿ ಹಣ್ಣುಗಳು ಬೆಳೆಯುವುದು, ಹೂವಿನ ತೋಟ ನಿರ್ಮಾಣ, ವನಸ್ಪತಿ ಔಷಧೀಯ ಸಸ್ಯಗಳನ್ನು ಬೆಳೆಸುವುದು ಮಾಡಲಾಗುತ್ತಿದೆ ಎಂದು ವಿಠ್ಠಲ ಬಿರಾದಾರ ತಿಳಿಸಿದ್ದಾರೆ. ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ, ಅಮೃತಾನಂದ ಶ್ರೀ ಹಾಗೂ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ