ಭೋವಿ ಶ್ರೀಗಳ ನೇತೃತ್ವದಲ್ಲಿ ಭದ್ರೆಗೆ ಪೂಜೆ

KannadaprabhaNewsNetwork |  
Published : Sep 14, 2026, 01:15 AM IST
ಚಿತ್ರದುರ್ಗ ಮೂರನೇ ಪುಟಕ್ಕೆ    | Kannada Prabha

ಸಾರಾಂಶ

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭದ್ರೆಗೆ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಗೋನೂರು ಸಮೀಪ ಭದ್ರಾ ಕಾಲುವೆ ಬಳಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭದ್ರೆಗೆ ಪೂಜೆ ಸಲ್ಲಿಸಿ ಸ್ವಾಗತಿಸಿದರು. ಶಾಸಕ ಎಂ.ಚಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಅನೇಕ ದಶಕಗಳ ವೈಯಕ್ತಿಕ ಬದುಕು ನಿರ್ಲಕ್ಷಿಸಿ ನಿರಂತರ ಹೋರಾಟ ನಡೆಸಿದ ಫಲ ಜಿಲ್ಲೆಗೆ ಭದ್ರೆ ಆಗಮನವಾಗಿದೆ. ನೀರು ಹರಿಯುವ ದೃಶ್ಯ ಜಿಲ್ಲೆಯ ಜನರಲ್ಲಿ ಸಿಹಿ ವಾತಾವರಣಕ್ಕೆ ಕಾರಣವಾಗಿದೆ. ಈ ಸಿಹಿ ಹಿಂದೆ ಅನೇಕ ಕಹಿ ಘಟನೆಗಳು ನಡೆದಿವೆ. ಹೋರಾಟದ ಹಾದಿಯಲ್ಲಿ ಅನೇಕ ಮಹನೀಯರು ನಮ್ಮನ್ನು ಅಗಲಿದ್ದು, ಭದ್ರೆ ನೀರು ಹರಿಯುವ ದೃಶ್ಯ ಕಣ್ತುಂಬಿಕೊಳ್ಳುವ ಭಾಗ್ಯದಿಂದ ವಂಚಿತರಾಗಿದ್ದಾರೆ. ಇನ್ನಷ್ಟು ಮಂದಿ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅವರೆಲರನ್ನೂ

ನಮ್ಮ ಉಸಿರು-ಹಸಿರಿನಲ್ಲಿ ಸ್ಮರಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ಸಿಹಿ ಹಂಚಿಕೆಗೆ ಚಾಲನೆ ನೀಡಿದ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಜಿಲ್ಲೆಯ ಜನರ ಬಹುವರ್ಷಗಳ ಕಾಲದ ಕನಸು ಈಡೇರಿದೆ. ಅನೇಕ ಅಡ್ಡಿ ಆತಂಕಗಳನ್ನು ದಾಟಿಕೊಂಡು ಭದ್ರೆ ನೀರು ಜಿಲ್ಲೆ ಪ್ರವೇಶಿಸಿದೆ ಎಂದು ತಿಳಿಸಿದರು.

ಅಬ್ಬಿನಹೊಳಲು ಬಳಿ ಭೂಮಿ ನೀಡಲು ವಿರೋಧಿಸಿದ್ದ ರೈತರ ಮನವೊಲಿಸುವಲ್ಲಿ ನಾನು ಸೇರಿ ಅನೇಕರು ಶ್ರಮಪಟ್ಟಿದ್ದೇವು. ಹೆಗ್ಗಡೆಹಳ್ಳಿ ಸಮೀಪ ಬೃಹತ್ ಬಂಡೆ ನೀರು ಹರಿಯಲು ಅಡ್ಡಿಯಾಗಿತ್ತು. ಅದನ್ನು ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆ ಆಗದ ರೀತಿ ಸ್ಫೋಟಗೊಳಿಸುವ ಸವಾಲು ಯಶಸ್ವಿಗೊಳಿಸಿದ್ದು, ಈ ವಿಷಯದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ವೇಳೆ ಡಿ.ಕೆ.ಶಿವಕುಮಾರ್ ಬದ್ಧತೆ ನಿಜಕ್ಕೂ ಸ್ಮರಣೀಯ. ಅವರು ಈಗ ಮುಖ್ಯಮಂತ್ರಿಯಾಗಿ ಗೋನೂರಿಗೆ ಪೂಜೆ ಸಲ್ಲಿಸಲು ಸೆ.24ಕ್ಕೆ ಆಗಮಿಸುತ್ತಿರುವುದು ಸಂತಸ ತಂದಿದೆ ಎಂದರು.

ಮಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಪ್ರಾಸ್ತಾವಿಕ ಮಾತನಾಡಿದರು. ಮಹಾಲಿಂಗ ಸ್ವಾಮೀಜಿ, ಸಿದ್ಧಬಸವ ಕಬೀರಾ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ, ಬಸವ ಭೃಂಗೇಶ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ ಸಿಹಿ ವಿತರಣೆ ದಾಸೋಹಿಗಳಾದ ಗೋಡೆಮನೆ ಹನುಮಂತಪ್ಪ, ತಾಪಂ ಇಒ ವೈ.ರವಿಕುಮಾರ್, ಮಾಜಿ ಸದಸ್ಯ ಎಚ್.ಆಂಜನೇಯ, ನಗರಸಭೆ ಮಾಜಿ ಸದಸ್ಯ ಈ.ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ನಿರಂಜನ್, ಎಚ್.ಲಕ್ಷ್ಮಣ್, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ ಜೋಗಿಮಟ್ಟಿ ಈ.ಮಹೇಶಬಾಬು, ಪ್ರಹ್ಲಾದ್, ಪತ್ರಕರ್ತ ಸಂಘದ ರಾಜ್ಯ ಸಮಿತಿ ಸದಸ್ಯ ಸಿದ್ದರಾಜು, ನಿರ್ದೇಶಕ ಕೋಗುಂಡೆ ಮಠ, ಟಿ.ಎಂ.ಪ್ರದೀಪ್‌ಕುಮಾರ್, ಫಣಿಯಪ್ಪ, ಕೆಪಿಎಂ ಗಣೇಶಯ್ಯ, ಆನಂದ್, ಇಂಜಿನಿಯರ್ ಗಂಗೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುರಾತನ ಪರಂಪರೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ
ಎಕರೆಗೆ 20 ಸಾವಿರ ಪರಿಹಾರ ನೀಡಿ: ಜಿ.ಸಿ.ಶಂಕರಪ್ಪ ಒತ್ತಾಯ