ಅಂಜನಾದ್ರಿಯಲ್ಲಿ ಜಿಲ್ಲಾಡಳಿತದಿಂದಲೇ ಪೂಜಾ ಕೈಂಕರ್ಯ

KannadaprabhaNewsNetwork |  
Published : Oct 30, 2026, 02:45 AM IST
ಅಂಜನಾದ್ರಿ ದೇಗುಲದ ಆಂಜನೇಯ ಸ್ವಾಮಿ | Kannada Prabha

ಸಾರಾಂಶ

ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ದೇಗುಲದ ಆಂಜನೇಯಸ್ವಾಮಿ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಚಚಟುವಟಿಕೆ ಜಿಲ್ಲಾಡಳಿತದಿಂದಲೇ ಪ್ರಾರಂಭವಾಗಿದೆ. ಅರ್ಚಕ ವಿದ್ಯಾದಾಸ ಬಾಬಾ ನೇಮಕ ಮಾಡಿದ್ದ ಸಿಬ್ಬಂದಿ ಮತ್ತು ತನ್ನ ವ್ಯಾಪ್ತಿಗೆ ಪಡೆದಿದ್ದ ಕಚೇರಿ ಬೀಗ ತೆರವುಗೊಳಿಸಲಾಗಿದೆ.

ಗಂಗಾವತಿ: ಸಮೀಪದ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ದೇಗುಲದ ಆಂಜನೇಯಸ್ವಾಮಿ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಚಚಟುವಟಿಕೆ ಜಿಲ್ಲಾಡಳಿತದಿಂದಲೇ ಪ್ರಾರಂಭವಾಗಿದೆ.

ಉಚ್ಚ ನ್ಯಾಯಲಯ ತನ್ನ ಪರವಾಗಿ ಆದೇಶ ನೀಡಿದೆ ಎಂಬ ಕಾರಣಕ್ಕೆ ವಿದ್ಯಾದಾಸ ಬಾಬಾ ಅವರು ಜಿಲ್ಲಾಡಳಿತ ನೇಮಕ ಮಾಡಿದ್ದ ಸಿಬ್ಬಂದಿಯನ್ನು ಹೊರಕ್ಕೆ ಹಾಕಿದ್ದಲ್ಲದೆ, ಕಚೇರಿ ಬೀಗ ಹಾಕಿ ದೇಗುಲವನ್ನು ತಮ್ಮ ನಿಯಂತ್ರಣಕ್ಕೆ ಪಡೆದಿದ್ದರು. ಬುಧವಾರ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಆಗಮಿಸಿದ್ದ ಜಿಲ್ಲಾಡಳಿತ ತಂಡ ಅರ್ಚಕ ವಿದ್ಯಾದಾಸ ಬಾಬಾ ನೇಮಕ ಮಾಡಿದ್ದ ಸಿಬ್ಬಂದಿ ಮತ್ತು ತನ್ನ ವ್ಯಾಪ್ತಿಗೆ ಪಡೆದಿದ್ದ ಕಚೇರಿ ಬೀಗ ತೆರವುಗೊಳಿಸಿ ಮತ್ತೆ ಜಿಲ್ಲಾಡಳಿತದಿಂದಲೇ ಎಲ್ಲ ಧಾರ್ಮಿಕ ಕಾರ್ಯಕ್ರಮ ಪ್ರಾರಂಭಿಸಿದ್ದಾರೆ.ಬಾಬಾ ಗೈರು: ವಿದ್ಯಾದಾಸ ಬಾಬಾ ಅವರಿಗೆ ಕೇವಲ ಪೂಜೆ ಹಾಗೂ ವಸತಿ ಸೌಕರ್ಯ ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಜಿಲ್ಲಾಡಳಿತ ಮತ್ತೆ ತನ್ನ ವ್ಯಾಪ್ತಿಗೆ ದೇಗುಲ ಪಡೆದಿದ್ದರಿಂದ ಬಾಬಾ ಅವರು ದೇಗುಲದಲ್ಲಿ ಇರದೆ ಪೂಜೆಗೆ ಗೈರು ಆಗಿದ್ದಾರೆ. ಸಹಾಯಕ ಅರ್ಚಕರಿಂದ ಪೂಜೆ ನಡೆದಿದೆ.

ಅಂಜನಾದ್ರಿ ವಿವಾದ: ಜಿಲ್ಲಾಡಳಿತದ ವಿರುದ್ಧ ಕೋರ್ಟ್‌ ಮೊರೆ

ಅಂಜನಾದ್ರಿ ದೇವಸ್ಥಾನದ ವಿಚಾರದಲ್ಲಿ ಜಿಲ್ಲಾಡಳಿತವು ಹೈಕೋರ್ಟ್‌ ತೀರ್ಪನ್ನು ಉಲ್ಲಂಘಿಸಿದ್ದು, ಅಧಿಕಾರ ದುರುಪಯೋಗಪಡಿಸಿಕೊಂಡು ದೇವಸ್ಥಾನದ ಮೇಲಿನ ಬೋರ್ಡ್‌ಗಳನ್ನು ತೆರವುಗೊಳಿಸಿದೆ. ಈ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ವಿದ್ಯಾದಾಸ ಬಾಬಾ ಅವರ ಕಾನೂನು ಸಲಹೆಗಾರ ವಿನೋದ ಸಿಂಗ್‌ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಪೊಲೀಸ್‌ ಬಲದೊಂದಿಗೆ ದೇವಸ್ಥಾನಕ್ಕೆ ಆಗಮಿಸಿ, ವಿದ್ಯಾದಾಸ ಬಾಬಾ ಅವರು ಅಳವಡಿಸಿದ್ದ ಬೋರ್ಡ್‌ಗಳನ್ನು ತೆರವುಗೊಳಿಸಿದೆ. ಕೊಠಡಿಗಳ ಬೀಗಗಳನ್ನು ತೆಗೆದುಹಾಕಿದ್ದು, ಬಾಬಾ ಅವರ ಮೇಲೆ ದೌರ್ಜನ್ಯ ಎಸಗಲಾಗಿದೆ. ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೂ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದರು.ಅಂಜನಾದ್ರಿಯನ್ನು ಜಿಲ್ಲಾಡಳಿತದ ಸುಪರ್ದಿಗೆ ಪಡೆಯಲು 2018ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ. ಅದಕ್ಕೂ ಮೊದಲಿನಿಂದಲೇ ವಿದ್ಯಾದಾಸ ಬಾಬಾ ಅವರು ಅಂಜನಾದ್ರಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತವು ಬೋರ್ಡ್‌ಗಳನ್ನು ತೆರವುಗೊಳಿಸಲು ಮತ್ತು ಕೊಠಡಿಗಳ ಬೀಗಗಳನ್ನು ತೆಗೆದುಹಾಕಲು ಯಾವ ಅಧಿಕಾರ ಹೊಂದಿದೆ ಎಂದು ಪ್ರಶ್ನಿಸಿದರು.

ಹೈಕೋರ್ಟ್‌ ಅಧಿಸೂಚನೆಯನ್ನೇ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕಾನೂನಿನ ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕು. ನ್ಯಾಯಾಲಯದ ಮುಂದೆ ತನ್ನ ಅಭಿಪ್ರಾಯವನ್ನು ಮಂಡಿಸಲು ಅವಕಾಶವಿದ್ದರೂ, ಇತ್ತೀಚೆಗೆ ಜಿಲ್ಲಾಡಳಿತ ನಡೆದುಕೊಂಡಿರುವ ರೀತಿ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ಹೈಕೋರ್ಟ್‌ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ಉತ್ತರಿಸಬೇಕಾಗುತ್ತದೆ. ಅಗತ್ಯಬಿದ್ದರೆ ಸುಪ್ರೀಂ ಕೋರ್ಟ್‌ವರೆಗೂ ಕಾನೂನು ಹೋರಾಟ ನಡೆಸಲಾಗುವುದು. ಜಿಲ್ಲಾಡಳಿತವು ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಬೇಕು. ಪೊಲೀಸ್‌ ಬಲವನ್ನು ದುರುಪಯೋಗಪಡಿಸಿಕೊಳ್ಳಬಾರದು. ಜಿಲ್ಲಾಡಳಿತದ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ವಿನೋದ ಸಿಂಗ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು