ಹಿರಿಯೂರು ಗೆಲುವಿಗಾಗಿ ರೈತರ ಕಣ್ಣಿಗೆ ಮಣ್ಣೆರಚಾಟ: ಹರೀಶ್

KannadaprabhaNewsNetwork |  
Published : Nov 29, 2026, 01:45 AM IST
ಹರಿಹರ ಕಡ್ಡಾಯವಾಗಿ ತೆಗೆದುಕೊಳ್ಳಿ. | Kannada Prabha

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀರಾವರಿ ನಿಯಮಗಳನ್ನು ಗಾಳಿಗೆ ತೂರಿ, ಹಿರಿಯೂರು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು, ಭದ್ರಾ ಅಚ್ಚುಕಟ್ಟು ಪ್ರದೇಶದ ಅನ್ನದಾತರ ಕಣ್ಣಿಗೆ ಮಣ್ಣನ್ನು ಎರಚುವುದರೊಂದಿಗೆ, ಕ್ಷೇತ್ರದ ಅನ್ನದಾತರನ್ನು ವಂಚಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸದ್ಯದಲ್ಲಿಯೇ ಫ್ರೀಡಂ ಪಾರ್ಕನಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಹರಿಹರ ಶಾಸಕ ಬಿ.ಪಿ ಹರೀಶ್ ಹೇಳಿದ್ದಾರೆ.

- ಕಾಂಗ್ರೆಸ್ ಸರ್ಕಾರ ವಿರುದ್ಧ ಸದ್ಯದಲ್ಲೇ ಫ್ರೀಡಂ ಪಾರ್ಕಲ್ಲಿ ಉಗ್ರ ಪ್ರತಿಭಟನೆ ಎಚ್ಚರಿಕೆ । ಹರಿಹರದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ- - - ಕನ್ನಡಪ್ರಭ ವಾರ್ತೆ ಹರಿಹರ

ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀರಾವರಿ ನಿಯಮಗಳನ್ನು ಗಾಳಿಗೆ ತೂರಿ, ಹಿರಿಯೂರು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು, ಭದ್ರಾ ಅಚ್ಚುಕಟ್ಟು ಪ್ರದೇಶದ ಅನ್ನದಾತರ ಕಣ್ಣಿಗೆ ಮಣ್ಣನ್ನು ಎರಚುವುದರೊಂದಿಗೆ, ಕ್ಷೇತ್ರದ ಅನ್ನದಾತರನ್ನು ವಂಚಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸದ್ಯದಲ್ಲಿಯೇ ಫ್ರೀಡಂ ಪಾರ್ಕನಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಹರಿಹರ ಶಾಸಕ ಬಿ.ಪಿ ಹರೀಶ್ ಹೇಳಿದರು.

ಜನಸಾಮಾನ್ಯರ ಮೇಲೆ ನಿರಂತರವಾಗಿ ಬೆಲೆ ಏರಿಕೆಯ ಹೊರೆ ಹೇರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ, ಬಿಜೆಪಿ ರಾಜ್ಯ ಘಟಕ, ದಾವಣಗೆರೆ ಜಿಲ್ಲಾ ಘಟಕ, ಹರಿಹರ ಮಂಡಲ ಮತ್ತು ಗ್ರಾಮಾಂತರ ಘಟಕಗಳು ಶನಿವಾರ ಕರೆ ನೀಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದ ಅವರು ಮಾತನಾಡಿದರು.

ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರದ ಗದ್ದುಗೆಯನ್ನು ಏರಿದ್ದಾಗಿನಿಂದ, ಅವರಿಗೆ ಅಧಿಕಾರದ ಮದ ಏರಿದೆ. ಈಗ ಅವರ ಕಣ್ಣುಗಳು ನೆತ್ತಿಯ ಮೇಲಿವೆ. ರಾಜ್ಯದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಎಂದು ಉಚಿತ ಗ್ಯಾರಂಟಿ ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದು, ಗ್ಯಾರಂಟಿ ಹೆಸರಿನಲ್ಲಿ ಖಜಾನೆ ಖಾಲಿ ಮಾಡಿದ್ದಾರೆ. ತಮ್ಮ ಬೇಡಿಕೆಗಳಿಗಾಗಿ ಅನ್ನದಾತರು, ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಹಾಗೂ ಅವರ ಕುರಿತು ಆರೋಗ್ಯ ಸಚಿವ ಯು.ಟಿ ಖಾದರ್ ಹಗುರವಾಗಿ ಮಾತನಾಡಿರುವುದು, ಪ್ರತಿಭಟನೆ ಮುಂದುವರೆಸಲು ಸಾಕ್ಷಿಯಾಗಿದೆ ಎಂದರು.

ನದಿಯ ದಡದಲ್ಲಿಯೇ ಇದ್ದರೂ ನಮ್ಮ ಪಾಲಿನ ನೀರನ್ನು ನಮ್ಮ ಭೂಮಿಗೆ ಹರಿಸುವುದಕ್ಕಾಗಿ ಇಂದು ನಾವೆಲ್ಲಾ ಹೊರಾಟ ನಡೆಸಬೇಕಾಗಿದೆ. ಹಿರಿಯೂರು ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಲ್ಲಿನ ನಮ್ಮ ಭಾಗದ ರೈತರ ಭೂಮಿಗೆ ಉಣಿಸಬೇಕಿದ್ದ ಭದ್ರಾ ನೀರನ್ನು, ಮೇಲ್ದಂಡೆಗೆ ಹರಿಸಿ ನಮ್ಮ ಭಾಗದ ರೈತರಿಗೆ ಮೋಸವೆಸಗಿದ್ದಾರೆ. ಈ ಕುರಿತು ಚಿತ್ರದುರ್ಗ, ಹಿರಿಯೂರು ಭಾಗದ ಶಾಸಕ, ಸಚಿವರುಗಳಿಗೆ ಈ ಕುರಿತು ಮೊದಲು ಮನವಿ ಸಲ್ಲಿಸುತ್ತೇವೆ. ಕ್ಷೇತ್ರದ ಅನ್ನದಾತರ ಜೀವನಾಡಿಗಳಾಗಿರುವ ಕೆರೆಗಳನ್ನು ತುಂಬಿಸಬೇಕೆಂದು ಹಲವಾರು ಬಾರಿ ಮುಖ್ಯಮಂತ್ರಿಗಳಿಗೆ, ನೀರಾವರಿ ಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಅದಕ್ಕೆ ಸ್ಪಂದಿಸದಿದ್ದಲ್ಲಿ ನಮ್ಮ ಪಾಲಿನ ನೀರನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸದನದ ಗಮನ ಸೆಳೆಯುತ್ತೆನೆ. ಅದಕ್ಕೂ ಸ್ಪಂದಿಸದಿದ್ದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕ್ಷೇತ್ರದ ಅನ್ನದಾತರ, ಮಹಿಳೆಯರ ಬೆಂಬಲದೊಂದಿಗೆ ಉಗ್ರ ಪ್ರತಿಭಟನೆ ನಡೆಸುತ್ತೆವೆ. ನೂರಾರು ಕೋಟಿ ರೂಪಾಯಿ ಅವ್ಯವಹಾರ ಮಾಡಿರುವ ಮಾಜಿ ಸಚಿವ ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿಸಲು, ಕಾಂಗ್ರೆಸ್ ಸರ್ಕಾರ ತೆರೆಮರೆಯಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ. ಜಿಲ್ಲಾ ಮಂತ್ರಿಗಳಾದ ಎಸ್.ಎಸ್. ಮಲ್ಲಿಕಾರ್ಜುನ ಅವರು ಕಾಡಜ್ಜಿ ಕೃಷಿ ಕೇಂದ್ರದ ಆವರಣದಲ್ಲಿನ ಕೋಟ್ಯಂತರ ರು. ಬೆಲೆಯ ಸಾವಿರಾರು ಟ್ರಿಪ್ ಮಣ್ಣನ್ನು ಮಾರಿಕೊಂಡಿದ್ದಾರೆ. ಕ್ಷೇತ್ರದ ರೈತರ ಕಲ್ಯಾಣಕ್ಕಾಗಿಯೇ ಇರುವ ಯೋಜನೆಯ ಲೋಪದೋಷ ಸರಿಪಡಿಸಲು ದಾವಣಗೆರೆಯಲ್ಲಿಯೇ ಐ.ಸಿ.ಸಿ. ಸಭೆ ಕರೆಯಬೇಕೆಂದು ಬಿ.ಪಿ. ಹರೀಶ್ ಆಗ್ರಹಿಸಿದರು.

ಬೆಂಕಿ ಹಚ್ಚಿದ ಬಿಜೆಪಿ ಕಾರ್ಯಕರ್ತರು, ನಂದಿಸಿದ ಪೊಲೀಸರು:

ಹರಿಹರ ನಗರದ ಶಿವಮೊಗ್ಗ- ಹೊಸಪೇಟೆ ರಾಜ್ಯ ಹೆದ್ದಾರಿ ಪಕ್ಕದ ತಾಲೂಕು ಬಿಜೆಪಿ ಕಾರ್ಯಾಲಯದಿಂದ ಹೊರಟ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ, ಪ್ರತಿಭಟನಾಕಾರರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಂತರ ಹರಪನಹಳ್ಳಿ ಸರ್ಕಲ್‌ನಲ್ಲಿ ನಡೆಸಿದ ಬಹಿರಂಗ ಸಭೆಮಧ್ಯದಲ್ಲಿ ಬಿಜೆಪಿ ಕಾರ್ಯಕರ್ತರು, ಯುವ ಮುಖಂಡರು ರಾಜ್ಯ ಕಾಂಗ್ರೆಸ್ ನಾಯಕರ ಭಾವಚಿತ್ರಗಳಿಗೆ ಬೆಂಕಿ ಹಚ್ಚಲು ಮುಂದಾಗಿದ್ದರು, ಪೊಲೀಸರು ಬೆಂಕಿ ನಂದಿಸಿದರು. ಮತ್ತೆ ರೊಚ್ಚಿಗೆದ್ದ ಯುವ ಮುಖಂಡರು ಟೈರ್‌ಗೆ ಬೆಂಕಿ ಹಚ್ಚಿದರು. ಪೊಲೀಸರು ಆ ಬೆಂಕಿಯನ್ನು ಸಹ ನಂದಿಸಿದರು. ಹೀಗೆ ಹರಪನಹಳ್ಳಿ ಸರ್ಕಲ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ 3 ಸ್ಥಳಗಳಲ್ಲಿ ಪೊಲೀಸರ ಕಣ್ಣು ತಪ್ಪಿಸಿ ನಡೆಸಿದ ಬೆಂಕಿ ಹಚ್ಚುವ, ಅದನ್ನು ಆರಿಸುವ ಘರ್ಷಣೆಯ ಮಧ್ಯದಲ್ಲಿಯೇ ಶಾಸಕ ಬಿ.ಪಿ ಹರೀಶ್ ಸೇರಿದಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಯಶವಂತ ರಾವ್ ಜಾಧವ, ಡಾ.ಬಸವರಾಜ ಕೆಲಗಾರ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ಮುಖಂಡರಾದ ಚಂದ್ರಶೇಖರ ಪೂಜಾರ, ಜಿಲ್ಲಾ ಮಾಜಿ ಉಪಾಧ್ಯಕ್ಷ ಬಾತಿ ಚಂದ್ರಶೇಖರ್. ಜಿಲ್ಲಾ ಕಾರ್ಯದರ್ಶಿ ಐರಣಿ ಅಣ್ಣೇಶ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ರವಿ ರಾಯ್ಕರ್, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಅಶ್ವಿನಿ ಕೃಷ್ಣ, ನಗರಾಧ್ಯಕ್ಷ ರಾಜು ರೋಖಡೆ, ಗ್ರಾಮಾಂತರ ಅಧ್ಯಕ್ಷ ಲಿಂಗರಾಜ ಎಂ.ಪಿ., ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ಗುಡಿಮನಿ, ಗಿರೀಶ್ ಕೆ.ಬಿ., ನಂದಿಗಾವಿ ರಮೇಶ್, ಮಹಾಂತೇಶ ಹುಗ್ಗಿ, ಕಾರ್ಯದರ್ಶಿಗಳಾದ ವೀರೇಶ ಅಜ್ಜಣ್ಣನವರ, ಆರ್.ಎಲ್. ಯೋಗೇಶ್, ಲೋಕಿಕೆರೆ ಅಣ್ಣಪ್ಪ, ಶರತ್ ಶೇಖರ್, ನಿರಂಜನ್, ಅಜಿತ್ ಸಾವಂತ್, ಕೆಂಚನಹಳ್ಳಿ ಮಹಾಂತೇಶ್, ತುಳಜಪ್ಪ ಭೂತೆ, ಸಾಕ್ಷಿ ರಣಸಿಂಘೆ, ರೂಪಾ ಶಶಿಕಾಂತ, ರೂಪಾ ಕಾಟ್ವೆ, ಮಾರುತಿ ಇದ್ದರು.

- - -

-28ಎಚ್.ಆರ್.ಆರ್.1:

ಹರಿಹರ ನಗರದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಡಿಸೆಂಬರ್‌ 10ರಂದು ಸುವರ್ಣಸೌಧದ ಎದುರು ಉಪವಾಸ
ಜನಪ್ರತಿನಿಧಿಗಳ ಸ್ನೇಹಸಂಗಮಕ್ಕೆ ಸಾಕ್ಷಿಯಾದ ಹಾವೇರಿ