ಕನ್ನಡಪ್ರಭ ವಾರ್ತೆ ವಿಜಯಪುರ
ಕಾರ್ಯಕ್ರಮದ ಮೈದಾನದಲ್ಲೇ ಸಂಪೂರ್ಣ ಶೋರೂಮ್ ಮಾದರಿ ವ್ಯವಸ್ಥೆ ಮಾಡಲಾಗಿದೆ. ಪಲ್ಸರ್ ಸರಣಿಯ ಎಲ್ಲ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಬೈಕ್ ಪ್ರಿಯರಿಗೆ ನೇರ ಅನುಭವ ನೀಡುವ ಉದ್ದೇಶದಿಂದ ಸ್ಥಳದಲ್ಲೇ ಟೆಸ್ಟ್ ರೈಡ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲ್ಲ ಬಜಾಜ್ ಹಳೆಯ ವಾಹನಗಳಿಗೆ ಉಚಿತ 12 ಪಾಯಿಂಟ್ ಸೇವಾ ಪರಿಶೀಲನಾ ಶಿಬಿರ ಆಯೋಜಿಸಲಾಗಿತ್ತು. ವಾಹನಗಳನ್ನು ಪರಿಶೀಲಿಸಿ ಕಂಪನಿಯಿಂದ ಹೆಲ್ತ್ ಸರ್ಟಿಫಿಕೇಟ್ ನೀಡಲಾಯಿತು. ಇದೇ ವೇಳೆ ಪ್ರತ್ಯೇಕ ಎಕ್ಸಚೇಂಜ್ ಕಾರ್ನಿವಲ್ ವಲಯದಲ್ಲಿ ಹಳೆಯ ವಾಹನಗಳ ಮೌಲ್ಯಮಾಪನ ಮಾಡಿ ಹೊಸ ವಾಹನಗಳಿಗೆ ವಿನಿಮಯ ಮಾಡುವ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದ ಮೋಟೊಸೌಲ್ ಮೈಸೂರಿನಿಂದ ತರಬೇತಿ ಪಡೆದ ಸ್ಟಂಟ್ ಅಥ್ಲೀಟ್ ಪಲ್ಸರ್-160 ಮೇಲೆ ರೋಮಾಂಚಕ ಸ್ಟಂಟ್ ಪ್ರದರ್ಶನ ನೀಡಿದರು. ಈ ವೇಳೆ ಓರ್ವ ಗ್ರಾಹಕರು ತಮ್ಮ ಕುಟುಂಬ ಸಮೇತ ಹೊಸ ಪಲ್ಸರ್ ವಾಹನ ಸ್ವೀಕರಿಸಿದ್ದು, ವಿಶೇಷ ಗಮನ ಸೆಳೆದಿತು. ಜೊತೆಗೆ ವಿಜಯಪುರದ ಸ್ಥಳೀಯ ರೈಡರ್ಸ್ ತಮ್ಮ ಮಾಡಿಫೈಡ್ ಪಲ್ಸರ್ ಬೈಕ್‌ಗಳನ್ನು ಪ್ರದರ್ಶಿಸಿ ಬೈಕರ್ ಸಮುದಾಯದ ಉತ್ಸಾಹ ವ್ಯಕ್ತಪಡಿಸಿದರು.ಈ ವೇಳೆ ಎಸ್.ಎಸ್ ಸಹಕಾರಿ ಬ್ಯಾಂಕ್ ಹಾಗೂ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ಬಿಜ್ಜರಗಿ ಬಜಾಜನ್ ವ್ಯವಸ್ಥಾಪಕ ಪಾಲುದಾರ ಸಂದೀಪ ಬಿಜ್ಜರಗಿ, ಬಜಾಜ್ ಅಟೋ ಲಿಮಿಟೆಡ್‌ನ ಎಎಸ್‌ಎಂ ಪ್ರತೀಕ ಪಡಕಿ, ರಾಜೋತ, ಕಿಫಾಯತ ಹುಸೇನ, ಮೃತ್ಯುಂಜಯ ಹಿರೇಮಠ, ಸುಹಾಸ ಜಗದಾಳೆ, ಮದನ ದುಬೆ, ದೇಸಾಯಿಗೌಡ ಪಾಟೀಲ, ಸಂತೋಷ ಕೋಳಿ ಹಾಗೂ ಶೋರೂಮ್ ಸಿಬ್ಬಂದಿ ಇದ್ದರು.