ಷಡ್ಯಂತ್ರ ರೂಪಿಸಿದವರಿಗೆ ಶಿಕ್ಷೆ ನೀಡಿ

KannadaprabhaNewsNetwork |  
Published : Aug 14, 2025, 02:10 AM IST
ಧರ್ಮಸ್ಥಳ ಪಾವಿತ್ರತೆಗೆ ಷಡ್ಯಂತ್ರ ರೂಪಿಸಿದವರಿಗೆ ಶಿಕ್ಷೆ ನಿಡಬೇಕು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಪುಣ್ಯಕ್ಷೇತ್ರವಾದ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಧರ್ಮಸ್ಥಳದ ಭಕ್ತರು, ಫಲಾನುಭವಿಗಳು ಹಾಗೂ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಡಾ.ಅಂಬೇಡ್ಕರ ವೃತ್ತದ ವರೆಗೆ ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪುಣ್ಯಕ್ಷೇತ್ರವಾದ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಧರ್ಮಸ್ಥಳದ ಭಕ್ತರು, ಫಲಾನುಭವಿಗಳು ಹಾಗೂ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಡಾ.ಅಂಬೇಡ್ಕರ ವೃತ್ತದ ವರೆಗೆ ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ತನಿಖೆಯಲ್ಲಿ ಯಾವುದೇ ಅಸ್ಥಿಪಂಜರದ ಕುರುಹುಗಳು ದೊರಕದೆ ಇರುವ ಕಾರಣ ಎಸ್‌ಐಟಿ ತನಿಖೆ ನಿಲ್ಲಿಸಿ ಅನಾಮಿಕ ವ್ಯಕ್ತಿಯನ್ನು ಬಂಧಿಸಿ ಶಿಕ್ಷೆ ನೀಡಬೇಕು. ನಮ್ಮೆಲ್ಲರ ಪುಣ್ಯ ಕ್ಷೇತ್ರ ಧರ್ಮಸ್ಥಳದ ಪಾವಿತ್ರ‍್ಯತೆಗೆ ಕಳಂಕ ತಂದಿರುವರನ್ನು ಪಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಪಪ್ರಚಾರ ಸಹಿಸುವುದಿಲ್ಲ. ಇದರಿಂದ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆಯಾಗಿದೆ, ಮುಂದುವರಿದು ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ದುಡಿಯುವ ವರ್ಗಗಳಿಗೆ ಆರ್ಥಿಕ ನೆರವು ನೀಡಿ ಮಹಿಳಾ ಸಬಲೀಕರಣ ಮಾಡಿದ ಕೀರ್ತಿ ಧರ್ಮಸ್ಥಳ ಕ್ಷೇತ್ರಕ್ಕೆ ಸಲ್ಲುತ್ತದೆ ಎಂದರು.

ಸಾಮಾಜಿಕ ಚಿಂತಕ ಎಸ್.ವಿ.ಪಾಟೀಲ ಮಾತನಾಡಿ, ಧರ್ಮಕ್ಕೆ ಇನ್ನೊಂದು ಹೆಸರೇ ಧರ್ಮಸ್ಥಳ. ನ್ಯಾಯಕ್ಕೆ ಹೆಸರಾದವರು ಡಾ.ವೀರೇಂದ್ರ ಹೆಗಡೆಯವರು. ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ನಮ್ಮ ಹೋರಾಟವಿದೆ ಎಂದು ಸ್ಪಷ್ಟಪಡಿಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ಮಾತನಾಡಿ, ಅನಾಮಿಕ ವ್ಯಕ್ತಿಯ ನಡತೆ ನಮಗೆ ಸಂಶಯ ಉಂಟುಮಾಡಿದೆ. ಸರಕಾರ ಈ ಹಂತದಲ್ಲಿ ಅವಸರಕ್ಕೆ ಮಾಡಿದ್ದು ಎಸ್‌ಐಟಿ ತನಿಖೆ ವಾಪಸ್‌ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಶೀತಲಕುಮಾರ ಓಗಿ ಮಾತನಾಡಿ, ಧರ್ಮಸ್ಥಳದ ಬಗೆಗಿನ ಅಪಪ್ರಚಾರ ನಿಲ್ಲಬೇಕು. ಶವಗಳನ್ನು ಹೂತಿರುವ ಬಗ್ಗೆ ಎಸ್‌ಐಟಿ ತಂಡದ ತನಿಖೆಗೆ ಪುಣ್ಯ ಕ್ಷೇತ್ರ ಸಹಕಾರ ನೀಡಿದೆ ಎಂದು ಹೇಳಿದರು.

ಮುಖಂಡರಾದ ಶಿವಾನಂದ ದೇಸಾಯಿ, ಮಹಾವೀರ ಪಾರೇಖ, ಅಪ್ಪುಗೌಡ ಪಾಟೀಲ ಮನಗೂಳಿ, ಸಂಜೀವ ಐಹೊಳ್ಳಿ, ಸಿದಗೊಂಡ ಬಿರಾದಾರ, ಯೋಗೇಶ ನಡುವಿನಕೇರಿ, ಮಹಾಂತೇಶ ಆಸಂಗಿ, ರಾಜಶೇಖರ ಮಗಿಮಠ, ಚಂದ್ರಶೇಖರ ಕವಟಗಿ, ವಿ.ಸಿ.ನಾಗಠಾಣ, ರವೀಂದ್ರ ಬಿಜ್ಜರಗಿ, ಸಿದ್ರಾಮಪ್ಪ ಉಪ್ಪಿನ, ಅಪ್ಪಾಸಾಹೇಬ ಮುತ್ತಿನ, ಉಮೇಶ ಕಾರಜೋಳ, ರಾಘವ ಅಣ್ಣಿಗೇರಿ, ಮಾಯಕ್ಕ ಚೌಧರಿ ಮುಂತಾದವರು ಈ ವೇಳೆ ಮಾತನಾಡಿದರು. ಬೆಂಗಳೂರಿನ ಸರ್ಪಭೂಷಣ ಶಿವಯೋಗಿ ಮಲ್ಲಿಕಾರ್ಜುನ ಸ್ವಾಮೀಜಿ, ಕರಭಂಟನಾಳ ಶಿವಕುಮಾರ ಸ್ವಾಮೀಜಿ, ತಡವಲಗಾ ರಾಚೋಟೇಶ್ವರ ಸ್ವಾಮಿಜಿ, ಅಹಿರಸಂಗದ ಅಭಿನವ ಶಿವಾಚಾರ್ಯರು ಸಾನ್ನಿಧ್ಯವನ್ನು ವಹಿಸಿದ್ದರು. ಪ್ರೇಮಾನಂದ ಬಿರಾದಾರ, ರಾಹುಲ ಜಾಧವ, ಶಿವರುದ್ರ ಬಾಗಲಕೋಟ, ರಾಜು ಜಾಧವ, ಉಮೇಶ ವಂದಾಲ, ಬಿ.ಡಿ.ಪಾಟೀಲ, ಶ್ರೀಮಂತ ಶಲಗಾ, ಡಾ.ಆನಂದ ಕುಲಕರ್ಣಿ, ಸಾತಪ್ಪ ಗೊಂಗಡಿ, ದರೆಪ್ಪ ಹೊನವಾಡ, ಕೃಷ್ಣ ಗುನ್ಹಾಳಕರ, ಉಮೇಶ ಗುಮ್ಮಶೆಟ್ಟಿ, ಲಕ್ಷ್ಮಿ ಕನ್ನೊಳ್ಳಿ, ಪ್ರವೀಣ ಕಾಸರ, ಸಾವಿತ್ರಿ ಕಲ್ಯಾಣಶೆಟ್ಟಿ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಮುಂಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಾಹ್ಮಣರು ನಮ್ಮನ್ನು ಗುಲಾಮ ಮಾಡಲು ಹಿಂದು ಧರ್ಮ ಹುಟ್ಟು ಹಾಕಿದ್ರು : ನಿವೃತ್ತ ಜಡ್ಜ್‌
ಇಂದಿನಿಂದ ಕಾವೇರಲಿದೆ ಉತ್ತರ ಕರ್ನಾಟಕದ ಚರ್ಚೆ-3 ದಿನ ವಿಧಾನಮಂಡಲದಲ್ಲಿ ಈ ಬಗ್ಗೆ ಕಲಾಪ