ಸೂರ್ಯಕಾಂತಿ ಖರೀದಿ ೩ ತಿಂಗ್ಳಾದ್ರು ರೈತರ ಕಿಸೆಗೆ ದುಡ್ಡು ಬಂದಿಲ್ಲ

KannadaprabhaNewsNetwork |  
Published : Feb 16, 2024, 01:47 AM IST
ಸೂರ್ಯಕಾಂತಿ ಖರೀದಿ ೩ ತಿಂಗ್ಳಾದ್ರು ರೈತರ ಕಿಸೆಗೆ ದುಡ್ಡು ಬಂದಿಲ್ಲ! | Kannada Prabha

ಸಾರಾಂಶ

ಪಟ್ಟಣದ ಎಪಿಎಂಸಿಯಲ್ಲಿ ಸೂರ್ಯ ಕಾಂತಿ ಖರೀದಿಸಿ ಮೂರು ತಿಂಗಳು ಕಳೆದರೂ ರೈತರಿಗೆ ಸೂರ್ಯ ಕಾಂತಿಯ ಹಣ ತಲುಪಿಲ್ಲ, ಬರದ ನಡುವೆ ರೈತರು ಹಣಕ್ಕಾಗಿ ಶಬರಿಯಂತೆ ಕಾಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದ ಎಪಿಎಂಸಿಯಲ್ಲಿ ಸೂರ್ಯ ಕಾಂತಿ ಖರೀದಿಸಿ ಮೂರು ತಿಂಗಳು ಕಳೆದರೂ ರೈತರಿಗೆ ಸೂರ್ಯ ಕಾಂತಿಯ ಹಣ ತಲುಪಿಲ್ಲ, ಬರದ ನಡುವೆ ರೈತರು ಹಣಕ್ಕಾಗಿ ಶಬರಿಯಂತೆ ಕಾಯುತ್ತಿದ್ದಾರೆ.ಕಳೆದ ೨೦೨೩ ರ ಅ.೧೯ ರಂದು ಸೂರ್ಯಕಾಂತಿ ಮಾರಾಟಕ್ಕೆ ಖರೀದಿ ಕೇಂದ್ರದಲ್ಲಿ ರೈತರ ಡಿ.ಎಂ. ಮಹೇಶ್‌ ನೋಂದಣಿ ಮಾಡಿಸಿದ್ದರು. ೨೦೨೩ ರ ನ.೯ ರಂದು ೧೫ ಕ್ವಿಂಟಾಲ್‌ ಸೂರ್ಯಕಾಂತಿಯನ್ನು ಮಾರಾಟ ಮಾಡಿದ್ದಾರೆ. ೨೦೨೩ ರ ನ.೯ ರಂದು ರೈತರಿಂದ ಸೂರ್ಯಕಾಂತಿ ಖರೀದಿಸಿದ್ದಾರೆ ಆದರೆ ಇಲ್ಲಿಯ ತನಕ ಕರ್ನಾಟಕ ಎಣ್ಣೆ ಬೀಜ ನಿಗಮ ಸುಮಾರು ೧೦ ಕ್ಕೂ ಹೆಚ್ಚು ಮಂದಿ ರೈತರಿಗೆ ಸೂರ್ಯಕಾಂತಿ ಹಣ ನೀಡಿಲ್ಲ. ಖರೀದಿ ಕೇಂದ್ರದಲ್ಲಿ ರೈತರಿಂದ ಸೂರ್ಯಕಾಂತಿ ಕರ್ನಾಟಕ ಎಣ್ಣೆ ಬೀಜ ನಿಗಮ ಖರೀದಿಸಿದ ರೈತರಲ್ಲಿ ಬಹುತೇಕ ರೈತರಿಗೆ ಹಣ ಬಂದಿದೆ. ಆದರೆ ಹತ್ತಕ್ಕೂ ಹೆಚ್ಚು ರೈತರಿಗೆ ಹಣ ಬಂದಿಲ್ಲ ಎಂಬ ದೂರಿದೆ.ರೈತ ಡಿ.ಎಂ.ಮಹೇಶ್‌ ಕನ್ನಡಪ್ರಭದೊಂದಿಗೆ ಮಾತನಾಡಿ ಸೂರ್ಯಕಾಂತಿ ಖರೀದಿಸಿ ಮೂರು ತಿಂಗಳಾಗುತ್ತಿದೆ ಆದರೂ ತಾಂತ್ರಿಕ ನೆಪಯೊಡ್ಡಿ ಹಣ ನೀಡದೆ ಇರುವುದು ಸರಿಯಲ್ಲ ಎಂದರು. ಬರ ಎದುರಾಗಿದೆ ರೈತರು ಹಣ ಇಲ್ಲದೆ ಪರದಾಟ ನಡೆಸುತ್ತಿದ್ದರೂ ಸೂರ್ಯಕಾಂತಿಯ ಹಣ ರೈತರಿಗೆ ನೀಡದೆ ಸತಾಯಿಸುತ್ತಿರುವುದು ಖಂಡನೀಯ ಎಂದರು. ಎಪಿಎಂಸಿ ಕಾರ್ಯದರ್ಶಿ ಶ್ರೀಧರ್‌ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿ ರೈತರ ಬ್ಯಾಂಕ್‌ ಖಾತೆಗೆ ಹತ್ತಕ್ಕೂ ಹೆಚ್ಚು ಮಂದಿ ರೈತರಿಗೆ ಹಣ ಬರಬೇಕಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಎಣ್ಣೆ ಬೀಜ ನಿಗಮಕ್ಕೆ ಪತ್ರ ಕೂಡ ಬರೆದಿದ್ದು ರೈತರ ಬ್ಯಾಂಕ್‌ ಖಾತೆಯ ತಾಂತ್ರಿಕ ದೋಷದಿಂದ ಹಣ ಬಂದಿಲ್ಲ. ಹಾಗಾಗಿ ಚೆಕ್‌ ಮೂಲಕವೇ ಅತೀ ಜರೂರಾಗಿ ಹಣ ಪಾವತಿಯಾಗಲಿದೆ. ಈ ಸಂಬಂಧ ಎಪಿಎಂಸಿ ಮತ್ತೆ ಖರೀದಿಸಿ ಎಣ್ಣೆ ಬೀಜ ನಿಗಮದ ಗಮನಕ್ಕೆ ತರಲಾಗುವುದು ಎಂದರು.

ಸೂರ್ಯಕಾಂತಿ ಖರೀದಿಸಿ ಮೂರು ತಿಂಗಳು ಉರುಳುತ್ತಿದ್ದರೂ ಕರ್ನಾಟಕ ಎಣ್ಣೆ ಬೀಜ ನಿಗಮ ರೈತರಿಗೆ ಹಣ ನೀಡದೆ ತೊಂದರೆ ನೀಡುತ್ತಿದೆ. ಕೂಡಲೇ ಹಣ ಕೊಡದಿದ್ದಲ್ಲಿ ರೈತರು ಪ್ರತಿಭಟಣೆಯ ಹಾದಿ ಹಿಡಿಯಬೇಕಾಗುತ್ತದೆ.

ಚೇರ್ಮನ್‌ ಶಿವಮೂರ್ತಿ, ಗ್ರಾಪಂ ಉಪಾಧ್ಯಕ್ಷ

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...