ಸ್ವಾರ್ಥ ಬದಿಗೊತ್ತಿ ಜನರ ಅಭಿವೃದ್ಧಿಗಾಗಿ ರಾಜಕಾರಣ ಮಾಡಿ: ಡಾ.ಸಿ.ಎನ್.ಅಶ್ವತ್ಥನಾರಾಯಣ

KannadaprabhaNewsNetwork |  
Published : Jul 02, 2026, 01:45 AM IST
1ಕೆಎಂಎನ್ ಡಿ13 | Kannada Prabha

ಸಾರಾಂಶ

ಕೆಂಪೇಗೌಡರ ಆದರ್ಶದ ತಳಹದಿಯ ಮೇಲೆ ಇಂದು ಬೆಂಗಳೂರು ಮಹಾನಗರ ಬೆಳೆದು ನಿಂತಿದೆ. ಉದ್ಯಮ ಶೀಲತೆ ಮತ್ತು ಮಾಹಿತಿ ಹಾಗೂ ತಂತ್ರಜ್ಞಾನ ಅಭಿವೃದ್ದಿಗೆ ಬೆಂಗಳೂರು ವಿಶ್ವಕ್ಕೆ ಮಾದರಿ. ರೈತರು ತಾಂತ್ರಿಕ ಬೇಸಾಯದ ಕಡೆಗೆ ಬದಲಾಗಬೇಕು. ತಾಂತ್ರಿಕ ಕೃಷಿ ಮೂಲಕ ನಮ್ಮರೈತರು ಉತ್ತಮ ಬದುಕು ಕಟ್ಟಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಕ್ಷ ಯಾವುದೇ ಇರಲಿ. ಸ್ವಾರ್ಥ ರಾಜಕಾರಣ ಬದಿಗೊತ್ತಿ ಜನರ ಅಭಿವೃದ್ಧಿಗಾಗಿ ರಾಜಕಾರಣ ಮಾಡಬೇಕು ಎಂದು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಕರೆ ನೀಡಿದರು.

ಪಟ್ಟಣದ ಟಿಎಪಿಸಿಎಂಎಸ್ ಸಮುದಾಯ ಭವನದ ಆವರಣದಲ್ಲಿ ತಾಲೂಕು ಒಕ್ಕಲಿಗರ ವೇದಿಕೆದಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ನಾಡಪ್ರಭು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಕೆ.ಆರ್.ಪೇಟೆ ಜನರೊಂದಿಗಿನ ನನ್ನ ಸಂಬಂಧ ಮರೆಯಲಾಗದು. ಶಾಸಕ ಎಚ್.ಟಿ.ಮಂಜು ವಿಧಾನಸಭೆಯಲ್ಲಿ ಈ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆಮಾಡಿ ಗಮನ ಸೆಳೆಯುತ್ತಿರುವುದು ಮೆಚ್ಚುವ ವಿಚಾರ. ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗೂಡಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕೆಂಪೇಗೌಡರ ಆದರ್ಶದ ತಳಹದಿಯ ಮೇಲೆ ಇಂದು ಬೆಂಗಳೂರು ಮಹಾನಗರ ಬೆಳೆದು ನಿಂತಿದೆ. ಉದ್ಯಮ ಶೀಲತೆ ಮತ್ತು ಮಾಹಿತಿ ಹಾಗೂ ತಂತ್ರಜ್ಞಾನ ಅಭಿವೃದ್ದಿಗೆ ಬೆಂಗಳೂರು ವಿಶ್ವಕ್ಕೆ ಮಾದರಿ. ರೈತರು ತಾಂತ್ರಿಕ ಬೇಸಾಯದ ಕಡೆಗೆ ಬದಲಾಗಬೇಕು. ತಾಂತ್ರಿಕ ಕೃಷಿ ಮೂಲಕ ನಮ್ಮರೈತರು ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಕೆಂಪೇಗೌಡರ ಆದರ್ಶಗಳು ನಮಗೆ ಪ್ರೇರಣೆಯಾಗಬೇಕೆಂದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣ ಪ್ರವಾಸಿ ಮಂದಿರ ವೃತ್ತದಿಂದ ವಿವಿಧ ಜಾನಪದಕಲಾತಂಡ್ಳ ಪ್ರದರ್ಶನದೊಂದಿಗೆ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ್ದ ಸ್ವಾಮೀಜಿಗಳನ್ನು ಮೆರವಣಿಗೆ ಮೂಲಕ ಮುಖ್ಯ ವೇದಿಕೆಗೆ ಕರೆತರಲಾಯಿತು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪ್ರವಾಸಿ ಮಂದಿರದ ಆವರಣದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಸಮಾಜ ಸೇವಕರಾದ ಆರ್‌ಟಿಒ ಮಲ್ಲಿಕಾರ್ಜುನ್, ವಿಜಯರಾಮೇಗೌಡ, ಅರಿಶಿನಕುಂಟೆ ರಾಮಕೃಷ್ಣೇಗೌಡ, ಚಿತ್ರನಟ ಕೆ.ಆರ್.ಪೇಟೆ ಶಿವರಾಜ್, ಬಿಗ್ ಬಾಸ್ ಸ್ಪರ್ಧಿಕಾವ್ಯ ಶೈವ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ನೆಲ್ಲಿಗೆರೆ ಬಾಲು, ಅಶೋಕ್‌ಜಯರಾಂ ಮಾತನಾಡಿದರು.

ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಪುರುಷೋತ್ತಮನಾಥ ಸ್ವಾಮೀಜಿ, ಶ್ರೀ ಕೀರ್ತಿನಾಥ ಸ್ವಾಮೀಜಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಲಿ ನಿರ್ದೇಶಕ ಎಸ್.ಎಲ್.ಮೋಹನ್, ಉದ್ಯಮಿ ಪುರ ವಿಶ್ವನಾಥ್, ಜೆಡಿಎಸ್‌ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಟಿಎಪಿ ಸಿಎಂಎಸ್ ಅಧ್ಯಕ್ಷ ಟಿ.ಬಲದೇವ್, ರಾಜ್ಯ ಕೈಗಾರಿಕಾ ಮಾರಾಟ ಮತ್ತು ಸರಬರಾಜು ಸಂಘದ ಅಧ್ಯಕ್ಷ ಬಸ್ ಸಂತೋಷ್‌ಕುಮಾರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಹಿರಿಯ ಪತ್ರಕರ್ತ ಬಳ್ಳೇಕೆರೆ ಮಂಜುನಾಥ್, ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ, ನಾಗಮಂಗಲ ಮಂಜೇಶ್, ಒಕ್ಕಲಿಗರ ವೇದಿಕೆ ಅಧ್ಯಕ್ಷ ಮೆಣಸಕುಮಾರಗೌಡ, ಗೌರವಾಧ್ಯಕ್ಷ ಟಿ.ವೈ.ಆನಂದ್, ಕಾರ್ಯದರ್ಶಿ ಗೌರೀಶ್, ವಡಕಹಳ್ಳಿ ಮಂಜೇಗೌಡ, ಕಿರಣ್, ನಾಗೆಶ್, ಲೋಕೇಶ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಾಜು ಜಾಗದಲ್ಲಿ ಮೈನಿಂಗ್‌ ಆರಂಭಿಸಲು ಡೆಡ್‌ಲೈನ್‌?
2ನೇ ದಿನ ಎಸ್‌ಐಆರ್‌ ನಮೂನೆ ವಿತರಣೆ ಚುರುಕು