ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ಪಟ್ಟಣದ ಕಾಳಿಕಾ ದೇವಸ್ಥಾನದಲ್ಲಿ ಗಾನಯೋಗಿ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳ 110ನೇ ಜಯಂತಿ ಹಾಗೂ ಸ್ವರಸಾಧನಾ ಸಂಗೀತ ಪಾಠ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಅಂಧ, ಅನಾಥರ ತಂದೆಯಾಗಿ, ಬಂಧುವಾಗಿ ಸಂಗೀತ ಪಾಠ ಹೇಳಿಕೊಡುವ ಮೂಲಕ ಅವರ ಬದುಕನ್ನು ಉದ್ದರಿಸಿದ ಶ್ರೇಷ್ಠ ಸಂತ ಪುಟ್ಟರಾಜ ಗವಾಯಿಗಳು. ಅವರಿಂದಾಗಿ ನಾವೆಲ್ಲರೂ, ನಾಡೆಲ್ಲ ಸುಮಧುರ ಸ್ವರಸಾಧಕರನ್ನು ಕಾಣುವಂತಾಗಿದೆ ಎಂದರು.
ಹರ್ಷವರ್ಧನ ಡಿಗ್ರಿ ಕಾಲೇಜು ಪ್ರಾಚಾರ್ಯ ಡಾ. ಸಂಗಣ್ಣ ಸಿಂಗೆ ಆನೂರ ಮಾತನಾಡಿ ಅಂಧ ಮಕ್ಕಳು ದೇವರ ಸ್ವರೂಪವಿದ್ದಂತೆ, ಅಂತ ದೇವರನ್ನು ಸಂಗೀತವೆಂಬ ಸಪ್ತಸ್ವರಗಳಲ್ಲಿ ಬಂಧಿಸಿ ಶ್ರೇಷ್ಠ ಸಾಧಕರನ್ನಾಗಿಸಿದ ಕೀರ್ತಿ ಪುಟ್ಟರಾಜ ಕವಿಗವಾಯಿಗಳಿಗೆ ಸಲ್ಲುತ್ತದೆ. ಸಾಮಾನ್ಯ ಶಾಲೆಗಳ ಶಿಕ್ಷಕರಿಗಿಂತ ಸಂಗೀತ ಪಾಠಶಾಲೆಗಳ ಶಿಕ್ಷಕರ ತಾಳ್ಮೆ ಮೆಚ್ಚುವಂಥದ್ದು ಎಂದ ಅವರು ತಾಲೂಕಿನಲ್ಲಿ ನಿರಂತರವಾಗಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರಿಗೂ ಸಂಗೀತದ ಸವಿ ಹಂಚುತ್ತಿರುವ ಕಾಮಶೆಟ್ಟಿ ಸಹೋದರರ ಕಾರ್ಯ ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಹಿಂಚಗೇರಾ ಮಠದ ಪೂಜ್ಯರಾದ ಶಂಭುಲಿಂಗ ಶಿವಾಚಾರ್ಯ, ಶ್ರೀಗುರು ಪುಟ್ಟರಾಜ ಸಂಗೀತ ಪ್ರತಿಷ್ಠಾನದ ಅಧ್ಯಕ್ಷ ಮಹೇಶ ಕಾಮಶೆಟ್ಟಿ, ಸ್ವರಸಾಧನಾ ಸಂಗೀತ ಪಾಠ ಶಾಲೆಯ ಶಿಕ್ಷಕ ಸಂತೋಷ ಕಾಮಶೆಟ್ಟಿ, ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ ವಾಳಿ, ಧರ್ಮರಾವ ರೇವೂರ, ಪಿ.ಸಿ ತಾವರಖೇಡ, ಸೌರಭ ಮನಮಿ, ಶ್ರೀಮಂತ ಪತ್ತಾರ, ಮಲ್ಲಿಕಾರ್ಜುನ ಬೆಟ್ಟಜೇವರ್ಗಿ, ಸಿದ್ದು ಯಳಸಂಗಿ ಸೇರಿದಂತೆ ಅನೇಕರು ಇದ್ದರು.