ಪ್ಯಾರಾ ಏಷ್ಯನ್ ಅಥ್ಲೆಟಿಕ್‌ ಗೆ ಪುಟ್ಟಮ್ಮ ಕೋಚ್‌

KannadaprabhaNewsNetwork | Published : Oct 16, 2023 1:45 AM

ಸಾರಾಂಶ

ಪ್ಯಾರಾ ಏಷ್ಯನ್ ಅಥ್ಲೆಟಿಕ್‌ ಗೆ ಪುಟ್ಟಮ್ಮ ಕೋಚ್‌
ಬಾಳೆಹೊನ್ನೂರು: ಸೀಗೋಡಿನ ಜವಾಹರ್ ನವೋದಯ ವಿದ್ಯಾಲಯದ ದೈಹಿಕ ಶಿಕ್ಷಕಿ ಡಾ. ವಿ.ಪುಟ್ಟಮ್ಮ ಅವರು ಅ. 22ರಿಂದ 28ರವರೆಗೆ ಚೀನಾದಲ್ಲಿ ನಡೆಯುವ ಪ್ಯಾರಾ ಏಷ್ಯನ್ ಅಥ್ಲೆಟಿಕ್ ಟೀಮ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ ಎಂದು ವಿದ್ಯಾಲಯದ ಪ್ರಾಚಾರ್ಯ ಆರ್. ಪ್ರೇಮ್‌ಕುಮಾರ್ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ ಅವರು, ಡಾ. ವಿ.ಪುಟ್ಟಮ್ಮ ಅವರು ವಿದ್ಯಾಲಯದಲ್ಲಿ 34 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು, ಈ ಹಿಂದೆ ಬಾಂಗ್ಲಾದೇಶ, ಮನಾಮ, ಬಹ್ರೇನ್, ಭುವನೇಶ್ವರ, ಗೋವಾ, ಗುವಾಹಟಿ, ದೆಹಲಿ, ಪುಣೆ ಮೊದಲಾದ ಕಡೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಹಾಕಿ, ಮ್ಯಾರಥಾನ್, ಅಥ್ಲೆಟಿಕ್, ಎಸ್.ಜಿ.ಎಫ್.ಐಗಳಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಆಯ್ಕೆ ನಮ್ಮ ವಿದ್ಯಾಲಯಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ೧೫ಬಿಹೆಚ್‌ಆರ್ ೩: ಡಾ. ವಿ.ಪುಟ್ಟಮ್ಮ.

Share this article