ಕುಕನೂರು: ತಾಲೂಕಿನ ಮಂಗಳೂರು ಗ್ರಾಮದಲ್ಲಿ ಸುಮಾರು 65ವರ್ಷದ ಹಿಂದೆ ಲಿಂಗೈಕ್ಯ ಪಂಚಾಕ್ಷರಿ ಗವಾಯಿಗಳು ಈ ಗ್ರಾಮದಲ್ಲಿ ವೀರೇಶ್ವರ ಪುಣ್ಯಾಶ್ರಮ ಮಠ ಕಟ್ಟಲು ಸಂಕಲ್ಪ ಮಾಡಿದ್ದರು. ಆದರೆ ಸಂಕಲ್ಪ ಈಡೇರಿರಲಿಲ್ಲ. ಈಗ ಲಿಂಗೈಕ್ಯ ಪಂಡಿತ ಪುಟ್ಟರಾಜ ಗವಾಯಿಗಳ ದೇವಸ್ಥಾನ ನಿರ್ಮಾಣ ಆಗುತ್ತಿರುವುದು ಅವರ ಸಂಕಲ್ಪ ನೆರವೇರಿದಂತೆ ಎಂದು ಗದಗಿನ ವಿರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.
ಗ್ರಾಮದ ಅರಳೇಲೆ ಹಿರೇಮಠದ ಶ್ರೀಸಿದ್ದಲಿಂಗ ಶಿವಾಚಾರ್ಯರು, ಶಿವಶರಣೆ ನಂದೀಶ್ವರ ಅಮ್ಮನವರು ಆಶೀರ್ವಚನ ನೀಡಿದರು.
ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಸವರಾಜ ರಾಜೂರು ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕೆ ಶ್ರದ್ಧಾ, ಭಕ್ತಿಯಿಂದ ಸೇವೆ ಸಲ್ಲಿಸಲಾಗುವುದು ಎಂದರು.ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, ಗದಗಿನ ವೀರೇಶ್ವರ ಪುಣ್ಯಾಶ್ರಮದ ಮಠದ ಮಾದರಿ ಹಾಗೆ ಮಂಗಳೂರು ಗ್ರಾಮದಲ್ಲಿಯೂ ಸಹಿತ ಪಂಡಿತ ಪುಟ್ಟರಾಜ ಗವಾಯಿಗಳ ದೇವಸ್ಥಾನ ನಿರ್ಮಾಣವಾಗಲಿ ಎಂದರು.
ಸುಜಾತಾ ಮಹೇಶ ಬಂಡ್ರಕಲ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಪಂ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರು, ಶರಣಪ್ಪ ಉಮಚಗಿ, ಶೇಖರಗೌಡ್ರ ಪೋಲೀಸಪಾಟೀಲ, ರೇವಣಸಿದ್ದಯ್ಯ ಅರಳಲೆಹಿರೇಮಠ, ಶೇಖರಗೌಡ್ರ ಮಾಲಿಪಾಟೀಲ, ನಿಂಗನಗೌಡ್ರ ಮಾಲಿಪಾಟೀಲ, ಶಿವಪುತ್ರಪ್ಪ ಶಿವಶಿಂಪಿ, ರಾಜು ಚಿನ್ನೂರು, ಮಾಬುಸಾಬ ನೂರಬಾಷ, ನೂರುದ್ದೀನ ವಣಗೇರಿ, ಪ್ರಕಾಶ ಬೆಲ್ಲದ, ಶರಣಯ್ಯ ಕಲ್ಮಠ, ವಿರೇಶ ಕಮ್ಮಾರ, ಶಿವಪುತ್ರಪ್ಪ ದೇವಬಸಪ್ಪನವರ ಬ್ಯಾಳಿ, ಮಹೇಶ ಬಂಡ್ರಕಲ್, ಮುದಕಯ್ಯ ವಣಗೇರಿಮಠ, ಮಂಗಳೇಶಯ್ಯ ವಣಗೇರಿಮಠ ಇತರರಿದ್ದರು.