ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ದೇವರ ಪುನಃ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಭಾನುವಾರ ಸೋಮನಾಥೇಶ್ವರ ಲಿಂಗ ಪುನಃ ಪ್ರತಿಷ್ಠೆ ನಡೆಯಲಿದೆ. ಮಹೋತ್ಸವದ ಪ್ರಧಾನ ಧಾರ್ಮಿಕ ಮಹೋತ್ಸವ ದಿನಗಳಲ್ಲಿ ಒಂದಾಗಿರುವ ಈ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಲಾಪಗಳು ನಡೆಯಲಿದ್ದು ಸಂಜೆ ಧಾರ್ಮಿಕ ಸಭೆ ಜರಗಲಿದೆ.ಭಾನುವಾರ ಪೂರ್ವಾಹ್ನ ಗಂಟೆ 7:00ರಿಂದ ವೈದಿಕ ಕಾರ್ಯಕ್ರಮ, ಸ್ವಸ್ತಿ ವಾಚನ, ಪೂರ್ಣನವಗ್ರಹ ಯಾಗ, ಪವಮಾನ ಹೋಮ, 11.25ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶಿಖರ ಪ್ರತಿಷ್ಠೆ ಹಾಗೂ ಶ್ರೀ ಸೋಮನಾಥೇಶ್ವರ ದೇವರ ಲಿಂಗ ಪ್ರತಿಷ್ಠಾಪನೆ ಯಾಗಲಿದೆ. ಅಷ್ಟಬಂಧಲೇಪನ, ನಿದ್ರಾಕುಂಭಾಭಿಷೇಕ, ಪ್ರಸನ್ನ ಪೂಜೆ. ಶ್ರೀ ಮಹಿಷಮರ್ದಿನಿ ಅಮ್ಮನವರಿಗೆ ಬಿಂಬಶುದ್ಧಿ, ಗೋದೋಹನ ವಿಧಿ, ಶ್ರೀ ಮಹಿಷಮರ್ದಿನಿ ಅಮ್ಮನವರ ಬಿಂಬ ಶಯ್ಯಾಧಿವಾಸ, ವರಿವಾರ ದೇವತೆಗಳ ಬಿಂಬಾಧಿವಾಸ, ಶಕ್ತಿದಂಡಕ ಮಂಡಲ ಪೂಜೆ, ಶಿರಸ್ತತ್ವ ಹೋಮ, ಅಧಿವಾಸ ಹೋಮ, ಅಷ್ಟಾವಧಾನ ಸೇವೆ, ಧ್ವಜಾಧಿವಾಸ, ವಾಹನಾಧಿವಾಸ, ಧ್ವಜಕಲಶಾಧಿವಾಸ, ಪೀರರತ್ನಾಧಿವಾಸ, ಪ್ರಾಸಾದಾಧಿವಾಸ ಕಾರ್ಯಕ್ರಮಗಳೂ ನಡೆಯಲಿವೆ.
ಸಂಜೆ 6.30ರಿಂದ ತಿರುಮಲರಾಯ ಚೌಟ ವೇದಿಕಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕಾಣಿಯೂರು ಮಠ, ಉಡುಪಿಯ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಉದ್ಘಾಟಿಸಲಿದ್ಧಾರೆ. ಗುರುಪುರ ಜಂಗಮ ಮಠದ ಶ್ರೀ ರುದ್ರಮುನಿ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.ಪೊಳಲಿ, ಜ್ಯೋತಿಷ್ಯ, ವಿದ್ವಾನ್ ಶಾಸ್ತ್ರ ವಿಶಾರದ ವೇ.ಮೂ. ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಡ್, ಉಳಿಪಾಡಿ ಗುತ್ತು, ಡಾ. ಪದ್ಮನಾಭ ಉಡುಪ, ಮೂಡುಬಿದಿರೆ, ವೇ.ಮೂ. ಲಕ್ಷ್ಮೀನಾರಾಯಣ ಅಸ್ರಣ್ಣರು, ಶ್ರೀ ಕ್ಷೇತ್ರ ಕಟೀಲು, ಅನಿತಾ ಸುರೇಂದ್ರ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್, ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಎಸ್., ರಾಮ್‌ಪ್ರಸಾದ್ ಭಟ್, ಕಲಂಬೆಟ್ಟು, ಪುತ್ತಿಗೆ, ಶ್ರೀ ರುದ್ರಮುನಿ ಸ್ವಾಮೀಜಿ ಜಂಗಮ ಸಂಸ್ಥಾನ ಮಠ, ಗುರುಪುರ, ಮಂಗಳೂರು ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಸದಾನಂದ ಶೆಟ್ಟಿ, ಮೈಂದಾಡಿ, ನಿಡ್ಡೋಡಿ, ಪಿ.ಕೆ. ಥೋಮಸ್, ಅಲಂಗಾರು, ಪುತ್ತಿಗೆ ಗ್ರಾ.ಪಂ. ಅಧ್ಯಕ್ಷೆ ರಾಧಾ, ಮನೋಜ್ ಶೆಟ್ಟಿ ಮೂಡುಬಿದಿರೆ, ಸುಭಾಷ್ ದೇವಾಡಿಗ, ಕಾಯರ್‌ಪುಂಡು, ಪುತ್ತಿಗೆ, ಭಾಸ್ಕರ ಕೋಟ್ಯಾನ್, ಜಲಗೋಳಿ, ಪುತ್ತಿಗೆ, ಲಿಂಗಪ್ಪ ಗೌಡ, ಅರ್ಬಿ. ಪುತ್ತಿಗೆ ಪದವು, ಶಕ್ತಿಪ್ರಸಾದ್ ಶೆಟ್ಟಿ, ಮಿಜಾರು ಗೌರವ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ.
ಅಪರಾಹ್ನ 2ರಿಂದ ಮಹಿಳಾ ಭಾಗವತರಿಂದ ಯಕ್ಷ-ಗಾನ ವೈಭವ ನಡೆಯಲಿದೆ. ಭಾಗವತರು: ಕಾವ್ಯಶ್ರೀ ನಾಯಕ್ ಆಜೇರು, ಅಮೃತ ಕೌಶಿಕ್ ರಾವ್ ಪುತ್ತಿಗೆ, ದಿವ್ಯಶ್ರೀ ಭಟ್ ಪುತ್ತಿಗೆ. ಶ್ರೀ ಶಿವಂ ಚೆಂಡೆ ಬಳಗ ಮೂಡುಬಿದಿರೆ ಇವರಿಂದ ಚೆಂಡೆ-ವಯಲಿನ್ ಪ್ಯೂಶನ್, ಭಕ್ತಿ ಗೀತಾ ಗಾಯನ, ಉಡುಪಿ ಅಮ್ಮ ಥೀಮ್ಸ್ ಮೆಲೋಡಿಯಸ್ ತಂಡದಿಂದ ಪ್ರಸ್ತುತಗೊಳ್ಳಲಿದೆ.ರಾತ್ರಿ 9.30ರಿಂದ : ವಿಜಯ ಕಲಾವಿದರು ಕಿನ್ನಿಗೋಳಿ, ಸಾಂಸಾರಿಕ ನಾಟಕ ಪ್ರದರ್ಶನವಿದೆ.
ತಿರುಮಲರಾಯ ಚೌಟ ವೇದಿಕೆಯಲ್ಲಿ ರಾತ್ರಿ 8ರಿಂದ ಜಗದೀಶ್ ಪುತ್ತೂರು ತಂಡದಿಂದ ಭಕ್ತಿರಸಮಂಜರಿ,ಅಡಿಗಳ ಶ್ರೀನಿವಾಸ ಭಟ್ ವೇದಿಕೆಯಲ್ಲಿ ಬೆಳಗ್ಗೆ 8ರಿಂದ ಭಜನಾ ಕಾರ್ಯಕ್ರಮವಿದೆ.