ಪುತ್ತೂರು: ಶ್ರೀ ದೇವತಾ ಸಮಿತಿ ಪುತ್ತೂರು ಆಶ್ರಯದಲ್ಲಿ ನಗರದ ಕಿಲ್ಲೆ ಮೈದಾನದಲ್ಲಿ ೭ ದಿನಗಳ ಕಾಲ ನಡೆಯುವ ೬೯ನೇ ವರ್ಷದ ಮಹಾ ಗಣೇಶೋತ್ಸವಕ್ಕೆ ಪೂರ್ವಭಾವಿಯಾಗಿ ನಾಗರಪಂಚಮಿ ದಿನವಾದ ಸೋಮವಾರ ಶ್ರೀ ವಿನಾಯಕನ ವಿಗ್ರಹ ರಚನಾ ಕಾರ್ಯಕ್ಕೆ ಮುಹೂರ್ತ ನೆರವೇರಿಸಲಾಯಿತು.ನಗರದ ಕೋರ್ಟ್ ರಸ್ತೆಯ ವಿಶ್ವ ಸಂಕೀರ್ಣ ಕಟ್ಟಡದಲ್ಲಿ ಮೂರ್ತಿ ರಚನೆ ಆರಂಭಿಸಲಾಯಿತು. ಪ್ರತಿ ವರ್ಷ ಕಿಲ್ಲೆ ಮೈದಾನ ಗಣೇಶೋತ್ಸವಕ್ಕೆ ನಾಗರ ಪಂಚಮಿ ದಿನದಂದೇ ಮೂರ್ತಿ ರಚನೆ ಮುಹೂರ್ತ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಅದರಂತೆ ಪುರೋಹಿತ ಸುಬ್ರಹ್ಮಣ್ಯ ಹೊಳ್ಳ ಮೃತ್ತಿಕೆ ಪೂಜೆ, ಪ್ರಾರ್ಥನೆ ನೆರವೇರಿಸಿದರು. ಮೂರ್ತಿ ರಚನೆಕಾರ ರಮೇಶ್ ಪೂಜಾರಿ ವಿಗ್ರಹ ವಿನ್ಯಾಸಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.