ಕನ್ನಡಪ್ರಭ ವಾರ್ತೆ ಪುತ್ತೂರು
ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಸಹಯೋಗದಲ್ಲಿ ಕರ್ನಾಟಕ ರಾಜ್ಯಾದ್ಯಂತ ಸಂಚರಿಸಿದ ನಂದಿ ರಥಯಾತ್ರೆ ಭಾನುವಾರ ಸಂಜೆ ಪುತ್ತೂರಿಗೆ ಆಗಮಿಸಿದ್ದು, ನಗರದ ದರ್ಬೆ ವೃತ್ತದ ಬಳಿ ರಥಯಾತ್ರೆಯನ್ನು ಸ್ವಾಗತಿಸಲಾಯಿತು. ಬಳಿಕ ಮೆರವಣಿಗೆ ಮೂಲಕ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಳಿಗೆ ತರಲಾಯಿತು.ದರ್ಬೆ ವೃತ್ತದಲ್ಲಿ ಶೋಭಾಯಾತ್ರೆಗೆ ವೈದ್ಯ ಡಾ. ಸಚಿನ್ ಶಂಕರ್ ಹಾರಕೆರೆ ತೆಂಗಿನಕಾಯಿ ಒಡೆದು ಶಂಖನಾದ ಮೊಳಗಿಸಿ ಚಾಲನೆ ನೀಡಿದರು. ಬಳಿಕ ಹೊರಟ ರಥಯಾತ್ರೆಯಲ್ಲಿ ಮುಂಭಾಗದಲ್ಲಿ ಶಂಖನಾದ, ಚೆಂಡೆ ವಾದ್ಯ ಘೋಷ, ಭಜನೆ, ಕುಣಿತ ಭಜನೆ, ಕಲಶ ಹಿಡಿದ ಮಹಿಳೆಯರು ಮುಖ್ಯರಸ್ತೆಯಲ್ಲಿ ಸಾಗಿಬಂದರು. ಅಲಂಕೃತ ರಥದಲ್ಲಿ ನಂದಿ ಗಮನಸೆಳೆಯಿತು. ಅಲ್ಲಲ್ಲಿ ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.ವಿಷ್ಣು ಸಹಸ್ರನಾಮ ಪಾರಾಯಣ:ನಂತರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದೇವಮಾರು ಗದ್ದೆಯಲ್ಲಿ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ, ಅನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೀನ್ಯಾರಿಗಾದೆಯೋ ಎಲೆ ಮಾನವ ಎಂಬ ಪುಣ್ಯಕೋಟಿಯ ನೃತ್ಯ ರೂಪಕವನ್ನು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದರು.ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ನಂದಿ ರಥಯಾತ್ರೆ ಸಂಚಲನಾ ಸಮಿತಿ ಪುತ್ತೂರಿನ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಕೋಶಾಧಿಕಾರಿ ಪ್ರಸನ್ನ ಮಾರ್ತಾ, ಸದಸ್ಯರಾದ ವಸಂತಲಕ್ಷ್ಮೀ, ದಿನೇಶ್ ಪಂಜಿಗ, ಸಂತೋಷ್ ರೈ ಕೈಕಾರ, ಜಿಲ್ಲಾ ಗೋಸೇವಾ ಗತಿವಿಧಿ ವಿಭಾಗದ ಪ್ರಕಾಶ್ಚಂದ್ರ ರೈ ಕೈಕಾರ, ಪ್ರಮುಖರಾದ ಯು.ಲೋಕೇಶ್ ಹೆಗ್ಡೆ, ನಿತೀಶ್ ಕುಮಾರ್ ಶಾಂತಿವನ, ದಾಮೋದರ ಪಾಟಾಳಿ, ನ್ಯಾಯವಾದಿ ಮಾಧವ ಪೂಜಾರಿ, ಡಾ. ರವೀಶ್ ಪಡುಮಲೆ, ದಯಾನಂದ ಉಜಿರೆಮಾರು, ಶಿವಕುಮಾರ್ ಕಲ್ಲಿಮಾರು, ರಾಧಾಕೃಷ್ಣ ಬೋರ್ಕರ್, ಉದ್ಯಮಿ ಗೋಪಾಲಕೃಷ್ಣ ಭಟ್, ಪಿ.ಜಿ. ಜಗನ್ನಿವಾಸ್ ರಾವ್, ಅಚ್ಯುತ ಭಟ್, ಮುರಳೀಕೃಷ್ಣ ಹಸಂತಡ್ಕ, ಕೃಷ್ಣವೇಣಿ ಮುಳಿಯ, ಶ್ರೀಧರ್ ತೆಂಕಿಲ, ಅಪ್ಪಯ್ಯ ಮಣಿಯಣಿ, ರಾಜೇಶ್ ಬನ್ನೂರು, ಚಂದ್ರಶೇಖರ್ ಬಪ್ಪಳಿಗೆ, ಹರೀಶ್ ಬಿಜತ್ರೆ, ನಾಗೇಶ್ ಕೆಮ್ಮಾಯಿ, ಸುಂದರ ಪೂಜಾರಿ ಬಡಾವು, ದೀಕ್ಷಾ ಪೈ, ಡಾ. ಸುರೇಶ್ ಪುತ್ತೂರಾಯ, ಭಾರತೀ ಕೌಡಿಚ್ಚಾರು, ವಿದ್ಯಾ ಆರ್. ಗೌರಿ, ರೂಪಲೇಖ ಸೇರಿದಂತೆ ಹಲವು ಮಂದಿ ಪಾಲ್ಗೊಂಡರು.