ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಸಹಕಾರಿ ಸಂಘ ಮಹಾಸಭೆ

KannadaprabhaNewsNetwork |  
Published : Jul 02, 2025, 12:19 AM IST
ಪುತ್ತೂರು ತಾ| ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಮಹಾಸಭೆ | Kannada Prabha

ಸಾರಾಂಶ

ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯು ನೆಲ್ಯಾಡಿಯಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯು ನೆಲ್ಯಾಡಿಯಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, ಕಳೆದ ಆರ್ಥಿಕ ಸಾಲಿನಲ್ಲಿ ಸಂಘವು ೩೪.೦೬ ಕೋಟಿ ರು. ವ್ಯವಹಾರ ಮಾಡಿದ್ದು, ೫೦.೮೩ ಲಕ್ಷ ರು. ನಿವ್ವಳ ಲಾಭಗಳಿಸಿದೆ. ಈ ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.೧೫ ಡಿವಿಡೆಂಡ್ ಹಾಗೂ ಸಂಘಕ್ಕೆ ರಬ್ಬರ್ ಶೀಟ್ ಮಾರಾಟ ಮಾಡಿದ ಸದಸ್ಯರಿಗೆ ಪ್ರತಿ ಕೆಜಿಗೆ ೨ ರುಪಾಯಿಯಂತೆ ಬೋನಸ್ ನೀಡಲು ತೀರ್ಮಾನಿಸಿದ್ದೇವೆ ಎಂದರು.ರಬ್ಬರ್ ವ್ಯಾಪಾರದಲ್ಲಿ ೧.೫೫ ಕೋಟಿ ರು. ಲಾಭ:ಕಳೆದ ಸಾಲಿನಲ್ಲಿ ಠೇವಣಿ ಸಂಗ್ರಹದಲ್ಲೂ ಹೆಚ್ಚಳವಾಗಿದೆ. ರಬ್ಬರ್ ಕೃಷಿಗೆ ಬೇಕಾದ ಸಲಕರಣೆ, ಅಡಕೆ ಕೃಷಿಗೆ ಮೈಲುತುತ್ತು, ರಾಸಾಯನಿಕ ಗೊಬ್ಬರಗಳನ್ನು ವ್ಯವಸ್ಥಿತವಾಗಿ ವಿತರಣೆ ಮಾಡಲಾಗುತ್ತಿದೆ. ಸಂಘದ ಸದಸ್ಯರಿಗೆ ರಬ್ಬರ್ ದಾಸ್ತಾನು, ಸಾಲ ಸೌಲಭ್ಯ ನೀಡಲಾಗುತ್ತಿದೆ. ಆರ್‌ಟಿಜಿಎಸ್, ನೆಫ್ಟ್ ಸೌಲಭ್ಯ ಒದಗಿಸಲಾಗಿದೆ. ಹವಾಮಾನ ವೈಪರಿತ್ಯ, ಖಾಸಗಿ ವ್ಯಾಪಾರಿಗಳಿಂದ ಸ್ಪರ್ಧೆ ಹಾಗೂ ರಬ್ಬರ್ ಧಾರಣೆಯಲ್ಲಿ ಏರಿಳಿತವಿದ್ದರೂ ಗುಣಮಟ್ಟದ ಸೇವೆ ನೀಡುವ ಮೂಲಕ ರಬ್ಬರ್ ವ್ಯಾಪಾರದಲ್ಲಿ ಕಳೆದ ಸಾಲಿನಲ್ಲಿ ೧.೫೫ ಕೋಟಿ ರು. ಲಾಭಗಳಿಸಲಾಗಿದೆ ಎಂದು ಪ್ರಸಾದ್ ಕೌಶಲ್ ಶೆಟ್ಟಿ ತಿಳಿಸಿದರು.ಸಿಬ್ಬಂದಿ ಕಲ್ಯಾಣನಿಧಿ ಮಾದರಿಯಲ್ಲಿಯೇ ರಬ್ಬರ್ ಬೆಳೆಗಾರರ ಕಲ್ಯಾಣ ನಿಧಿಯೂ ಆರಂಭಿಸಬೇಕು. ಈಶ್ವರಮಂಗಲ ಶಾಖೆಯಲ್ಲಿ ರಸಗೊಬ್ಬರ ಮಾರಾಟ ಮಾಡಿ, ರಬ್ಬರ್ ಬೆಳೆಗಾರರಿಗೆ ಟ್ಯಾಪಿಂಗ್ ಬಗ್ಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕು, ರಬ್ಬರ್ ಬೆಳೆಗಾರ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಮಹಾಸಭೆಯಲ್ಲಿ ಗುರುತಿಸುವ ಕೆಲಸ ಆಗಬೇಕು, ಸಂಘದಲ್ಲಿ ಠೇವಣಿಗೆ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ನೀಡಬೇಕೆಂಬ ಬೇಡಿಕೆಗಳು ವ್ಯಕ್ತವಾದವು.

ಅಶಕ್ತರಿಗೆ ಕೊಡುಗೆ:

೨೦೨೪-೨೫ನೇ ಸಾಲಿನಲ್ಲಿ ಸಂಘದ ಪ್ರಧಾನ ಕಚೇರಿ, ಶಾಖೆ ಹಾಗೂ ರಬ್ಬರ್ ಖರೀದಿ ಕೇಂದ್ರಗಳಿಗೆ ಅತೀ ಹೆಚ್ಚು ರಬ್ಬರ್ ಹಾಕಿದ ಸದಸ್ಯರನ್ನು ಹಾಗೂ ಹಿರಿಯ ಬೆಳೆಗಾರರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ೭ ಮಂದಿ ಅಶಕ್ತರಿಗೆ ವೀಲ್ ಚೇರ್ ಹಾಗೂ ನಡೆಯಲು ಕಷ್ಟಕರವಾಗಿರುವ ಮೂವರಿಗೆ ಈ ಸಂದರ್ಭದಲ್ಲಿ ವಾಕಿಂಗ್ ಸ್ಟಿಕ್ ವಿತರಣೆ ಮಾಡಲಾಯಿತು.ಸಂಘದ ಉಪಾಧ್ಯಕ್ಷ ರೋಯ್ ಅಬ್ರಹಾಂ, ನಿರ್ದೇಶಕರಾದ ಸಿ.ಜೋರ್ಜು ಕುಟ್ಟಿ, ಎನ್.ವಿ.ವ್ಯಾಸ, ರಮೇಶ ಕಲ್ಪುರೆ, ಸುಭಾಷ್ ನಾಯಕ್ ಎನ್., ಸತ್ಯಾನಂದ ಬಿ., ಶ್ರೀರಾಮ ಪಕ್ಕಳ, ಗಿರೀಶ್ ಸಾಲಿಯಾನ್ ಬಿ., ಜಯರಾಮ ಬಿ., ಅರುಣಾಕ್ಷಿ, ಗ್ರೇಸಿ ನೈನಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯನಿರ್ವಾಹಣಾಧಿಕಾರಿ ಶಶಿಪ್ರಭಾ ಕೆ. ವರದಿ ವಾಚಿಸಿದರು. ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ರೋಯ್ ಅಬ್ರಹಾಂ ವಂದಿಸಿದರು. ಸಿಬ್ಬಂದಿ ರುಕ್ಮಯ ನಿರೂಪಿಸಿದರು.

PREV

Recommended Stories

ಕೂಡಲೇ ಹಳದಿ ಮಾರ್ಗ ಮೆಟ್ರೋ ಉದ್ಘಾಟನೆ ಮಾಡಿ : ತೇಜಸ್ವಿ ಆಗ್ರಹ
ಐದು ಸಾವಿರ ಕೋಟಿ ರು. ವೆಚ್ಚದ 5ನೇ ಹಂತದ ಕಾವೇರಿ ಯೋಜನೆಗೆ ಕೇವಲ 70 ಸಾವಿರ ಸಂಪರ್ಕ!