ಪುತ್ತೂರು ದೇವಳ: ಸೌದೆಯ ಸ್ಟೀಮ್ ಒಲೆ ಉದ್ಘಾಟನೆ

KannadaprabhaNewsNetwork |  
Published : Jun 14, 2026, 03:00 AM IST
ಫೋಟೋ: ೧೩ಪಿಟಿಆರ್-ಟೆಂಪಲ್ಕರ್ಣಾಟಕ ಬ್ಯಾಂಕಿನ ಸಿ.ಎಸ್.ಆರ್.ನಿಧಿಯಿಂದ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಸೌದೆಯ ಸ್ಟೀಮ್ ಒಲೆ ಕೊಡುಗೆಯಾಗಿ ನೀಡಲಾಯಿತು. | Kannada Prabha

ಸಾರಾಂಶ

ಕರ್ಣಾಟಕ ಬ್ಯಾಂಕಿನ ಸಿ.ಎಸ್.ಆರ್.ನಿಧಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅನ್ನ ಪ್ರಸಾದ ವಿತರಣೆಗಾಗಿ ಅನ್ನ ಬೇಯಿಸಲೆಂದು ನೀಡಲಾದ ರು. ೫ ಲಕ್ಷ ವೆಚ್ಚದ ಸೌದೆಯ ಸ್ಟೀಮ್ ಒಲೆಯನ್ನು ಶನಿವಾರ ಉದ್ಘಾಟಿಸಲಾಯಿತು.

ಪುತ್ತೂರು: ಕರ್ಣಾಟಕ ಬ್ಯಾಂಕಿನ ಸಿ.ಎಸ್.ಆರ್.ನಿಧಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅನ್ನ ಪ್ರಸಾದ ವಿತರಣೆಗಾಗಿ ಅನ್ನ ಬೇಯಿಸಲೆಂದು ನೀಡಲಾದ ರು. ೫ ಲಕ್ಷ ವೆಚ್ಚದ ಸೌದೆಯ ಸ್ಟೀಮ್ ಒಲೆಯನ್ನು ಶನಿವಾರ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ದೇವಸ್ಥಾನದಲ್ಲಿ ಪ್ರತಿನಿತ್ಯವೂ ೪ ಸಾವಿರದಷ್ಟು ಭಕ್ತರಿಗೆ ವ್ಯವಸ್ಥಿತ ರೀತಿಯಲ್ಲಿ ಅನ್ನಪ್ರಸಾದ ವಿತರಿಸಲಾಗುತ್ತಿದೆ. ಇದಕ್ಕಾಗಿ ಬಳಸುವ ಗ್ಯಾಸ್ ಹೊರೆ ತಪ್ಪಿಸಲು ಭಕ್ತರು ಕಟ್ಟಿಗೆಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಇದೀಗ ಇಲ್ಲಿ ಆರೇಳು ತಿಂಗಳಿಗೆ ಬೇಕಾದಷ್ಟು ಕಟ್ಟಿಗೆಯ ಸಂಗ್ರಹವಿದೆ. ಪ್ರಸ್ತುತ ಕರ್ಣಾಟಕ ಬ್ಯಾಂಕಿನಿಂದ ಸೌದೆಯ ಸ್ಟೀಮ್ ಒಲೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಅಲ್ಲದೆ ಸುಮಾರು ರು ೩೫ ಲಕ್ಷ ವೆಚ್ಚದ ಅಕ್ಕಿಯನ್ನೂ ಭಕ್ತರು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಶ್ರೀಶ ಕುಮಾರ್ ಹಾಗೂ ಸಿಬಂದಿ ಕಿರಣ್ ಕುಮಾರ್ ಅವರನ್ನು ಬ್ಯಾಂಕಿನ ಪರವಾಗಿ ಕ್ಷೇತ್ರದಿಂದ ಗೌರವಿಸಲಾಯಿತು. ಪ್ರಧಾನ ಅರ್ಚಕ ವೇ.ಮೂ. ವಿ.ಎಸ್.ಭಟ್ ಅವರು ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಈಶ್ವರ ಬೇಡೇಕರ್, ಕೃಷ್ಣವೇಣಿ, ಮಹಾಬಲ ರೈ ವಳತ್ತಡ್ಕ, ಸುಭಾಷ್ ರೈ ಬೆಳ್ಳಿಪ್ಪಾಡಿ, ದಿನೇಶ್ ಕುಲಾಲ್ ಪಿ.ವಿ. ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರಗಿರಿ ಬೆಟ್ಟದಲ್ಲಿ ಧರ್ಮಭೂಷಣ ಜಿನೈಕ್ಯ
ವಿದ್ಯುತ್ ಖಾಸಗೀಕರಣ: ತೀವ್ರಗೊಂಡ ವಿರೋಧ