ಮೆಡಿಕಲ್ ಕಾಲೇಜು ಪಕ್ಕದಲ್ಲೇ ಆಸ್ಪತ್ರೆ ಶಾಸಕರ ಮುಂದಾಲೋಚನೆ ಫಲ: ಹೇಮನಾಥ ಶೆಟ್ಟಿ

KannadaprabhaNewsNetwork |  
Published : Mar 16, 2026, 01:45 AM IST
ಪೋಟೋ:12ಪಿಟಿಆರ್-ಕಾಂಗ್ರೆಸ್ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿದರು.  | Kannada Prabha

ಸಾರಾಂಶ

ಮೆಡಿಕಲ್ ಕಾಲೇಜು ನಿರ್ಮಾಣದ ಸಂದರ್ಭದಲ್ಲಿ ಆಸ್ಪತ್ರೆ ಇರಬೇಕಾಗಿರುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರಸ್ತಾಪಿತ ಸರ್ಕಾರಿ ಮೆಡಿಕಲ್ ಕಾಲೇಜು ಪಕ್ಕದಲ್ಲೇ ೩೦೦ ಬೆಡ್‌ನ ಸರ್ಕಾರಿ ಕಾಲೇಜ್ ನಿರ್ಮಿಸಲು ಹೊರಟಿರುವುದು ಶಾಸಕ ಅಶೋಕ್ ರೈ ಅವರ ಮುಂದಾಲೋಚನೆ ಫಲವಾಗಿದೆ. ಆಸ್ಪತ್ರೆ ಒಂದೆಡೆ ಮೆಡಿಕಲ್ ಕಾಲೇಜ್ ಇನ್ನೊಂದೆಡೆ ಆದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಶಾಸಕರು ಸೇಡಿಯಾಪುವಿನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಪುತ್ತೂರು: ಮೆಡಿಕಲ್ ಕಾಲೇಜು ನಿರ್ಮಾಣದ ಸಂದರ್ಭದಲ್ಲಿ ಆಸ್ಪತ್ರೆ ಇರಬೇಕಾಗಿರುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರಸ್ತಾಪಿತ ಸರ್ಕಾರಿ ಮೆಡಿಕಲ್ ಕಾಲೇಜು ಪಕ್ಕದಲ್ಲೇ ೩೦೦ ಬೆಡ್‌ನ ಸರ್ಕಾರಿ ಕಾಲೇಜ್ ನಿರ್ಮಿಸಲು ಹೊರಟಿರುವುದು ಶಾಸಕ ಅಶೋಕ್ ರೈ ಅವರ ಮುಂದಾಲೋಚನೆ ಫಲವಾಗಿದೆ. ಆಸ್ಪತ್ರೆ ಒಂದೆಡೆ ಮೆಡಿಕಲ್ ಕಾಲೇಜ್ ಇನ್ನೊಂದೆಡೆ ಆದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಶಾಸಕರು ಸೇಡಿಯಾಪುವಿನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಪುತ್ತೂರಿನಲ್ಲಿ ಹಲವಾರು ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಇದರ ಜೊತೆಗೆ ನೂತನ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಪೂರಕವಾಗಿ ೩೦೦ ಬೆಡ್‌ನ ಆಸ್ಪತ್ರೆಗೆ ಸರ್ಕಾರದಿಂದ ಅನುಮೋದನೆ ದೊರಕಿದೆ ಎಂದರು.ಹಿಂದೆಲ್ಲ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜ್ ಆಗುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದ ಬಿಜೆಪಿಗರು ಇದೀಗ ಪ್ರಸ್ತಾವಿತ ಆಸ್ಪತ್ರೆಯು ಮೆಡಿಕಲ್ ಕಾಲೇಜ್‌ಗೆ ಮೀಸಲಿಟ್ಟಿರುವ ಜಾಗದಲ್ಲಿ ನಿರ್ಮಿಸುವ ಬದಲಿಗೆ ಸರ್ಕಾರಿ ಆಸ್ಪತ್ರೆ ಇರುವ ಜಾಗದಲ್ಲೇ ನಿರ್ಮಿಸಬೇಕು ಎಂದು ಹೇಳುತ್ತಿರುವುದು ನಾಚಿಕೆಗೇಡಿನ ವಿಚಾರ. ದೇವಳದಲ್ಲಿ ಮನೆ ಕಳೆದುಕೊಂಡಿರುವ ವ್ಯಕ್ತಿಯು ಆ ಕೋಪದಲ್ಲಿ ಇದೀಗ ಆಸ್ಪತ್ರೆಯ ವಿಚಾರದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಶಾಸಕಿ ಶಕುಂತಳಾ ಶೆಟ್ಟಿ ಶಾಸಕರಾಗಿದ್ದ ಸಂದರ್ಭದಲ್ಲಿ ಮೆಡಿಕಲ್ ಕಾಲೇಜ್‌ಗೆ ಸ್ಥಳ ಗುರುತು ಮಾಡಿಸಿದ್ದರು. ಅಶೋಕ್ ರೈ ಶಾಸಕರಾದ ೮ ದಿನಗಳಲ್ಲಿಯೇ ಜಿಲ್ಲಾಧಿಕಾರಿಗಳ ಮೂಲಕ ಈ ಜಾಗ ಪಹಣಿ ಪತ್ರದಲ್ಲಿ ದಾಖಲಾಗುಂತೆ ಮಾಡಿಸಿದರು. ಈ ಜಾಗದಲ್ಲಿ ಮೀನು ವ್ಯಾಪಾರ ನಡೆಸಲು ಮಾಜಿ ಶಾಸಕ ಸಂಜೀವ ಮಠಂದೂರು ಹೊರಟಿದ್ದರು. ಆದರೆ ನಾವು ಹೋರಾಟ ನಡೆಸಿ ಉಳಿಸಿಕೊಂಡಿದ್ದೆವು. ಆಗ ಮಾತನಾಡದ ಬಿಜೆಪಿಗರು ಇದೀಗ ಮೆಡಿಕಲ್ ಕಾಲೇಜ್ ಆರಂಭಗೊಳ್ಳುವ ಹಂತದಲ್ಲಿ ಯಾರಲ್ಲೋ ಮಾತನಾಡಿಸುತ್ತಿದ್ದಾರೆ ಎಂದು ದೂರಿದರು.ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಪುಡಾ ಸದಸ್ಯ ಲ್ಯಾನ್ಸಿ ಮಸ್ಕರೇನ್ಹಸ್, ಸಾಮಾಜಿಕ ಜಾಲತಾಣದ ಸುಪ್ರೀತ್ ಕಣ್ಣಾರಾಯ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೋನು ಬಪ್ಪಳಿಗೆ ಮತ್ತು ಗಂಗಾಧರ ಶೆಟ್ಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಆಧಾರ್ ಸೀಡಿಂಗ್ - ಮ್ಯಾಪಿಂಗ್ ಕಡ್ಡಾಯ: ಶಶಿಧರ್ ಕೋಸಂಬೆ
ಅನೈತಿಕ ಚಟುವಟಿಕೆಗಳ ಬಗ್ಗೆ ನಿಗಾ: ಡಾ.ಮಂತರ್ ಗೌಡ ಸೂಚನೆ