ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೨೧ ಅಕ್ರಮ ಸಕ್ರಮ ಬೈಠಕ್ ನಡೆಸುವ ಮೂಲಕ ರಾಜ್ಯದಲ್ಲೇ ಹೊಸ ಇತಿಹಾಸ ನಿರ್ಮಾಣ ಮಾಡಿದ್ದೇವೆ. ರಾಜ್ಯದ ಯಾವ ವಿಧಾನಸಭಾ ಕ್ಷೇತ್ರದಲ್ಲೂ ಇಷೊಂದು ಪ್ರಮಾಣದಲ್ಲಿ ಅಕ್ರಮ ಸಕ್ರಮ ಕಡತ ವಿಲೇವಾರಿ ನಡೆದಿಲ್ಲ. ಪುತ್ತೂರಿನಲ್ಲಿ ೧೫೦೦ಕ್ಕೂ ಅಧಿಕ ಕಡತಗಳನ್ನು ಮಂಜೂರು ಮಾಡಲಾಗಿದೆ. ಈ ಸಾಧನೆಗೆ ಬಗ್ಗೆ ರಾಜ್ಯದ ಐಎಎಸ್ ಅಧಿಕಾರಿಗಳು ನಮ್ಮಲ್ಲಿ ಮಾಹಿತಿ ಕೇಳಿ ಚರ್ಚಿಸುತ್ತಿದ್ದಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೨೧ ಅಕ್ರಮ ಸಕ್ರಮ ಬೈಠಕ್ ನಡೆಸುವ ಮೂಲಕ ರಾಜ್ಯದಲ್ಲೇ ಹೊಸ ಇತಿಹಾಸ ನಿರ್ಮಾಣ ಮಾಡಿದ್ದೇವೆ. ರಾಜ್ಯದ ಯಾವ ವಿಧಾನಸಭಾ ಕ್ಷೇತ್ರದಲ್ಲೂ ಇಷೊಂದು ಪ್ರಮಾಣದಲ್ಲಿ ಅಕ್ರಮ ಸಕ್ರಮ ಕಡತ ವಿಲೇವಾರಿ ನಡೆದಿಲ್ಲ. ಪುತ್ತೂರಿನಲ್ಲಿ ೧೫೦೦ಕ್ಕೂ ಅಧಿಕ ಕಡತಗಳನ್ನು ಮಂಜೂರು ಮಾಡಲಾಗಿದೆ. ಈ ಸಾಧನೆಗೆ ಬಗ್ಗೆ ರಾಜ್ಯದ ಐಎಎಸ್ ಅಧಿಕಾರಿಗಳು ನಮ್ಮಲ್ಲಿ ಮಾಹಿತಿ ಕೇಳಿ ಚರ್ಚಿಸುತ್ತಿದ್ದಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರಿನ ನರಿಮೊಗರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಅಕ್ರಮ ಸಕ್ರಮ ಕಡತ ವಿಲೇವಾರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹಿಂದೆ ಮಾಡಿದ ಅಕ್ರಮ ಸಕ್ರಮದಲ್ಲಿ ಕೇವಲ ಆರ್‌ಟಿಸಿಯಲ್ಲಿ ಮಾತ್ರ ನಿಮ್ಮ ಹೆಸರು ಇತ್ತು. ಆದರೆ ಅದು ಪ್ಲಾಟಿಂಗ್ ಆಗುತ್ತಿರಲಿಲ್ಲ. ಈಗ ಮಾಡಲಾಗುತ್ತಿರುವ ಅಕ್ರಮ ಸಕ್ರಮದಲ್ಲಿ ಪ್ಲಾಟಿಂಗ್ ಆಗಿಯೇ ನಿಮ್ಮ ದಾಖಲಾತಿ ದೊರೆಯುತ್ತದೆ. ಹಾಗಾಗಿ ದಾಖಲಾತಿ ಸಿಗಲು ಸ್ವಲ್ಪ ವಿಳಂಬವಾಗುತ್ತಿದೆ. ಸಿಕ್ಕಿದ ಮೇಲೆ ಅದು ಶಾಶ್ವತ ದಾಖಲೆಯಾಗುತ್ತದೆ ಎಂದರು.ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಅವರು ಮಾತನಾಡಿ, ಹಿಂದೆ ತಾಲೂಕು ಕಚೇರಿಯ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದ್ದ ಅಕ್ರಮ ಸಕ್ರಮ ಬೈಠಕ್‌ಗಳನ್ನು ಗ್ರಾಮೀಣ ತಂದು ಜನರ ಮನೆ ಬಾಗಲಿಗೆ ತಂದು ಖ್ಯಾತಿ ಶಾಸಕ ಅಶೋಕ್ ರೈ ಅವರದ್ದಾಗಿದೆ. ೨೧ ಗ್ರಾಮಗಳಲ್ಲಿ ಅಕ್ರಮ ಸಕ್ರಮ ಬೈಠಕ್ ನಡೆಸುವ ಮೂಲಕ ಅಕ್ರಮ ಸಕ್ರಮ, ೯೪ಸಿ, ೯೪ಸಿಸಿ ಕಡತಗಳನ್ನು ಮಂಜೂರು ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ವ್ಯಕ್ತಿಯೊಬ್ಬ ಒಂದು ಶಕ್ತಿಯಾಗಿ ಹೇಗೆ ಕೆಲಸ ಮಾಡಬಹುದು ಎಂಬುವುದನ್ನು ಸಾಧಿಸಿ ತೋರಿಸಿದ ಜನಪ್ರತಿನಿಧಿಯಾಗಿದ್ದಾರೆ ಎಂದರು.ಪುತ್ತೂರು ತಹಸೀಲ್ದಾರ್ ಎಸ್.ಜಿ. ಕೂಡಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಂದಾಯ ಇಲಾಖೆಯ ರೆವಿನ್ಯೂ ಇನ್‌ಸ್ಪೆಕ್ಟರ್ ಗೋಪಾಲ್ ಸ್ವಾಗತಿಸಿದರು. ವೇದಿಕೆಯಲ್ಲಿ ತಾಲೂಕು ಪಂಚ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ ಮತ್ತು ರೂಪರೇಖಾ ಆಳ್ವ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.