ಭರತನಾಟ್ಯದಿಂದ ಸಂಸ್ಕಾರ: ಡಾ.ಧನಂಜಯ ಕುಂಬ್ಳೆ

KannadaprabhaNewsNetwork |  
Published : Nov 24, 2026, 01:30 AM IST
ಕುಂಬ್ಳೆ | Kannada Prabha

ಸಾರಾಂಶ

ಜೈನಭವನದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಇದರ 22ನೇ ವರ್ಷದ ವಾರ್ಷಿಕೋತ್ಸವದ ‘ವರ್ಷ ಸಂಭ್ರಮ-22’ ಕಾರ್ಯಕ್ರಮ

ಪುತ್ತೂರು: ಭರತನಾಟ್ಯ ಕಲೆ ಸಮಾಜದಲ್ಲಿ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ರೂಪಿಸುವ ಕಾರ್ಯ ಮಾಡುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಹೇಳಿದರು.ಭಾನುವಾರ ಇಲ್ಲಿನ ಜೈನಭವನದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಇದರ 22ನೇ ವರ್ಷದ ವಾರ್ಷಿಕೋತ್ಸವದ ‘ವರ್ಷ ಸಂಭ್ರಮ-22’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ ಪುತ್ತೂರು ಘಟಕ ಅಧ್ಯಕ್ಷ ಉಮೇಶ್‌ ನಾಯಕ್‌ ಮಾತನಾಡಿ, ಕಲೆ, ಸಾಹಿತ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪುತ್ತೂರು ನಿರಂತರವಾಗಿ ಬೆಳೆವಣಿಗೆ ಕಾಣುತ್ತಿದೆ. ಇಲ್ಲಿನ ವಿವಿಧ ಕಲಾ ಕೇಂದ್ರಗಳ ಗುರುಗಳು ತಪಸ್ವಿಗಳಂತೆ ತಮ್ಮ ಜ್ಞಾನ ಮತ್ತು ಕಲಾ ಅನುಭವಗಳನ್ನು ಶಿಷ್ಯರಿಗೆ ಧಾರೆ ಎರೆಯುತ್ತಿದ್ದಾರೆ ಎಂದು.

ಶ್ರೀಶಾರದಾ ಕಲಾಕೇಂದ್ರ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಿದ್ವಾನ್‌ ಸುದರ್ಶನ ಎಂ.ಎಲ್‌.ಭಟ್‌ ಕಾರ್ಯಕ್ರಮ ಉದ್ಘಾಟಿಸಿ, ಭರತನಾಟ್ಯ ಸಾಮಾನ್ಯ ಕಲೆ ಅಲ್ಲ, ಅದೊಂದು ದೈವಿ ಕಲೆ ಎಂಬುದನ್ನು ನೃತ್ಯಗುರು ಶಾಲಿನಿ ಆತ್ಮಭೂಷಣ್‌ ತೋರಿಸಿಕೊಟ್ಟಿದ್ದಾರೆ ಎಂದರು.

ವಿಟ್ಲ ಆರ್‌.ಕೆ.ಸಮೂಹ ಸಂಸ್ಥೆ ನಿರ್ದೇಶಕ ರಾಜೇಶ್‌ ವಿಟ್ಲ ಅವರಿಗೆ ‘ನೃತ್ಯೋಪಾಸನಾ’ ಗೌರವ ನೀಡಿ ಗೌರವಿಸಲಾಯಿತು.

ನೃತ್ಯ ಪೋಷಣ ಯೋಜನೆಯಡಿ ಸಂಪೂರ್ಣ ಉಚಿತ ನೃತ್ಯ ಶಿಕ್ಷಣ ನೀಡುವ ಅಂಗವಾಗಿ ತನುಶ್ರೀ ವಿಟ್ಲ ಹಾಗೂ ಜಸಿಕಾ ಪುತ್ತೂರು ಇವರಿಗೆ ನೃತ್ಯಾಭರಣ ಹಸ್ತಾಂತರಿಸಲಾಯಿತು. ಭರತನಾಟ್ಯ ಜೂನಿಯರ್‌, ಸೀನಿಯರ್‌, ವಿದ್ವತ್‌ ಪೂರ್ವ, ವಿದ್ವತ್‌ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಕಾಡೆಮಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಅಕಾಡೆಮಿಯ ನೃತ್ಯಗುರು ಶಾಲಿನಿ ಆತ್ಮಭೂಷಣ್‌ ಇವರಿಗೆ ಶಿಷ್ಯರು ಹಾಗೂ ಹೆತ್ತವರಿಂದ ಗುರುವಂದನೆ ನೆರವೇರಿತು. ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್‌ ಪ್ರಾಸ್ತಾವಿಕ ಮಾತನಾಡಿದರು.

ಅಕಾಡೆಮಿ ಅಧ್ಯಕ್ಷ ಮಂಜುನಾಥ ಪಿ.ಎಸ್‌, ಉಪಾಧ್ಯಕ್ಷ ಡಾ.ಕೃಷ್ಣಕುಮಾರ್‌, ಕಾರ್ಯದರ್ಶಿ ಆತ್ಮಭೂಷಣ್‌, ಜತೆ ಕಾರ್ಯದರ್ಶಿ ರಾಧೇಶ್‌ ಮತ್ತಿತರರಿದ್ದರು. ಸೌಮ್ಯ ವಂದಿಸಿದರು. ಡಾ.ವಿಜಯ ಸರಸ್ವತಿ ನಿರೂಪಿಸಿದರು.

ಭರತನಾಟ್ಯ ಕಾರ್ಯಕ್ರಮದಲ್ಲಿ ನಟುವಾಂಗ ವಿದುಷಿ ಶಾಲಿನಿ ಆತ್ಮಭೂಷಣ್‌, ಹಾಡುಗಾರಿಕೆಯಲ್ಲಿ ವಿದ್ವಾನ್‌ ಕೃಷ್ಣಾಚಾರ್‌ ಪಾಣೆಮಂಗಳೂರು ಹಾಗೂ ವಿದುಷಿ ನಿಶಿತಾ ಪುತ್ತೂರು, ಮೃದಂಗದಲ್ಲಿ ವಿದ್ವಾನ್‌ ಗೋಪಾಲಕೃಷ್ಣ ಹೊಸಮನೆ ಹಾಗೂ ವಿದ್ವಾನ್‌ ಗೀತೇಶ್‌ ನೀಲೇಶ್ವರ, ವಯಲಿನ್‌ನಲ್ಲಿ ವಿದ್ವಾನ್‌ ಗಣರಾಜ್‌ ಕಾರ್ಲೆ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಯೋಜನೆಯಡಿ ದ.ಕ. ಜಿಲ್ಲೆಗೆ 4 ಸಾವಿರ ಕೋಟಿ ರು. ವ್ಯಯ: ಭರತ್‌
ಮೇಕೋಡು ಪ್ರಜಾಸೇವಾ ಆಂದೋಲನ