ಬೆಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಬೆಂಗಳೂರು ಕ್ಯಾಂಪಸ್‌ನಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಕ್ವಾಂಟಮ್ ಮಿಷನ್‌ನಡಿ, ಸ್ವದೇಶೀ ಕ್ವಾಂಟಮ್ ಹಾರ್ಡ್‌ವೇರ್ ಅಭಿವೃದ್ಧಿಯ ಓಪನ್ ಆರ್ಕಿಟೆಕ್ಚರ್ ವ್ಯವಸ್ಥೆ ಕ್ವಾಂಟಮ್-ಹಬ್ @ ಮಾಹೆ (ಕ್ಯು-ಹಬ್@ಮಾಹೆ)ಯನ್ನು ಆರಂಭಿಸಲಾಗಿದೆ.ಕ್ಯು-ಹಬ್@ಮಾಹೆಯು ವಿನ್ಯಾಸದಿಂದ ಅನುಷ್ಠಾನದ ತನಕ, ಕ್ವಾಂಟಮ್ ಹಾರ್ಡ್‌ವೇರ್ ಪ್ರಯೋಗಗಳು, ಡೀಪ್ ಟೆಕ್ ಸ್ಟಾರ್ಟಪ್ ಇಂಕ್ಯುಬೇಶನ್, ಮಾನವ ಸಂಪನ್ಮೂಲ ಅಭಿವೃದ್ಧಿ, ಪರೀಕ್ಷೆ ಮತ್ತು ಏಕೀಕೃತ ಶೈಕ್ಷಣಿಕ ವ್ಯವಸ್ಥೆ, ಸಂಶೋಧನೆಗಳನ್ನು ಒಳಗೊಂಡಿದೆ ಮತ್ತು ಕ್ವಾಂಟಮ್ ತಂತ್ರಜ್ಞಾನದಲ್ಲಿ ಭಾರತವನ್ನು ಸಂಪೂರ್ಣವಾಗಿ ಸ್ವಾವಲಂಬಿಯಾಗಿಸುವ ಗುರಿ ಹೊಂದಿದೆ.
ಕ್ಯು-ಹಬ್@ಮಾಹೆ 2026ರ ಡಿಸೆಂಬರಿನೊಳಗೆ 100 ಕ್ವಾಂಟಮ್ ಇಂಜಿನಿಯರ್‌ಗಳನ್ನು ತರಬೇತಿಗೊಳಿಸಲಿದೆ. ಈ ಕೇಂದ್ರ, ರಾಷ್ಟ್ರೀಯ ಪರೀಕ್ಷಾ ಮತ್ತು ಮೌಲ್ಯಮಾಪನ ಕೇಂದ್ರವಾಗಿಯೂ ಕಾರ್ಯಾಚರಿಸಲಿದ್ದು, ಸೆಪ್ಟೆಂಬರ್ 2026ರಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಒಪ್ಪಂದಕ್ಕೆ ಸಹಿ ಕಾರ್ಯಕ್ರಮದಲ್ಲಿ ಮಾಹೆಯ ಕುಲಪತಿ ಲೆ. ಜ (ಡಾ.) ಎಂ. ಡಿ. ವೆಂಕಟೇಶ್, ಮಾಹೆ ಬೆಂಗಳೂರು ಸಹಉಪಕುಲಪತಿ ಪ್ರೊ. (ಡಾ.) ಮಧು ವೀರರಾಘವನ್, ಎಂಐಟಿಯ ನಿರ್ದೇಶಕ ಪ್ರೊ. ಐವೆನ್ ಜೋಸ್, ಕ್ವಾಂಟ್ರೊಲ್ಒಎಕ್ಸ್‌ನ ಅಧಿಕಾರಿ ವಿಶಾಲ್, ಬ್ಲೂಫೋರ್ಸ್ ನ ಡಾ. ಡೇವಿಡ್ ಗುನ್ನರ್ಸನ್, ಸಿ-ಡಿಎಸಿ ಇದರ ಡಾ. ಸುದರ್ಶನ್, ಕ್ಯುಬ್ಲಾಕ್ಸ್ ನ ಡಾ. ನೀಲ್ಸ್ ಬುಲ್ಟಿಂಕ್, ಕಾನ್‌ಸೈನ್ಸ್ ನ ಡಾ. ಮಾರ್ಕಸ್ ರಾಮ್ಮೆಲ್ ಉಪಸ್ಥಿತರಿದ್ದರು.*ಕ್ಯು-ಹಬ್@ಮಾಹೆ ರಾಷ್ಟ್ರೀಯ ಕ್ವಾಂಟಮ್ ಮಿಷನ್ನಿನ ದೂರದೃಷ್ಟಿಗನುಗುಣವಾಗಿ, ಸ್ವಾವಲಂಬಿ, ಸ್ವಾಯತ್ತ ವೈಜ್ಞಾನಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಸಂಶೋಧನೆ, ಹಾರ್ಡ್‌ವೇರ್ ಅಭಿವೃದ್ಧಿ, ಮತ್ತು ಮಾನವ ಸಂಪನ್ಮೂಲ ತರಬೇತಿಯನ್ನು ಒಂದೆಡೆ ಒದಗಿಸುವ ಮೂಲಕ, ಆಧುನಿಕ ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ನಾಯಕತ್ವಕ್ಕೆ ಮಹತ್ವಪೂರ್ಣ ಕೊಡುಗೆ ನೀಡುವುದು ನಮ್ಮ ಗುರಿಯಾಗಿದೆ.-ಲೆ. ಜ (ಡಾ.) ಎಂ. ಡಿ. ವೆಂಕಟೇಶ್, ಮಾಹೆಯ ಕುಲಪತಿ