ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಸೌಲಭ್ಯ

KannadaprabhaNewsNetwork |  
Published : Nov 25, 2024, 01:03 AM IST
ಫೋಟೋ:೨೩ಪಿಟಿಆರ್-ಡಿಸಿಆರ್ಕ್ಯೂಆರ್ ಕೋಡ್ ಅಳವಡಿಸುವ ಕಾರ್ಯಕ್ಕೆ ಸಂಸ್ಥೆಯ ನಿರ್ದೇಶಕರಾದ ವಿಜ್ಞಾನಿ ಡಾ. ದಿನಕರ ಅಡಿಗ ಚಾಲನೆ ನೀಡಿದರು. | Kannada Prabha

ಸಾರಾಂಶ

ಸಂಸ್ಥೆಯ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ನೇತೃತ್ವದಲ್ಲಿ ತಂಡದ ಸದಸ್ಯರಾದ ಜಿಜೋ ಜೊಸೆಫ್, ತ್ರಿವೇಣಿ, ಪ್ರಕಾಶ್ ಭಟ್ ಮತ್ತು ರಮ್ಯಾ ಈ ವ್ಯವಸ್ಥೆ ಅಭಿವೃದ್ಧಿಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಗೇರು ಬೆಳೆಗಾರರ ಸಂವಹನದ ಉದ್ದೇಶಕ್ಕಾಗಿ ಪುತ್ತೂರಿನ ಗೇರು ಸಂಶೋಧನಾ ನಿದೇಶನಾಲಯ (ಡಿಸಿಆರ್) ತ್ವರಿತ ಪ್ರತಿಕ್ರಿಯೆ (ಕ್ವಿಕ್ ರೆನ್ಪಾನ್ಸ್) ಕೋಡ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಗೇರು ಬೆಳೆಗಾರರು ಈ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಈ ಕೋಡ್ ಅನುಕೂಲವಾಗಲಿದೆ.

ಡಿಸಿಆರ್ ಗೇರು ನರ್ಸರಿಯಲ್ಲಿ ಮಾರಾಟ ಮಾಡಲಾಗುತ್ತಿರುವ ಎಲ್ಲ ಗೇರು ತಳಿಗಳಿಗೂ ಕ್ಯೂಆರ್ ಕೋಡ್ ಅಳವಡಿಸುವ ಕಾರ್ಯಕ್ಕೆ ಸಂಸ್ಥೆಯ ನಿರ್ದೇಶಕರಾದ ವಿಜ್ಞಾನಿ ಡಾ. ದಿನಕರ ಅಡಿಗ ಶುಕ್ರವಾರ ಚಾಲನೆ ನೀಡಿದರು.

ರಾಷ್ಟ್ರದ ವಿವಿಧ ಗೇರು ಸಂಶೋಧನಾ ಕೇಂದ್ರಗಳಲ್ಲಿ ಮಾರಾಟ ಮಾಡುವ ವಿವಿಧ ಗೇರು ತಳಿಗಳ ಮಾಹಿತಿ ನೀಡುವ ಕ್ಯೂ ಆರ್ ಕೋಡ್ ಗಳನ್ನು ಒಂದೆಡೆ ಸಿಗುವಂತೆ ಮಾಡಲಾಗಿದೆ. ಇಲ್ಲಿನ ನರ್ಸರಿಗೆ ಭೇಟಿ ನೀಡುವ ಆಸಕ್ತ ರೈತರು ಯಾವುದೇ ತಳಿಯ ಬಗ್ಗೆ ಮಾಹಿತಿಯನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಿಳಿಯಬಹುದು. ಇದನ್ನು ಎಷ್ಟು ಜನ ಬಳಸಿದ್ದಾರೆ ಎಂಬ ಮಾಹಿತಿ ಕೇಂದ್ರಕ್ಕೆ ಸಿಗುವ ಹಾಗೆಯೂ ವಿನ್ಯಾಸವಿರುವುದರಿಂದ ಕೋಡ್‌ನ ಒಟ್ಟು ಬಳಕೆಯು ಸಂಸ್ಥೆಗೆ ಮನವರಿಕೆಯಾಗಲಿದೆ. ಆಸಕ್ತ ರೈತರು https://cashew.icar.gov.in/wp-content/uploads/2024/11/QR_for_cashew_varieties.pdf ನಲ್ಲಿ ವೀಕ್ಷಿಸಬಹುದಾಗಿದೆ.

ಸಂಸ್ಥೆಯ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ನೇತೃತ್ವದಲ್ಲಿ ತಂಡದ ಸದಸ್ಯರಾದ ಜಿಜೋ ಜೊಸೆಫ್, ತ್ರಿವೇಣಿ, ಪ್ರಕಾಶ್ ಭಟ್ ಮತ್ತು ರಮ್ಯಾ ಈ ವ್ಯವಸ್ಥೆ ಅಭಿವೃದ್ಧಿಗೊಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗರಾಜ ದೇಸಾಯಿ ಕೊಡುಗೆ ವಿದ್ಯಾರ್ಥಿಗಳಿಗೆ ದಾರಿದೀಪ
ದುರ್ಗಮ ಪ್ರದೇಶಗಳಿಗೆ ಸಂಚಾರಿ ಆರೋಗ್ಯ ವಾಹನ: ಸಚಿವರಿಂದ ಚಾಲನೆ