ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ: ರಂಗರಾಜನ್

KannadaprabhaNewsNetwork |  
Published : Feb 26, 2024, 01:30 AM IST
25ಕೆಎಂಎನ್ ಡಿ13ಮೇಲುಕೋಟೆ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಸಮಾಜಸೇವಕ ರಂಗರಾಜನ್ ಮಾತನಾಡಿದರು. | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವುದರಿಂದ ಗುಣಾತ್ಮಕ ಶಿಕ್ಷಣದ ಜೊತೆಗೆ ಪೋಷಕರಿಗೂ ಲಕ್ಷಾಂತರ ರು. ಹಣ ಉಳಿತಾಯವಾಗುತ್ತದೆ ಎಂದು ಸಮಾಜಸೇವಕ ರಂಗರಾಜನ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವುದರಿಂದ ಗುಣಾತ್ಮಕ ಶಿಕ್ಷಣದ ಜೊತೆಗೆ ಪೋಷಕರಿಗೂ ಲಕ್ಷಾಂತರ ರು. ಹಣ ಉಳಿತಾಯವಾಗುತ್ತದೆ ಎಂದು ಸಮಾಜಸೇವಕ ರಂಗರಾಜನ್ ಅಭಿಪ್ರಾಯಪಟ್ಟರು.

ಶತಮಾನದ ಸರ್ಕಾರಿ ಬಾಲಕರ ಶಾಲೆಗೆ ಬೆಂಗಳೂರು ಮಾವಳ್ಳಿಯ ಸೌಜನ್ಯ ಸೇವಾಶ್ರಮದಿಂದ ಬ್ಯಾಂಡ್‌ಸೆಟ್, ಕಂಪ್ಯೂ ಟರ್, ಶಾಲಾಬ್ಯಾಗ್, ನೋಟ್‌ ಪುಸ್ತಕ ಕ್ರೀಡಾ ಸಾಮಗ್ರಿ ಸೇರಿದಂತೆ ಹಲವು ಕೊಡುಗೆ ಹಸ್ತಾಂತರ ಮಾಡಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಂದ ಕ್ರೀಡಾ ಚಟುವಟಿಕೆ ಸೇರಿದಂತೆ ಎಲ್ಲಾ ಪಠ್ಯಚಟುವಟಿಕೆಗಳಿಗೆ ಪ್ರೋತ್ಸಾಹಕ ವಾತಾವರಣವಿದೆ ಎಂದರು.

ಶಾಲೆಗಳಲ್ಲಿ ಬಿಸಿಯೂಟ, ಕ್ಷೀರಭಾಗ್ಯ ಸೇರಿದಂತೆ ಹಲವು ಪೌಷ್ಟಿಕಾಂಶಯುಕ್ತ ಆಹಾರ ನೀಡಿಮ ಮಕ್ಕಳ ಭೌತಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಖಾಸಗಿ ಶಾಲೆ ವ್ಯಾಮೋಹಕ್ಕೆ ಬಲಿಯಾಗಿ ಪೋಷಕರು ಲಕ್ಷಾಂತರರೂ ಕಳೆದುಕೊಳ್ಳುವ ಬದಲು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.

ನಮ್ಮ ಸೌಜನ್ಯ ಸೇವಾಶ್ರಮ ಹಲವಾರು ಸರ್ಕಾರಿ ಶಾಲೆಗಳಿಗೆ ಸಹಕಾರ ನೀಡುತ್ತಿದೆ. ಕೊಡಗಿನ ಕೊಪ್ಪ ಎಂಬ ಗ್ರಾಮದಲ್ಲಿ ಓರ್ವಶಿಕ್ಷಕಿ ಹಾಗೂ ಐದು ಮಂದಿ ವಿದ್ಯಾರ್ಥಿಗಳಿದ್ದ ಶಾಲೆಯನ್ನು ದತ್ತುಪಡೆದು ನಾವು ಕೈಜೋಡಿಸಿದ ಪರಿಣಾಮ ಇಂದು 280 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದರು. ಮೇಲುಕೋಟೆಯಲ್ಲಿ ಕವಿ ಪುತಿನ ವ್ಯಾಸಂಗ ಮಾಡಿದ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯನ್ನು ಮಾದರಿಯನ್ನಾಗಿ ರೂಪಿಸಬೇಕಿದೆ ಎಂದು ಸಲಹೆ ನೀಡಿದರು.ಉದ್ಯಮಿ ಪುರಿಜಗನ್ನಾಥ್ ಮಾತನಾಡಿ, ಮುಂದಿನ ವರ್ಷ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸಬೇಕು. ಶಾಲೆಯಲ್ಲಿರುವ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್‌ಕೊಠಡಿ, ಪ್ರೊಜಕ್ಟರ್‌ಕ್ಲಾಸ್‌ಗಳನ್ನು ಗ್ರಾಮೀಣ ಮಕ್ಕಳು ಬಳಸಿಕೊಂಡರೆ ಮಕ್ಕಳ ಸಮಾರಂಭದಲ್ಲಿ ಬಿಆರ್ ಸಿ ಐಆರ್‌ಟಿ ರಾಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯಶಿಕ್ಷಕ ಸಂತಾನರಾಮನ್. ಸಹಶಿಕ್ಷಕರಾದ ಮಹಾಲಕ್ಷ್ಮಿ, ಬಿ.ಜಯಂತಿ, ಶೃತಿ ಜೆ.ಬಿ, ಮಹಮದ್ ಇಮ್ರಾನ್, ಗಿರಿಜಾ ಮತ್ತು ಅಡಿಗೆಸಿಬ್ಬಂದಿ ಕಮಲ, ಜಯಲಕ್ಷ್ಮಿಯವರನ್ನು ಸೇವಾಶ್ರಮ ವತಿಯಿಂದ ಅಭಿನಂದಿಸಲಾಯಿತು.ಸಿಆರ್‌ಪಿ ಬೆಟ್ಟಸ್ವಾಮಿಗೌಡ ಸೌಜನ್ಯ ಸೇವಾಶ್ರಮದ ಟ್ರಸ್ಟಿಗಳಾದ ಶ್ರೀಸುಧ, ಮನೋಹರ ರಾವ್, ಮೀನಾಕ್ಷಿ, ಸುಂದರರಾಜ್, ಶೈಲಜಾ, ಸುರೇಶ್, ನಿರ್ಮಲ, ಶ್ರೀನಿವಾಸ್, ಶರ್ಮಿಳ, ಸೂರ್ಯಪ್ರಕಾಶ್, ಸಾವಿತ್ರಿ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ