ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಕೃಷ್ಣನಗರದ ಮೂರನೇ ಹಂತದ ನಂದಗೋಕುಲ ಕಿಡ್ಸ್‌ವರ್ಲ್ಡ್‌ನ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಣಿವು ಬೇಸಿಗೆ ಶಿಬಿರ-ಚಿಣ್ಣರ ಸಂತೆಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ವರ್ಷದಲ್ಲಿ ಬಹುತೇಕ ಮಕ್ಕಳು 4 ಗೋಡೆಗಳ ಮಧ್ಯೆ ಇರುತ್ತಾರೆ. ರಜಾ ದಿನಗಳಲ್ಲಿ ಬೇಸಿಗೆ ಶಿಬಿರಗಳು ಸ್ಫೂರ್ತಿದಾಯಕವಾದ ಅನುಭೂತಿ ನೀಡುತ್ತವೆ ಎಂದರು.
ಮಕ್ಕಳ ಬೌದ್ಧಿಕ ಹಾಗೂ ಮನೋವಿಕಾಸಕ್ಕೆ ಉಪಯುಕ್ತ ಚಟುವಟಿಕೆಗಳನ್ನು ಈ ಶಿಬಿರಗಳಲ್ಲಿ ಆಯೋಜಿಸಿರುವುದರಿಂದ ಮಕ್ಕಳು ಆಸಕ್ತಿಯಿಂದ ಕಲಿಯುತ್ತಾರೆ. ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿಕೊಳ್ಳಲು ಕೂಡ ಇದು ಸಹಕಾರಿಯಾಗಿದೆ ಎಂದರು.ಯಾವುದೇ ಮೇಲು ಕೀಳು ಎಂಬ ಭೇದ ಭಾವವಿಲ್ಲದೆ ಭಾರತೀಯ ಜೀವನ ಪದ್ಧತಿ ತಿಳಿದುಕೊಳ್ಳಲು ಚಿಣ್ಣರ ಸಂತೆ ಸಹಕಾರಿ. ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಈಗಿನಿಂದಲೇ ಬೆಳೆಯಬೇಕು. ಅದರ ಅರಿವು ಮತ್ತು ಪ್ರಜ್ಞೆ ಜಾಗೃತಗೊಳ್ಳಲು ಶಿಬಿರಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಚೆನ್ನೈಗೆ ವರ್ಗಾವಣೆಗೊಂಡ ಕೆ.ರಾಜನ್‌ಗೆ ಜೀವ ವಿಮಾ ಸಿಬ್ಬಂದಿಯಿಂದ ಬೀಳ್ಕೊಡುಗೆ
ಎಲ್ಐಸಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಮದ್ದೂರು ಶಾಖೆ ರಾಜನ್ ಮಾರ್ಗದರ್ಶನದಲ್ಲಿ 15, 138 ಪಾಲಿಸಿಗಳ ಸಂಗ್ರಹಣೆಯ ಮೂಲಕ 33 ಕೋಟಿಗೂ ಹೆಚ್ಚು ಪ್ರೀಮಿಯಂ ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೀಗಾಗಿ ಇವರ ಕಾರ್ಯದಕ್ಷತೆಯಿಂದಾಗಿ ಮೈಸೂರು ವಿಭಾಗದ ಮದ್ದೂರು ಶಾಖೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ವಿಮೆ ಸಲಹೆಗಾರರ ಸಂಘದ ಅಧ್ಯಕ್ಷ ಧನಪಾಲ ಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು.ಕೆ.ರಾಜನ್ ಅವರ 33 ವರ್ಷಗಳ ಸೇವೆಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಪ್ರತಿನಿಧಿಗಳು, ಸಿಬ್ಬಂದಿ ವರ್ಗ, ಪಾಲಿಸಿದಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಇವರ ನಿಸ್ವಾರ್ಥ ಸೇವೆ ಚೆನ್ನೈ ಸೇಲ್ಸ್ ಸೆಂಟರ್‌ಗು ಮುಂದುವರೆಯಲಿ ಎಂದು ಆಶಯ ವ್ಯಕ್ತಪಡಿಸಿದರು.