ಲಕ್ಷ್ಮೇಶ್ವರ: ಪಟ್ಟಣದ ಜಗದ್ಗುರು ಲಿಂ. ವೀರಗಂಗಾಧರ ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಯನ್ನು ರಾಜ್ಯ ವಲಯ ವಿಶೇಷ ಅಭಿವೃದ್ಧಿ ಯೋಜನೆ ಕಾರ್ಯಕ್ರಮದಡಿ ಸುಮಾರು ₹11.88 ಲಕ್ಷ ಕಾಮಗಾರಿಗೆ ಶಾಸಕ ಡಾ. ಚಂದ್ರು ಲಮಾಣಿ ಚಾಲನೆ ನೀಡಿದರು.
ಈ ವೇಳೆ ರಾಜ್ಯ ಪ್ರಶಸ್ತಿಗೆ ಭಾಜನರಾದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯಕ್ ಅವರನ್ನು ಶಿಕ್ಷಕರ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಕೆ. ಹವಾಲ್ದಾರ್, ಮುಖ್ಯೋಪಾಧ್ಯಾಯ ಬಿ.ಸಿ. ಪಟ್ಟೇದ, ಎ.ಎನ್. ಮುಳಗುಂದ, ಎಚ್.ಎಂ. ಗುತ್ತಲ್, ಎಸ್.ಡಿ. ಲಮಾಣಿ, ಎಂ.ಆರ್. ಹಿರೇಮಠ, ಎಸ್.ಜಿ. ಅಂಗಡಿ, ಎನ್.ಎನ್. ಸುಣಗಾರ, ಎಸ್.ಎಸ್. ರಾಥೋಡ, ಎ.ಎಂ. ಅಕ್ಕಿ, ಪಿ.ಎಸ್. ಪುರಾಣಿಕಮಠ, ಯು.ಎಸ್. ನೇಕಾರ, ಎಸ್.ಬಿ. ಪೂಜಾರ, ವಿಜಯಕುಮಾರ ಹತ್ತಿಕಾಳ, ಬಿಜೆಪಿ ನಗರ ಘಟಕದ ನೂತನ ಅಧ್ಯಕ್ಷ ವಿಜಯ ಕುಂಬಾರ, ನೂತನ ಪ್ರಧಾನ ಕಾರ್ಯದರ್ಶಿ ಪ್ರವೀಣ ಬೋಮಲೆ, ಗಂಗಾಧರ ಮೆಣಸಿನಕಾಯಿ, ಸೋಮೇಶ ಉಪನಾಳ, ಗಿರೀಶ ಚೌರಡ್ಡಿ, ಬಸವರಾಜ ಚಕ್ರಸಾಲಿ, ಈರಪ್ಪ ಹಾದಿಮನಿ, ಆರ್.ಐ.ಹಬಸಿ, ಆರ್.ಬಿ. ಆಚಾರ್ಯ, ನಾಯ್ಕರ್, ಎ.ಎಂ.ಕುಂಬಾರ, ಚಂದ್ರು ಮಾಗಡಿ, ಎನ್.ಬಿ. ರಡ್ಡೇರ ಸೇರಿದಂತೆ ಅನೇಕರಿದ್ದರು.