ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿ ಹಕ್ಕು: ವಸಂತ್ ಕುಮಾರ್

KannadaprabhaNewsNetwork | Published : Mar 19, 2025 12:33 AM

ಸಾರಾಂಶ

ತರೀಕೆರೆ, ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು ಎಂದು ಪುರಸಭೆ ಅಧ್ಯಕ್ಷ ವಸಂತ್ ಕುಮಾರ್ ಹೇಳಿದರು.

ನರ್ಸರಿ, ಎಲ್.ಕೆ.ಜಿ.ಯು.ಕೆ.ಜಿ.ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡುವ ಸಮಾರಂಭ ಕನ್ನಡಪ್ರಭವಾರ್ತೆ, ತರೀಕೆರೆ

ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು ಎಂದು ಪುರಸಭೆ ಅಧ್ಯಕ್ಷ ವಸಂತ್ ಕುಮಾರ್ ಹೇಳಿದರು.

ಪಟ್ಟಣದ ಅಮ್ಮ ಪ್ಲೇ ಹೋಮ್ ಕಿಡ್ಸ್ ಅಕಾಡೆಮಿ ಹಾಗೂ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಶೈಕ್ಷಣಿಕ ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿರುವ ನರ್ಸರಿ, ಎಲ್.ಕೆ. ಜಿ. ಹಾಗೂ ಯು.ಕೆ.ಜಿ. ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸದೃಢರಾಗಬೇಕು. ಶಿಕ್ಷಣದಲ್ಲಿ ಅಭಿವೃದ್ಧಿಯಾದರೆ ಸಮಾಜ ಮತ್ತು ದೇಶ ಪ್ರಗತಿಯಾಗುತ್ತದೆ, ವಿದ್ಯಾರ್ಥಿಗಳಿಗೆ ಆಸ್ತಿ ಮಾಡುವ ಬದಲು ಶಿಕ್ಷಣ ಎನ್ನುವ ಆಸ್ತಿ ಮಾಡಿ, ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಬೇಕು, ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಪ್ರತಿಯೊಬ್ಬ ತಂದೆ ತಾಯಿಯ ಕರ್ತವ್ಯ. ಇಂದು ನಡೆದ ವಿಶೇಷ ಪ್ರಧಾನ ಕಾರ್ಯಕ್ರಮಕ್ಕೆ ಎಲ್ಲ ಪೋಷಕರು ಆಗಮಿಸಿರುವುದು ಮಕ್ಕಳಲ್ಲಿರುವ ಪ್ರೀತಿಯೇ ಕಾರಣ ಎಂದು ತಿಳಿಸಿದರು. ಪುರಸಭೆ ಸದಸ್ಯ ಟಿ. ಜಿ. ಆಶೋಕಕುಮಾರ್ ಮಾತನಾಡಿ ಪ್ರಹರ್ಷಿತ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷ ಪೂರ್ಣ ಗೊಳಿಸಿ ಯಶಸ್ವಿನ ಪದವಿ ಪ್ರಮಾಣ ಪತ್ರ ಪಡೆಯುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ, ವಿದ್ಯಾರ್ಥಿ ಗಳನ್ನುಈ ದೇಶದ ಪ್ರಜ್ಞಾವಂತ ಪ್ರಜೆಯಾಗಿ ಮಾಡುವ ಪ್ರಯತ್ನ ಶಿಕ್ಷಕಿಯರ ಮೇಲಿದೆ. ನಮ್ಮ ಮಗಳು ಎಲ್.ಕೆ.ಜಿ. ಯಿಂದ 7ನೇ ತರಗತಿಯವರೆಗೆ ಒಂದು ರು. ಖರ್ಚಿಲ್ಲದೆ ಓದಿಸಿರುವಂತಹ ಮಹಾನೀಯರು ಸೋಮಶೇಖರಯ್ಯ ಅವರು, ನಮ್ಮ ಮಗಳು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂಎಸ್ ಸಿ ಮುಗಿಸಿ ಗೆಸ್ಟ್ ಲೆಚ್ಚರರ್ ಆಗಿ ಕೆಲಸ ಮಾಡುತ್ತಿದ್ದಾಳೆ, ಇದಕ್ಕೆ ಕಾರಣ ಸೋಮಶೇಖರಯ್ಯ ಹಾಗೂ ಅವರ ಧರ್ಮಪತ್ನಿ ಲೀಲಾಸೋಮಶೇಖರಯ್ಯ ಎಂದು ಹೇಳಿದರು. ಪದವಿ ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳು ಈ ಶಾಲೆ ಶಿಕ್ಷಕಿಯರಿಗೂ, ಶಾಲೆ ಆಡಳಿತ ಮಂಡಳಿಗೂ ಒಳ್ಳೆಯ ಹೆಸರು ತರುವಂತಹ ಕೀರ್ತಿವಂತ ಮಕ್ಕಳಾಗಲಿ, ಈ ಸಮಾಜದ ಕಟ್ಟ ಕಡೆ ಮಕ್ಕಳಿಗೂ ಕಟ್ಟ ಕಡೆಯ ವ್ಯಕ್ತಿಗಳಿಗೂ ಈ ಶಾಲೆ ಆದರ್ಶವಾಗಲಿ ಎಂದು ಹೇಳಿದರು. ಪುರಸಭೆ ಮಾಜಿ ಅಧ್ಯಕ್ಷ ಟಿ.ಕೆ. ರಮೇಶ್ ಮಾತನಾಡಿ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವ ಗಾದೆ ಮಾತಿನಂತೆ ಈ ಸಂಸ್ಥೆ ಅಧ್ಯಕ್ಷ ಸೋಮಶೇಖರಯ್ಯ ಬಡ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಿರುವುದು ಶ್ಲಾಘನೀಯ. ಪಠ್ಯಪುಸ್ತಕದ ಜೊತೆಗೆ ಪಠ್ಯೇತರ ವಿಷಯಗಳಾದ ಕರ್ನಾಟಕ ಅಕಾಡೆಮಿ ಮ್ಯಾಥಮೆಟಿಕ್ಸ್, ಚಿಂತನ ಕನ್ನಡ ನವೋದಯ ಸ್ಪರ್ಧಾತ್ಮಕ ಪರೀಕ್ಷೆ, ನ್ಯಾಷನಲ್ ಲೆವೆಲ್ ಸೈನ್ಸ್ ಟ್ಯಾಲೆಂಟ್ ಎಕ್ಸಾಮ್, ತಾರಾಮಂಡಲ ನ್ಯಾಷನಲ್ ಡ್ರಾಯಿಂಗ್ ಕಾಂಪಿಟೇಶನ್, ಪ್ರಗತಿಪರ ಸೇವಾ ಸಂಸ್ಥೆ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಅಭಿನಂದನೆ ತಿಳಿಸಿ ಈ ಶಾಲಾ ಉನ್ನತ ಮಟ್ಟಬರಲಿಕ್ಕೆ ಬರಲಿ ಎಂದು ಹೇಳಿದರು. ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ಶಾಲೆ ಶೈಕ್ಷಣಿಕ ವರ್ಷದ ವಿದ್ಯಾಭ್ಯಾಸದ ಬಗ್ಗೆ ಮಾತನಾಡಿ ಈ ಸಮಾರಂಭ ಮಕ್ಕಳಲ್ಲಿ ಉತ್ಸಾಹ ಹಾಗೂ ವೇದಿಕೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪರಿಚಯಿಸುವ ರೀತಿ ನಮಗೆ ಖುಷಿ ತಂದಿದೆ. ಇಂತಹ ಕಾರ್ಯಕ್ರಮ ಶಾಲೆಗಳಲ್ಲಿ ನಡೆಯಬೇಕು ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.ಪದವಿ ಸ್ವೀಕರಿಸುವ. ವಿದ್ಯಾರ್ಥಿಗಳು ತೊಟ್ಟ ಉಡುಗೆ ಎಲ್ಲರ ಆಕರ್ಷಣೆಯಾಗಿತ್ತು. ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ಲೀಲಾ ಸೋಮಶೇಖರಯ್ಯ, ಆಡಳಿತ ಅಧಿಕಾರಿ ಅನೂಪ್, ಮುಖ್ಯ ಶಿಕ್ಷಕಿ ವಿದ್ಯಾ ,ಶಿಕ್ಷಕಿಯರು ಪೋಷಕರು ಪವಿತ್ರ, ರಾಣಿ, ಅಂಜಲಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 18ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಯಿಂದ ನಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡುವ ಸಮಾರಂಭವನ್ನು ಪುರಸಭೆ ಅಧ್ಯಕ್ಷ ವಸಂತ್ ಕುಮಾರ್ ಉದ್ಘಾಟಿಸಿದರು. ಟಿ.ಜಿ.ಅಶೋಕ ಕುಮಾರ್, ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ, ಲೀಲಾ ಸೋಮಶೇಖರಯ್ಯ, ಟಿ.ಕೆ.ರಮೇಶ್, ಶಾಲೆ ಅಡಳಿತಾಧಿಕಾರಿ ಅನೂಪ್ ಇದ್ದರು.

Share this article