ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಸಭಾಂಗಣದಲ್ಲಿ ನಡೆದ ವಿವೇಕಾನಂದನಗರ ನಿವಾಸಿಗಳು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಳಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ೧೬ ಕೋಟಿ ರು. ಹಣವನ್ನು ಪ್ರಾಧಿಕಾರದಿಂದ ಬಿಡುಗಡೆ ಮಾಡಲಾಗಿದೆ. ಲೋಪವಾಗದ ರೀತಿ ಕಾಮಗಾರಿಗಳನ್ನು ನಿರ್ವಹಿಸಬೇಕು. ಕಾಮಗಾರಿಯ ಉಳಿದ ಹಣವನ್ನು ಪ್ರಾಧಿಕಾರದಿಂದ ಬಿಡುಗಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೀರಾವರಿ ಇಲಾಖೆ ಅಧಿಕಾರಿ ಮೇಘನಾ ಅವರಿಗೆ ತಿಳಿಸಿದರು.
ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕು. ಜೊತೆಗೆ ಯೋಜನೆಯ ರೂಪುರೇಷೆಗೆ ತಕ್ಕಂತೆ ಗುತ್ತಿಗೆದಾರರು ಕೆಲಸ ನಿರ್ವಹಿಸಬೇಕು. ವಿವೇಕಾನಂದ ನಗರ ಬಡಾವಣೆಗೆ ಎರಡು ತಿಂಗಳೊಳಗೆ ಹೊಸ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿದ್ದ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಟಿ.ಆರ್.ರಾಜು ಮಾತನಾಡಿ, ಬಡಾವಣೆ ರಸ್ತೆಗಳಿಗೆ ನಾಮಫಲಕ ಅಳವಡಿಸುವ ಬಗ್ಗೆ ಪ್ರಾಧಿಕಾರ ಬಡಾವಣೆಯ ರಸ್ತೆ ಹಾಗೂ ತಿರುವುಗಳ ಕುರಿತು ನಕ್ಷೆಯನ್ನು ನೀವು ಸಿದ್ಧಪಡಿಸಿಕೊಟ್ಟರೆ ನಮ್ಮ ಸಂಘದಿಂದಲೇ ರಸ್ತೆಗಳಲ್ಲಿ ನಾಮಫಲಕ ಅಳವಡಿಸಲು ತೀರ್ಮಾನ ಕೈಗೊಳ್ಳಲಾಗುವುದು. ಇದಕ್ಕೆ ಸಹಕರಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಯೋಜನಾ ನಿರ್ದೇಶಕ ಪ್ರವೀಣ್, ವಾರದೊಳಗೆ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದರು.
ಖಾಲಿ ಜಾಗದ ನಿವೇಶನದಾರರಿಗೆ ಎಚ್ಚರಿಕೆ
ನಿವೇಶನದಾರರು ತಮ್ಮ ನಿವೇಶನಗಳನ್ನು ಸ್ವಚ್ಛತೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದು, ಹಲವು ಬಾರಿ ಪ್ರಾಧಿಕಾರದಿಂದ ಜಂಗಲ್ ಕಟಿಂಗ್ ಮಾಡಿ ಬಡಾವಣೆಯ ನಿವಾಸಿಗಳಿಗೆ ಸಹಕರಿಸುವಂಥ ಕೆಲಸ ಮಾಡಿದೆ. ಅದಾಗಿಯೂ ನಿವೇಶನದಾರರು ತಮ್ಮ ನಿವೇಶನಗಳತ್ತ ಗಮನಹರಿಸದ ಕಾರಣ ಗಿಡ-ಗಂಟೆಗಳು ಬೆಳೆದುಕೊಂಡು ಸುತ್ತಮುತ್ತಲಿನ ನಿವಾಸಿಗಳ ಮನೆಗಳತ್ತ ಹಾವು, ಚೇಳು ಸೇರಿದಂತೆ ವಿಷಜಂತುಗಳ ಹಾವಳಿಯಿಂದ ಆತಂಕದಲ್ಲಿದ್ದಾರೆ.