ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕಚೇರಿಗೆ ಅಲೆದಾಡಬೇಕಿಲ್ಲ
ತಾಲೂಕು ಕಚೇರಿ ಅಥವಾ ನಾಡಕಚೇರಿಗಳಿಗೆ ಸಾರ್ವಜನಿಕರು ಸಮಸ್ಯೆಗಳನ್ನು ಒತ್ತು ಅಹವಾಲು ನೀಡಿದರೆ ಶೀಘ್ರವಾಗಿ ಬಗೆಹರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು. ಇನ್ನು ಮುಂದೆ ಸಾರ್ವಜನಿಕರು ವಾರಗಟ್ಟಲೆ ಕಚೇರಿಗಳಿಗೆ ಅಲೆದಾಡಬೇಕಿಲ್ಲ ಎಂದರು. ತಾಲೂಕಿನಲ್ಲಿ ಸ್ಮಶಾನಗಳ ಒತ್ತುವರಿಗೆ ಸಂಬಂಧಿಸಿದ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದ್ದು, ಒತ್ತುವರಿ ತೆರವಿಗೆ ಬೇಕಾಗಿರುವ ವ್ಯವಸ್ಥೆ ಮಾಡಿಕೊಂಡು ಹಂತಹಂತವಾಗಿ ಒತ್ತುವರಿಯನ್ನು ತೆರವು ಮಾಡಲಾಗುತ್ತದೆ. ಜೊತೆಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸ್ಮಶಾನಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ಜೀರ್ಣೋದ್ಧಾರಕ್ಕೆ ಗಮನ ಕೊಡಲಾಗುತ್ತದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಬಹಳ ಮುಖ್ಯವಾಗಿ ಬೇಕಿದೆ ಎಂದರು. ಸಿಬ್ಬಂದಿ ಸೌಜನ್ಯದಿಂದ ವರ್ತಿಸಿಗ್ರಾಮಲೆಕ್ಕಿಗಳು ಸಂಬಂದಿಸಿದ ಗ್ರಾಮದಲ್ಲಿಯೇ ವಾಸ್ತವ್ಯವಿದ್ದು, ಸಕಾಲಕ್ಕೆ ಸಾರ್ವಜನಿಕರಿಗೆ ಲಭ್ಯವಿರಬೇಕು. ಕಚೇರಿಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಂಡು ಬರದಂತೆ ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಜಾಗೃತಗೊಂಡು ಸಾರ್ವಜನಿಕರ ಸಮಸ್ಯೆಗಳನ್ನು ಈಡೇರಿಸಬೇಕು. ಜೊತೆಗೆ ಸಿಬ್ಬಂದಿ ಸಾರ್ವಜನಿಕರೊಟ್ಟಿಗೆ ಸೌಜನ್ಯದಿಂದ ವರ್ತಿಸಬೇಕೆಂದು ಸಿಬ್ಬಂದಿಗಳಿ ಸೂಚಿಸಲಾಗಿದೆ. ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಅರ್ಹರಿಗೆ ಪರಿಹಾರ ವಿತರಣೆ ಮಾಡಲು ವಿಳಂಬವಾಗುತ್ತಿದೆ ಎಂದ ದೂರು ಇದ್ದು, ತ್ವರಿತವಾಗಿ ಪರಿಹಾರ ವಿತರಣೆಗೆ ಕ್ರಮ ಜರುಗಿಸಲಾಗುತ್ತದೆ ಎಂದರು ಈ ಸಂದರ್ಭದಲ್ಲಿ ಶಿರಸ್ತೇದಾರ್‌ಗಳಾದ ಪ್ರಭಾಕರ್, ಮಂಜುನಾಥ, ರಾಜಸ್ವ ನಿರೀಕ್ಷ ಪವನ್ ಕುಮಾರ್, ಗ್ರಾಮ ಆಡಳಿತಾಧಿಕಾರಿಗಳಾದ ನಭೀಸಾಬ್, ಜಗನ್ನಾಥ್, ಸುರೇಶ್ ಕುಮಾರ್, ವಿನೋದ್ ಮುಂತಾದವರು ಹಾಜರಿದ್ದರು.