ತಂಬಾಕು, ಸಿಗರೇಟ್‌ ಸೇವನೆ ಅಭ್ಯಾಸ ತ್ಯಜಿಸಿ

KannadaprabhaNewsNetwork |  
Published : Jun 13, 2024, 12:49 AM IST
ತಂಬಾಕು ಸೇವನೆಯಿಂದ ಅಡ್ಡ ಪರಿಣಾಮ | Kannada Prabha

ಸಾರಾಂಶ

ತಂಬಾಕು ಸೇವನೆಯಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ, ಹೊರತು ಅದರಿಂದ ಜೀವನಕ್ಕೆ ಯಾವುದೇ ಲಾಭವಿಲ್ಲವೆಂದು ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಎಂ.ಬಿ. ಸಾನಿಕೊಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುತಂಬಾಕು ಸೇವನೆಯಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ, ಹೊರತು ಅದರಿಂದ ಜೀವನಕ್ಕೆ ಯಾವುದೇ ಲಾಭವಿಲ್ಲವೆಂದು ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಎಂ.ಬಿ. ಸಾನಿಕೊಪ್ಪ ಹೇಳಿದರು.ತಾಲೂಕಿನ ನಾಗವಲ್ಲಿ ಗ್ರಾಮ ಪಂಚಾಯಿತಿ ಮತ್ತು ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ರಹಿತ ದಿನ-2024 ರ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಬೀದಿ ನಾಟಕ ಪ್ರದರ್ಶನ’ ಉದ್ಘಾಟಿಸಿ ಮಾತನಾಡಿದರು.ತಂಬಾಕು ಸೇವನೆಯಿಂದ ನಮ್ಮ ಒಳ್ಳೆಯ ಗುಣಗಳನ್ನು ಕೂಡ ನಾವು ಕಳೆದುಕೊಳ್ಳುತ್ತೇವೆ. ಇದರಿಂದ ನಿಮ್ಮ ಆರೋಗ್ಯಕ್ಕೆ ಧಕ್ಕೆ ಬರುತ್ತದೆ. ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕಾರ ಕಲಿಯಬೇಕು. ಅದನ್ನು ಹೊರತುಪಡಿಸಿ ದುಷ್ಪರಿಣಾಮಗಳಿಗೆ ಬಂದಿ ಆಗಬಾರದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಡಾ.ಜಿ.ಎನ್.ಪ್ರಭಾಕರ್, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಚೆಲುವೇಗೌಡ, ಸಮುದಾಯ ವೈದ್ಯಕೀಯ ವಿಭಾಗದ ಡಾ.ವೀಣಾ, ಸಹಾಯಕ ಪ್ರಾಧ್ಯಾಪಕಿ ಡಾ. ರಮ್ಯಾ ಕೆ .ಎಸ್, ಸಹಪ್ರಾಧ್ಯಾಪಕಿ ಡಾ.ಅಶ್ವಿನಿ, ಕಾರ್ಯಕ್ರಮದ ಸಂಯೋಜಕರಾಗಿ ಸಹ ಪ್ರಾಧ್ಯಾಪಕ ಡಾ. ವಿಕ್ವಾರ್ ಅಹಮದ್, ಸಮುದಾಯ ವೈದ್ಯ ವಿಭಾಗದ ಸಹ ಪ್ರಾಧ್ಯಾಪಕರು ಶ್ರೀಮತಿ ಮಂಗಳಗೌರಮ್ಮ, ಹಾಗೂ ನಾಗವಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರುಕ್ಮಿಣಿ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.ಇದೇ ವೇಳೆ ಶ್ರೀ ಸಿದ್ಧಾರ್ಥ ಕಾಲೇಜಿನ ವಿದ್ಯಾರ್ಥಿಗಳು ‘ವಿಶ್ವ ತಂಬಾಕು ರಹಿತ’ ಅಂಗವಾಗಿ ''''ಬೀದಿ ನಾಟಕವನ್ನು'''' ಪ್ರದರ್ಶನ ಮಾಡಿದರು. ಈ ನಾಟಕ ಮೂಲಕ ಗ್ರಾಮೀಣ ಜನರಲ್ಲಿ ತಂಬಾಕು ಸೇವೆನೆಯಿಂದಾಗುವ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ