ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಸಮಾಜದ ಕೆಡುಕಗಳನ್ನು ಕೆಡುಕಗಳಿಂದ ಸರಿಪಡಿಸುವುದಲ್ಲ, ಒಳ್ಳೆಯತನದಿಂದ ಸರಿಪಡಿಸಬೇಕೆಂದು ಪವಿತ್ರ ಕುರಾನ್ ತಿಳಿಸುತ್ತದೆ ಎಂದು ಮಂಗಳೂರಿನ ಖ್ಯಾತ ಪ್ರವಚನಕಾರ ಮೊಹಮ್ಮದ ಕುಂಞ ಹೇಳಿದರು.ಥೇರ್ ಮೈದಾನದ ಸಭಾಭವನದಲ್ಲಿ ಸಾರ್ವಜನಿಕ ಕುರಾನ್ ಪ್ರವಚನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದುಶ್ಚಟಗಳಿಂದ ಮನುಷ್ಯ ದೂರ ಇರಬೇಕು. ಸರಾಯಿ ಕುಡಿಯಬಾರದು, ಸರಾಯಿ ಮುಕ್ತ ಭಾರತ ನಿರ್ಮಿಸಬೇಕೆಂಬುವದು ಮಹಾತ್ಮ ಗಾಂಧಿ ಕನಸಾಗಿತ್ತು. ಪೈಗಂಬರರು ಸಹ ಮನುಷ್ಯ ದುಶ್ಚಟಗಳನ್ನು ಬಿಟ್ಟು ಸತ್ಯಚಾರಿತ್ರ್ಯವಂತಾಗಬೇಕೆಂದು ತಿಳಿಸಿದ್ದಾರೆ. ಹೀಗಾಗಿ ಎಲ್ಲರೂ ಸುಂದರ ಸಮಾಜ ನಿರ್ಮಿಸಲು ಕೈಜೋಡಿಸಬೇಕೆಂದರು.
ಅನುಭವ ಮಂಟಪ ಆಳಂದದ ತೋಟದಾರ್ಯ ಕೋರಣೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲ ಧರ್ಮ ಗ್ರಂಥಗಳ ಮೂಲ ಸಿದ್ಧಾತ ಮಾನವೀಯತೆ ಆಗಿದೆ, ಶರಣರ ತತ್ವಗಳು, ಪ್ರೀತಿ, ಕರುಣೆ ಹಾಗೂ ದೇವರು ಒಬ್ಬನೇ ಎಂದು ಬೋಧನೆ ಮಾಡಿದ್ದಾರೆ. ಪವಿತ್ರ ಕುರಾನ್ ಕೂಡ ದೇವರು ಒಬ್ಬನೇ ಎಂದು ಹೇಳುತ್ತದೆ ಎಂದರು.ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರು, ಕನ್ನಡ ಅನುವಾದದ ಕುರಾನ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಜಗತ್ತಿನ ಎಲ್ಲ ಪ್ರವಾದಿಗಳು ಆ ಸೃಷ್ಟಿಕರ್ತನ ಸಂದೇಶವನ್ನು ಮಾನವ ಕುಲಕ್ಕೆ ಕೊಟ್ಟಿದ್ದಾರೆ. ಆದರೆ ಈಗ ಧರ್ಮ, ಜಾತಿ, ಮಂದಿರ, ಮಸೀದಿ, ಮೇಲು, ಕೀಳು, ಹೆಸರಿನ ಮೇಲೆ ದೇಶ ಒಡೆದು ಆಳಲಾಗುತ್ತಿದೆ. ಹೀಗಾಗಿ ನಾವೆಲ್ಲರೂ ಆ ಪ್ರವಾದಿಗಳ ಸಂದೇಶವನ್ನ ಪಾಲಿಸಿ ಆ ಭಗವಂತನ ಮಕ್ಕಳೆಂದು ನಡೆದುಕೊಳ್ಳಬೇಕು ಎಂದು ಹೇಳಿದರು.
ಯೂಸುಫ್ ಕನ್ನಿ ಮಾತನಾಡಿದರು. ಜಮಾತೆ ಇಸ್ಲಾಂ ಹಿಂದನ ಬಸವಕಲ್ಯಾಣ ಅದ್ಯಕ್ಷ ಮೋಹಮ್ಮದ್ ಅಸ್ಲಂ, ಸ್ವಾಗತ ಸಮಿತಿಯ ಅಧ್ಯಕ್ಷ ಮುಜಾಹಿದ ಪಾಶಾ ಖುರೇಶಿ, ಗೌರವಾಧ್ಯಕ್ಷ ಡಾ. ಜಿಎಸ್ ಬುರಳೆ, ಸದ್ಭಾವನ ಮಂಚ್ ಜಿಲ್ಲಾಧ್ಯಕ್ಷ ಗುರುನಾಥ ಗಡ್ಡೆ, ಸದಸ್ಯರಾದ ಮೌಲಾನಾ ಅಬ್ಲುಲ್ ಸಲಾಮ ಖಾಸಮಿ, ಶಾಂತಲಿಂಗ ಮಠಪತಿ, ಜನಾಬ ಮಿರ್ಜಾ ಅನ್ವರ ಬೇಗ, ಶಿವಕುಮಾರ ಶೆಟಕಾರ, ಯಶೋದಾ ರಾಠೊಡ, ಮೀರ್ ಅಹಮ್ಮದ ಅಲಿ ಮುನ್ಸಿ, ತಹಸೀನ್ ಅಲಿ ಜಮಾದಾರ, ಜುಲ್ಫಿಕರ್ ಅಹ್ಮದ ಚಾಬುಕ ಸವಾರ, ಮೊಹಮ್ಮದ ಮಿನಾಜೋದ್ದಿನ್ ಬೊಲೆ, ರುಕ್ಸಾರಾ ತಹಸೀನ, ಮುಖ್ಯ ಸಂಘಟಕ ಅಲ್ತಾಫ್ ಅಹಮದ್ ಅಸದುಲ್ಲಾ ಖಾನ್, ಸಹಾಯಕ ಸಂಘಟಕ ಎಹ್ತೇಶಾಮ್ ಅಕ್ತರ, ನರಸಿಂಗ ರೆಡ್ಡಿ ಗದಲೇಗಾಂವ, ನೀಲಕಂಠ ರಾಠೊಡ, ಬಾಬು ಹೋನ್ನಾನಾಯಕ, ತಹಸೀಲ್ದಾರ ಶಾಂತಗೌಡಾ ಬೀರಾದರ, ಸಿಪಿಐ ಅಲಿಸಾಬ, ರಾಜು ಮಂಠಾಳೆ, ಆಕಾಶ ಖಂಡಾಳೆ, ಮೋಹಮ್ಮದ ರೈಸೋದ್ದಿನ್, ಕೇಶಪ್ಪ ಬಿರಾದರ ಎಂ.ಎಂ ಬೇಗ ಹಾಗೂ ಇನ್ನಿತರ ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶಿವಾನಂದ ಮೈತ್ರೆ ಸ್ವಾಗತಿಸಿದ್ದರು.