ತುಮಕೂರು: ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅವರು ತುಮಕೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಅವಿರೋಧ ಆಯ್ಕೆಯಾದರು.
ತುಮಕೂರು: ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅವರು ತುಮಕೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಅವಿರೋಧ ಆಯ್ಕೆಯಾದರು.
ಸಂಘದ ಸಭಾಂಗಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಶನಿವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಆರ್. ರಾಜೇಂದ್ರ ಅವರು ಅಧ್ಯಕ್ಷರಾಗಿ, ರಾಧಾ ದೇವರಾಜು ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈ ವೇಳೆ ಸಂಘದ ನಿರ್ದೇಶಕರಾದ ದೊಡ್ಡನಂಜಯ್ಯ, ಕೆಂಪಹನುಮಯ್ಯ, ಬಿ.ಸಿ. ಉಮೇಶ್, ಎಂ.ಎ. ಶಶಿಧರ, ಎನ್.ವಿ. ಲಕ್ಷ್ಮೀಕಾಂತ್, ಪಿ. ಮೂರ್ತಿ, ಮಹಮದ ಜಿಯಾವುಲ್ಲಾ, ಜಿ.ಎಸ್. ಬಸವರಾಜು, ಕೆ.ಎನ್. ನವರತ್ನಕುಮಾರ, ವಿ.ಜಿ. ಸರೋಜ, ಎಂ.ವಿ. ರಾಘವೇಂದ್ರಸ್ವಾಮಿ ಅವರು ಹಾಜರಿದ್ದು ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿದರು. ಕೆ.ಎಚ್. ಮಹಂತೇಶಯ್ಯ ಅವರು ಚುನಾವಣೆಯ ರಿಟರ್ನಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಆರ್. ರಾಜೇಂದ್ರ ಅವರು, ಕೆ.ಎನ್. ರಾಜಣ್ಣನವರ ಮಾರ್ಗದರ್ಶನದಲ್ಲಿ ಚುನಾವಣೆ ನಡೆದಿದ್ದು, ಸಂಘವನ್ನು ಯಶಸ್ವಿಯಾಗಿ ಮುನ್ನಡೆಸೋಣ ಎಂದು ನೂತನ ಕಾರ್ಯಕಾರಿ ಮಂಡಳಿಗೆ ತಿಳಿಸಿದರು. ವಿವಿಧ ಸಂಘಸಂಸ್ಥೆಗಳ ಮುಖಂಡರಾದ ಕಲ್ಲಹಳ್ಳಿ ದೇವರಾಜು, ಬಿ.ಜಿ. ವೆಂಕಟೇಗೌಡ, ಟಿ.ಪಿ. ಮಂಜುನಾಥ, ಧನಿಯಾಕುಮಾರ, ನಾರಾಯಣಗೌಡ, ಕೈದಾಳ ರಮೇಶ, ರಾಜೇಶ ದೊಡ್ಮನೆ ಮೊದಲಾದವರು ಅಭಿನಂದಿಸಿ ಶುಭ ಕೋರಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.