ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ರಾಧಾಕೃಷ್ಣ ವಿದ್ಯಾಶಾಲೆಯ ಎಸ್.ಎಸ್.ಶ್ರೀಲಕ್ಷ್ಮೀ 625ಕ್ಕೆ 621 ಅಂಕಗಳಿಸಿ ತಾಲೂಕಿಗೆ ಪ್ರಥಮ ಹಾಗೂ ಜಿಲ್ಲೆಗೆ 2ನೇ ಸ್ಥಾನ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.ಚನ್ನರಾಯಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಡಿ.ಎಂ. ಹರ್ಷಿತಾ, ಶಾಲಿನಿ ಇಂಟರ್‌ನ್ಯಾಷನಲ್ ಶಾಲೆಯ ಪ್ರಜ್ವಲ್ ಕೆ., ಗೂರಮಾರನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಿಕ್ಷಣ ಶಾಲೆಯ ಎನ್. ನಿಖಿಲ್, ಆಲೋನ್ಸ್ ನಗರದ ಸೇಂಟ್ ಮೇರಿಸ್ ಅಂಗ್ಲ ಮಾದ್ಯಮ ಶಾಲೆಯ ಎಂ.ಯು ಐಶ್ವರ್ಯಾ, ತಲಾ 613 ಅಂಕ ಗಳಿಸಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.611 ಅಂಕ ಗಳಿಸಿರುವ ಕಬ್ಬಳಿ ಬಸವೇಶ್ವರ ಪ್ರೌಢಶಾಲೆಯ ಕೆ.ಗಣೇಶ್ ಮೂರನೇ ಸ್ಥಾನ ಹಾಗೂ 606 ಅಂಕ ಗಳಿಸಿರುವ ಬಿಇಒ ಕಚೇರಿ ಹಿಂಭಾಗದ ಸರ್ಕಾರಿ ಪ್ರೌಢ ಶಾಲೆಯ ಅಸ್ಫಾತಬಸುಂ ಮತ್ತು ಕುಂದೂರು ಮಠ ಮುರಾರ್ಜಿ ವಸತಿ ಶಾಲೆಯ ಸಿದ್ದೇಶ್ 4ನೇ ಸ್ಥಾನದಲ್ಲಿದ್ದಾರೆ.ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ 83.06 ಫಲಿತಾಂಶ ಲಭಿಸಿದೆ. ಕಳೆದ ಬಾರಿಗಿಂತ ಶೇ. 12.7 ಕುಸಿತ ಕಂಡಿದೆ. ಈ ಬಾರಿ 2853 ಮಂದಿ ಪರೀಕ್ಷೆಗೆ ಹಾಜ ರಾಗಿದ್ದು, ಇದರಲ್ಲಿ 2395 ಮಂದಿ ತೇರ್ಗಡೆ ಹೊಂದಿದ್ದಾರೆ. ಎಂದಿನಂತೆ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. 1464 ಹೆಣ್ಣು ಮಕ್ಕಳು ಪರೀಕ್ಷೆ ಬರೆದಿದ್ದು, ಇವರಲ್ಲಿ 1320. 1389 ಗಂಡು ಮಕ್ಕಳಲ್ಲಿ 1075 ತೇರ್ಗಡೆಯಾಗಿದ್ದಾರೆ.ಎಪ್ಲಸ್ ಶ್ರೇಣಿಯಲ್ಲಿ 125, ಎ ಶ್ರೇಣಿಯಲ್ಲಿ 336, ಬಿ ಪ್ಲಸ್ ಶ್ರೇಣಿಯಲ್ಲಿ 463 ಹಾಗೂ ಬಿ ಶ್ರೇಣಿಯಲ್ಲಿ 546, ಸಿ ಪ್ಲಸ್ ಶ್ರೇಣಿ ಯಲ್ಲಿ 621 ಮತ್ತು ಸಿ ಶ್ರೇಣಿಯಲ್ಲಿ 304 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 458 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.ತಾಲೂಕಿನ 12 ಶಾಲೆಗಳು ಮಾತ್ರ ನೂರಕ್ಕೆ ನೂರು ಫಲಿತಾಂಶ ಗಳಿಸಿಕೊಂಡಿವೆ. ಭೈರಾಪುರ ಸರ್ಕಾರಿ ಪ್ರೌಢಶಾಲೆ, ಕಲ್ಕೆರೆ ಸರ್ಕಾರಿ ಪ್ರೌಢಶಾಲೆ, ಓಬಳಾಪುರ ಸರ್ಕಾರಿ ಪ್ರೌಢಶಾಲೆ, ಹಿರೀಸಾವೆಯ ಶಾರದಾ ಅನಿಕೇತನ ಪ್ರೌಢಶಾಲೆ, ಕುಂಭೇನಹಳ್ಳಿಯ ಸರ್ಕಾರಿ ಪ್ರೌಢಶಾಲೆ, ಕುಂದೂರುಮಠದ ಮುರಾರ್ಜಿ ದೇಸಾಯಿ ವಸತಿ ಶಿಕ್ಷಣ ಶಾಲೆ, ನುಗ್ಗೇಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಿಕ್ಷಣ ಶಾಲೆ, ಕಬ್ಬಳಿಯ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆ, ಶ್ರವಣಬೆಳಗೊಳದ ಸಿಂಹಾದ್ರಿ ಎವರ್ ಗ್ರೀನ್ ವಿದ್ಯಾಶಾಲೆ, ಗೂರಮಾರನಹಳ್ಳಿಯ ಗಿರೀಶ್ ಪಬ್ಲಿಕ್ ಶಾಲೆ, ಶ್ರವಣಬೆಳಗೊಳದ ಗೈಡ್‌ಲೈನ್ ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಪಡೆದಿವೆ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎನ್. ಅನಿಲ್ ತಿಳಿಸಿದ್ದಾರೆ.