ಬೆಳಗುಂಬ ಗ್ರಾಪಂ ಅಧ್ಯಕ್ಷರಾಗಿ ರಾಧಿಕಾ ಅವಿರೋಧ ಆಯ್ಕೆ

KannadaprabhaNewsNetwork |  
Published : Apr 29, 2026, 01:30 AM IST
೨೮ಮಾಗಡಿ೧ : ಮಾಗಡಿ ತಾಲ್ಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಧಿಕಾ ರಾಜಣ್ಣ ರವರನ್ನು ಬೆಂಬಲಿಗರು ಅಭಿನಂದಿಸಿದರು. | Kannada Prabha

ಸಾರಾಂಶ

ಮಾಗಡಿ: ತಾಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರಾಧಾ ರಾಜಣ್ಣ ಅವಿರೋಧವಾಗಿ ಆಯ್ಕೆಯಾದರು

ಮಾಗಡಿ: ತಾಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರಾಧಾ ರಾಜಣ್ಣ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಂದೇ ನಾಮಪತ್ರ ಬಂದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ರೇಣುಕೇಶ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡುತ್ತಿದ್ದಂತೆ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು.

ನೂತನ ಅಧ್ಯಕ್ಷೆ ರಾಧಿಕಾ ರಾಜಣ್ಣ ಮಾತನಾಡಿ, ಸದಸ್ಯರೆಲ್ಲರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದು ಈಗಾಗಲೇ ಉಪಾಧ್ಯಕ್ಷರಾಗಿ ಸೇವೆ ಮಾಡಿರುವ ಅನುಭವವಿದ್ದು ಎಲ್ಲಾ ಸದಸ್ಯರ ಸಹಕಾರ ಪಡೆದು ಪಂಚಾಯಿತಿಗೆ ಮೂಲಭೂತ ಸೌಲಭ್ಯ ಕೊಡುವ ಕೆಲಸ ಮಾಡಲಾಗುತ್ತದೆ ಈಗ ಬೇಸಿಗೆ ಇರುವುದರಿಂದ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಬಿಡುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ವೆಂಕಟೇಶ್ ಮಾತನಾಡಿ, ಹಿರಿಯರಾದ ರಾಧಿಕಾ ರಾಜಣ್ಣನವರಿಗೆ ಸದಸ್ಯರ ಬೆಂಬಲದಿAದ ಅಧ್ಯಕ್ಷರಾಗಿ ಮಾಡಿದ್ದು ಇನ್ನೂ ಕೂಡ ಒಪ್ಪಂದದAತೆ ಇತರರಿಗೂ ಅಧ್ಯಕ್ಷರನ್ನು ಮಾಡುವ ಅವಕಾಶವಿದ್ದು ಯಾವುದೇ ಯಲ್ಲಿ ಗೆದ್ದಿದ್ದ ಎಲ್ಲರಿಗೂ ಅಧ್ಯಕ್ಷ ಸ್ಥಾನ ಕೊಡುವಂತೆ ಸದಸ್ಯರು ಒಪ್ಪಿದ್ದು ಎಲ್ಲರ ಸಹಕಾರದಿಂದ ಪಂಚಾಯಿತಿ ಅಭಿವೃದ್ಧಿ ಪಥದತ್ತ ನಡೆಯುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಗ್ರಾಪಂ ಸದಸ್ಯರಾದ ಗಂಗಾಲಕ್ಷ್ಮಿ ವೆಂಕಟೇಶ್, ಸದಸ್ಯರಾದ ಕೋಟಪ್ಪ, ಬೈರಪ್ಪ, ವಿಶ್ವನಾಥ್, ಸುರೇಶ್, ಹೊನ್ನಸ್ವಾಮಯ್ಯ, ಶಿವಕುಮಾರ್, ಸದಾಶಿವಯ್ಯ, ಉಮಾ ನರಸಿಂಹಮೂರ್ತಿ, ಕನಕ ಗಿರೀಶ್, ಶಬೀನಾ ತಾಜ್ ಅಬ್ದುಲ್ ಬಶೀರ್, ಜಯಲಕ್ಷ್ಮಮ್ಮ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಸಮಸ್ಯೆ ಅರಿತು ಪರಿಹರಿಸಲು ಪ್ರಯತ್ನಿಸಿ: ದರ್ಶನ್ ಪುಟ್ಟಣ್ಣಯ್ಯ
ಸಾರಿಗೆ ಬಸ್‌ಗಳ ಕೆಲ ನಿರ್ವಾಹಕರಿಂದ ಶಕ್ತಿ ಯೋಜನೆ ದುರ್ಬಳಕೆ: ಮೂಡ್ಲೀಗೌಡ