ವಿಜಯಪುರ: ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಅಧ್ಯಕ್ಷತೆಯಲ್ಲಿ, ೨೦೨೬-೨೭ನೇ ಸಾಲಿನ ೨೯.೫೦ ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಜೆಟ್ ಗಾತ್ರ ೬೧.೫೨ ಕೋಟಿ ಮಂಡಿಸಿದ್ದು, ೬೧.೨೩ ಕೋಟಿ ಖರ್ಚು ಕಳೆದು, ೨೯.೫೦ ಲಕ್ಷ ಉಳಿತಾಯ ಮಾಡಲಾಗಿದೆ ಎಂದು ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಓದಿದರು
ವಿಜಯಪುರ: ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಅಧ್ಯಕ್ಷತೆಯಲ್ಲಿ, ೨೦೨೬-೨೭ನೇ ಸಾಲಿನ ೨೯.೫೦ ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಜೆಟ್ ಗಾತ್ರ ೬೧.೫೨ ಕೋಟಿ ಮಂಡಿಸಿದ್ದು, ೬೧.೨೩ ಕೋಟಿ ಖರ್ಚು ಕಳೆದು, ೨೯.೫೦ ಲಕ್ಷ ಉಳಿತಾಯ ಮಾಡಲಾಗಿದೆ ಎಂದು ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಓದಿದರು.
ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ೬ ಕೋಟಿ, ಪೀಠೋಪಕರಣಗಳಿಗೆ ೧೫ ಲಕ್ಷ, ಸ್ವಾಗತ ಕಮಾನು, ತಡೆಗೋಡೆಗಳ ನಿರ್ಮಾಣ, ರಸ್ತೆಬದಿ ಮಾರ್ಗ ಸೂಚಿಫಲಕಗಳ ಅಳವಡಿಕೆ ಹಾಗೂ ಸಿ.ಸಿ.ಕ್ಯಾಮರಾಗಳ ಅಳವಡಿಕೆಗೆ ೧೫ ಲಕ್ಷ, ಪಾದಾಚಾರಿಗಳ ರಸ್ತೆ, ಚರಂಡಿಗಳ ಅಭಿವೃದ್ಧಿಗೆ ೧.೩೦ ಕೋಟಿ, ಬೀದಿದೀಪಗಳ ಕಾಮಗಾರಿಗಾಗಿ ೮ ಲಕ್ಷ, ಮಳೆ ನೀರಿನ ಚರಂಡಿ ಕಾಮಗಾರಿಗೆ ೩೦ ಲಕ್ಷ, ಸಾರ್ವಜನಿಕರ ಶೌಚಾಲಯಗಳ ನಿರ್ಮಾಣಕ್ಕೆ ೨೫ ಲಕ್ಷ, ಸ್ಮಶಾನ ಅಭಿವೃದ್ಧಿಗೆ ೨೫ ಲಕ್ಷ ಘನತ್ಯಾಜ್ಯ ವಸ್ತು ನಿರ್ವಹಣೆಗೆ ೫೦ ಲಕ್ಷ, ನೀರು ಸರಬರಾಜು ಕಟ್ಟಡಗಳ ನಿರ್ಮಾಣ, ಯಂತ್ರೋಪಕರಣಗಳ ಖರೀದಿಗಾಗಿ ೧.೨೫ ಕೋಟಿ, ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ೨೦ ಲಕ್ಷ, ಪಾರ್ಕ್ ಅಭಿವೃದ್ಧಿಗೆ ೨೦ ಲಕ್ಷ, ಎಸ್‌ಸಿಎಸ್‌ಟಿ, ಒಬಿಸಿ, ಅಂಗ ವಿಕಲ ಅಭಿವೃದ್ಧಿಗಾಗಿ ೧೦ ಲಕ್ಷ, ಅಧ್ಯಯನ ಪ್ರವಾಸ ಹಾಗೂ ಸದಸ್ಯರ ಗೌರವಧನಕ್ಕಾಗಿ ೪೫ ಲಕ್ಷ, ಎಸ್‌ಎಫ್‌ಸಿಯಡಿ ಬೀದಿ ದೀಪಗಳ ಶುಲ್ಕ ಪಾವತಿಗೆ ೧.೫೦ ಕೋಟಿ, ಎಸ್‌ಎಫ್‌ಸಿ ನೀರು ಸರಬರಾಜು ೪ ಕೋಟಿ, ಬೀದಿನಾಯಿಗಳ ನಿಯಂತ್ರಣಕ್ಕಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ೩೦ ಲಕ್ಷ, ಮುಕ್ತಿ ವಾಹನ ಖರೀದಿಸಲು ೧೫ ಲಕ್ಷ, ಪುರಸಭೆಗೆ ಸೇರಿದ ಕಟ್ಟಡಗಳು, ರಸ್ತೆಗಳು, ಶೌಚಾಲಯಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ದುರಸ್ತಿಗಾಗಿ ೪.2 ಕೋಟಿ ಮೀಸಲಿಡಲಾಗಿದೆ ಎಂದು ಬಜೆಟ್ ನಲ್ಲಿ ಓದಿದರು.
ಸಭೆಯಲ್ಲಿ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಸದಸ್ಯರಾದ ಎಂ.ಸತೀಶ್ ಕುಮಾರ್, ವಿಮಲಾ ಬಸವರಾಜ್, ವಿ.ನಂದಕುಮಾರ್, ಎಂ.ಕೇಶವಪ್ಪ, ಎ.ಆರ್.ಹನೀಪುಲ್ಲಾ ಸೈಯದ್ ಎಕ್ಭಾಲ್, ಸಿ.ಎಂ.ರಾಮು, ಎಂ.ರಾಜಣ್ಣ, ಶಿಲ್ಪಾಅಜಿತ್, ಎಂ.ನಾರಾಯಣಸ್ವಾಮಿ, ಆಯಿಷಾಸೈಪುಲ್ಲಾ, ಸಲ್ಮಾಖಾನಂ, ಮಂಜುಳಮ್ಮಮುನಿರಾಜು, ಸುಷ್ಮಾಮಹೇಶ್, ಶ್ರೀರಾಮಣ್ಣ, ಹಾಗೂ ಅಧಿಕಾರಿಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.