ಕೈಗಾರಿಕೆಗಳಿಂದ ಅಮೂಲಾಗ್ರ ಬದಲಾವಣೆ: ಶಾಸಕ ಶರತ್‌

KannadaprabhaNewsNetwork |  
Published : Nov 09, 2026, 01:45 AM IST
ಸೂಲಿಬೆಲೆ ಹೋಬಳಿ ಕಂಬಳೀಪುರ ಗ್ರಾಮದಲ್ಲಿ ಕೈಗಾರಿಕೆ ಪ್ರಧೇಶ ಅಭಿವೃದ್ದಿ ಅನುದಾನದಲ್ಲಿ ೬೦ ಕೋಟಿ ವೆಚ್ಚದಲ್ಲಿ ಮೂಲಭೂತ ಸೌರ‍್ಯಗಳ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು, ಬಿಎಂಅರ್‌ಡಿ ಅಧ್ಯಕ್ಷ ಬೈರೇಗೌಡ, ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ, ಗೋಪಾಲಗೌಡ, ವೆಂಕಟೇಶ್, ನಗರೇನಹಳ್ಳಿ ನಾಗರಾಜಪ್ಪ ಇತರರು ಇದ್ದರು. | Kannada Prabha

ಸಾರಾಂಶ

ಸೂಲಿಬೆಲೆ: ಕಂಬಳೀಪುರ ಗ್ರಾಪಂ ವ್ಯಾಪ್ತಿಯಲ್ಲಿ ೧೨೦ ಎಕರೆ ಪ್ರದೇಶದಲ್ಲಿ ಸಣ್ಣ ಉದ್ದಿಮೆಗಳು, ಕಾರ್ಖಾನೆಗಳು ಬರಲಿದ್ದು, ಇದರಿಂದ ಆ ಪ್ರದೇಶದಲ್ಲಿ ಅಮೂಲಾಗ್ರ ಬದಲಾವಣೆ ಕಾಣಬಹುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು

ಸೂಲಿಬೆಲೆ: ಕಂಬಳೀಪುರ ಗ್ರಾಪಂ ವ್ಯಾಪ್ತಿಯಲ್ಲಿ ೧೨೦ ಎಕರೆ ಪ್ರದೇಶದಲ್ಲಿ ಸಣ್ಣ ಉದ್ದಿಮೆಗಳು, ಕಾರ್ಖಾನೆಗಳು ಬರಲಿದ್ದು, ಇದರಿಂದ ಆ ಪ್ರದೇಶದಲ್ಲಿ ಅಮೂಲಾಗ್ರ ಬದಲಾವಣೆ ಕಾಣಬಹುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಸೂಲಿಬೆಲೆ ಹೋಬಳಿ ಕಂಬಳೀಪುರ ಗ್ರಾಪಂ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿಯ ರಸ್ತೆ ಅಭಿವೃದ್ಧಿ ಹಾಗೂ ಮೂಲ ಸೌಕರ‍್ಯಗಳ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೈಗಾರಿಕೆ ಇಲಾಖೆಯಿಂದ ನೂತನ ಬಡಾವಣೆ ಮಾದರಿಯಲ್ಲಿ ಕಾಮಗಾರಿ ನಡೆಯಲಿದೆ. ೮೦ ಅಡಿ ಅಗಲದ ಡಾಂಬರು ರಸ್ತೆ ನಿರ್ಮಾಣ, ೨ ಬದಿಯಲ್ಲಿ ಆರ್‌ಸಿಸಿ ಚರಂಡಿ ನಿರ್ಮಾಣ, ಅಡ್ಡ ಚರಂಡಿಗಳ ನಿರ್ಮಾಣ, ರಸ್ತೆ ಬದಿಯಲ್ಲಿ ತಡೆಗೋಡೆ ನಿರ್ಮಾಣ, ಕುಡಿಯುವ ನೀರಿನ ಸರಬರಾಜು ಪೈಪ್‌ಲೈನ್‌ ಅಳವಡಿಕೆ, ಒವರ್ ಹೆಡ್ ಟ್ಯಾಂಕ್ ನಿರ್ಮಾಣ, ಕೆಳಮಟ್ಟದ ಸಂಪ್ ನಿರ್ಮಾಣ ಕಾಮಗಾರಿ ಹಾಗೂ ಮಳೆ ನೀರು ಕೊಯ್ಲು ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ೮೦ ಕೋಟಿ ಅನುದಾನ ನೀಡಿದ್ದು, ಕೇವಲ ೬ ತಿಂಗಳ ಅವಧಿಯಲ್ಲಿ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿದರು.

ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಮಾತನಾಡಿ, ಕೈಗಾರಿಕೆ ಹೆಚ್ಚಾದಂತೆ ಕೃಷಿ ಭೂಮಿ ಕಡಿಮೆಯಾಗುತ್ತದೆ. ಇದರಿಂದ ಆಹಾರ ಪಧಾರ್ಥಗಳ ಸಮಸ್ಯೆ ಉದ್ಭವವಾಗಲಿದೆ. ಫಲವತ್ತಾದ ಕೃಷಿ ಭೂಮಿಯನ್ನು ಕೃಷಿಗೆ ಮೀಸಲಿಟ್ಟು ಬರಡು ಭೂಮಿಯಲ್ಲಿ ಕೈಗಾರಿಕೆ ಪ್ರಾರಂಭಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.

ಇದೇ ವೇಳೆ ಕಂಬಳೀಪುರ ಗ್ರಾಪಂ ವ್ಯಾಪ್ತಿಯ ೮ ಹಳ್ಳಿಗಳ ೧೨೦೦ ಕುಟುಂಬಗಳಿಗೆ ಬಮೂಲ್ ನಿರ್ದೇಶಕರಾದ ಬಿ.ವಿ.ಸತೀಶಗೌಡರ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಪುಡ್ ಕಿಟ್ ವಿತರಣೆ ಮಾಡಲಾಯಿತು.

ಈ ವೇಳೆ ಬಿಎಂಅರ್‌ಡಿ ಅಧ್ಯಕ್ಷ ಬಿ.ವಿ.ಬೈರೇಗೌಡ, ಬಮುಲ್ ನಿರ್ದೇಶಕ ಬಿ.ವಿ.ಸತೀಶಗೌಡ, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಬಿ.ವೆಂಕಟೇಶ್, ಕೈಗಾರಿಕೆ ಇಲಾಖೆ ಇಂಜಿನಿಯರ್ ಆದರ್ಶ, ಸದಸ್ಯ ನವಾಜ್, ಮಾಜಿ ಸದಸ್ಯ ಸುಬ್ಬರಾಜು, ಕಂಬಳೀಪುರ ಗ್ರಾಪಂ ಮಾಜಿ ಅಧ್ಯಕ್ಷ ಆನಂದಪ್ಪ, ಮುನಿಯಪ್ಪ, ರಮೇಶ್, ಟಿಎಪಿಸಿಎಂಎಸ್ ನಿರ್ದೇಶಕ ನಗರೇನಹಳ್ಳಿ ನಾಗರಾಜಪ್ಪ, ಯುವ ಮುಖಂಡ ಸುಭಾಷಗೌಡ, ದೊಡ್ಡಕೋಲಿಗ ಶಿವಕುಮಾರ್, ಅಶ್ವಿನಿ, ಪೂಜಾ, ಪಿಡಿಒ ಮುನಿಗಂಗಯ್ಯ, ಗುತ್ತಿಗೆದಾರ ವೆಂಕಟರೆಡ್ಡಿ , ಹಸಿಗಾಳ ಜಗದೀಶ್ ಇತರರು ಉಪಸ್ಥಿತರಿದ್ದರು.

(ಫೋಟೊ ಕ್ಯಾಪ್ಷನ್‌)

ಸೂಲಿಬೆಲೆ ಹೋಬಳಿ ಕಂಬಳೀಪುರದಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು, ಬಿಎಂಅರ್‌ಡಿ ಅಧ್ಯಕ್ಷ ಬೈರೇಗೌಡ, ಬಮುಲ್ ನಿರ್ದೇಶಕ ಬಿ.ವಿ.ಸತೀಶಗೌಡ, ಗೋಪಾಲಗೌಡ, ವೆಂಕಟೇಶ್, ನಗರೇನಹಳ್ಳಿ ನಾಗರಾಜಪ್ಪ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ