ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ನಲ್ಲಿ ರಾಗಿ ಮುದ್ದೆ-ಚಪಾತಿ

KannadaprabhaNewsNetwork |  
Published : Jul 27, 2024, 01:47 AM ISTUpdated : Jul 27, 2024, 10:00 AM IST
ಇಂದಿರಾ ಕ್ಯಾಂಟೀನ್‌ (ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಗೆ ಹೊಸದಾಗಿ ಗುತ್ತಿಗೆದಾರರನ್ನು ನೇಮಕ ಮಾಡಲಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಮುದ್ದೆ, ಚಪಾತಿ ಸೇರಿದಂತೆ ಹೊಸ ಮೆನು ಜಾರಿಗೆ ಬರಲಿದೆ.

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಗೆ ಹೊಸದಾಗಿ ಗುತ್ತಿಗೆದಾರರನ್ನು ನೇಮಕ ಮಾಡಲಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಮುದ್ದೆ, ಚಪಾತಿ ಸೇರಿದಂತೆ ಹೊಸ ಮೆನು ಜಾರಿಗೆ ಬರಲಿದೆ.

ಬಿಬಿಎಂಪಿಯ 192 ಇಂದಿರಾ ಕ್ಯಾಂಟೀನ್‌ ಪೈಕಿ 142 ಕ್ಯಾಂಟೀನ್‌ ಗಳಿಗೆ ಆಹಾರ ಪೂರೈಕೆಗೆ ಹೊಸ ಗುತ್ತಿಗೆದಾರರನ್ನು ನೇಮಕ ಮಾಡಲಾಗಿದ್ದು, ಬಿಬಿಎಂಪಿ ಕಾರ್ಯಾದೇಶ ನೀಡುವುದಷ್ಟೇ ಬಾಕಿ ಇದೆ. ಒಂದು ವಾರದಲ್ಲಿ ಕಾರ್ಯಾದೇಶ ನೀಡಲಾಗುತ್ತಿದೆ. ಆಗಸ್ಟ್‌ 2ನೇ ವಾರದಿಂದ ಗುತ್ತಿಗೆದಾರರು ಆಹಾರ ಪೂರೈಕೆ ಆರಂಭಿಸಲಿದ್ದಾರೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದ್ದಾರೆ.

ಕಾಫಿ, ಟೀ ಜತೆಗೆ 3 ಬಗೆಯ ಉಪಾಹಾರ

ಇಂದಿರಾ ಕ್ಯಾಂಟೀನ್‌ ಆಹಾರದ ಬಗ್ಗೆ ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಆಹಾರ ಪದಾರ್ಥ (ಮೆನು) ಬದಲಾವಣೆ ಮಾಡಲಾಗಿದೆ. ಉಪಾಹಾರಕ್ಕೆ ಮೂರು ಮಾದರಿಯ ಆಯ್ಕೆ ನೀಡಲಾಗಿದೆ. ಗ್ರಾಹಕರ ಆಯ್ಕೆಗೆ ಅನುಗುಣವಾಗಿ ನೀಡಲಾಗುತ್ತದೆ.

ಆಯ್ಕೆ1: ವಾರದ ಏಳು ದಿನವೂ ಬೆಳಗ್ಗೆ ಇಡ್ಲಿ ದೊರೆಯಲಿದೆ. ಮೂರು ಇಡ್ಲಿ (150 ಗ್ರಾಂ) ಮತ್ತು ಸಾಂಬಾರ್‌ (100 ಗ್ರಾಂ) ಸಿಗಲಿದೆ.

ಆಯ್ಕೆ2: ಪ್ರತಿ ದಿನವೂ ಒಂದೊಂದು ಮಾದರಿಯ ರೈಸ್‌ ಬಾತ್‌ (225 ಗ್ರಾಂ) ಜತೆಗೆ ಚಟ್ನಿ, ಸಾಂಬರ್, ಮೊರಸು ಬಜ್ಜಿ (100 ಗ್ರಾಂ) ಹಾಗೂ ಖಾರಾ ಬೂಂದಿ (15 ಗ್ರಾಂ) ನೀಡಲಾಗುತ್ತದೆ. ಪಲಾವ್, ಬಿಸಿಬೇಳೆ ಬಾತ್‌, ಕಾರಬಾತ್‌, ಪೊಂಗಲ್‌, ಭಾನುವಾರ ಮಾತ್ರ ಚೌಚೌ ಬಾತ್‌ ನೀಡಲಾಗುತ್ತದೆ.

ಆಯ್ಕೆ3: ಬ್ರೆಡ್‌ ಜಾಮ್‌ (2), ಮಂಗಳೂರು ಬನ್ಸ್‌ (40 ಗ್ರಾಂ) ಜತೆಗೆ ಕಾಫಿ ಅಥವಾ ಟೀ (80 ಎಂಎಲ್‌)

ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 2 ಆಯ್ಕೆ

ನಗರದ ಜನರ ಬಹುದಿನ ಬೇಡಿಕೆಯಂತೆ ಮುದ್ದೆ ಮತ್ತು ಚಪ್ಪಾತಿಯನ್ನು ನೀಡಲಾಗುತ್ತಿದೆ. ವಾರದ 7 ದಿನದಲ್ಲಿ ದಿನ ಬಿಟ್ಟು ದಿನ ಮುದ್ದೆ ಮತ್ತು ಚಪಾತಿ ನೀಡಲಾಗುತ್ತದೆ. ಜತೆಗೆ, ಈ ಹಿಂದೆ ಇರುವಂತೆ ಅನ್ನ ಸಾಂಬಾರ್‌ ಮುಂದುವರೆಸಲಾಗುತ್ತಿದೆ. ಅನ್ನ ಸಂಚಾರ್‌ ಅಥವಾ ಮುದ್ದೆ/ಚಪಾತಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಆಯ್ಕೆ 1: ಅನ್ನ (300 ಗ್ರಾಂ), ತರಕಾರಿ ಸಾಂಬರ್‌ (150 ಗ್ರಾಂ) ನೀಡಲಾಗುತ್ತದೆ. ಕರಿ, ಮೊಸರು ಬಜ್ಜಿ, ಮೊಸರನ್ನಾ (75ರಿಂದ 100 ಎಂಎಲ್‌) ಇದರಲ್ಲಿ ಯಾವುದಾರೂ ಒಂದನ್ನು ಪ್ರತಿ ದಿನ ನೀಡಲಾಗುತ್ತದೆ.

ಆಯ್ಕೆ 2: 100 ಗ್ರಾಂ ತೂಕದ ಎರಡು ರಾಗಿ ಮುದ್ದೆ- ಸೊಪ್ಪಿನ ಸಾರು ಅಥವಾ 40 ಗ್ರಾಂ ತೂಕದ ಎರಡು ಚಪ್ಪಾತಿ- ತರಕಾರಿ ಸಾಗು ನೀಡಲಾಗುತ್ತದೆ.ಟೇಬಲ್‌

ಯಾವತ್ತು? ಯಾವ ಮೆನು?

ಅವಧಿಸೋಮ/ಗುರುವಾರಮಂಗಳ/ಶುಕ್ರವಾರಬುಧವಾರಶನಿವಾರಭಾನುವಾರ

ಬೆಳಗ್ಗೆ:ಇಡ್ಲಿ/ಪಲಾವ್‌/ಬ್ರೆಡ್‌ ಜಾಮ್‌-ಟೀ/ಕಾಫಿಇಡ್ಲಿ/ ಬಿಸಿಬೆಳೆಬಾತ್/ ಮಂಗಳೂರು ಬನ್ಸ್‌ಇಡ್ಲಿ/ ಕಾರಬಾತ್‌/ ಬನ್ಸ್‌-ಟೀ/ಕಾಫಿಇಡ್ಲಿ/ ಪೊಂಗಲ್‌/ಬನ್ಸ್‌-ಟೀ/ ಕಾಫಿಇಡ್ಲಿ/ ಚೌಚೌ ಬಾತ್‌/ ಬ್ರೆಡ್ ಜಾಮ್- ಟೀ/ಕಾಫಿ

ಮಧ್ಯಾಹ್ನ/ರಾತ್ರಿ:ಅನ್ನ, ತರಕಾರಿ ಸಾರು/ ರಾಗಿಮುದ್ದೆ, ಸೊಪ್ಪಿನ ಸಾರುಅನ್ನ, ತರಕಾರಿ ಸಾರು/ಚಪಾತಿ-ಸಾಗುಅನ್ನ, ತರಕಾರಿ ಸಾರು/ ರಾಗಿಮುದ್ದೆ, ಸೊಪ್ಪಿನ ಸಾರುಅನ್ನ, ತರಕಾರಿ ಸಾರು/ ಚಪ್ಪಾತಿ-ಸಾಗುಅನ್ನ, ತರಕಾರಿ ಸಾರು/ ರಾಗಿಮುದ್ದೆ, ಸೊಪ್ಪಿನ ಸಾರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ