ಕನ್ನಡಪ್ರಭ ವಾರ್ತೆ ಕೋಲಾರ
ದೇಶದ ಭವಿಷ್ಯವಾದ ಸರ್ಕಾರಿ ಶಾಲಾ ಮಕ್ಕಳಲ್ಲಿನ ಹಸಿವು ನೀಗಿಸಿ ಕಲಿಕಾಸಕ್ತಿ ಹೆಚ್ಚಿಸಲು ಹಾಗೂ ಆರೋಗ್ಯಕರ ಬೆಳವಣಿಗೆಗೆ ರಾಗಿಮಾಲ್ಟ್ ಅದ್ಬುತ ಆಹಾರವಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.ನಗರದ ಬಾಲಕಿಯರ ಪಿಯು ಕಾಲೇಜಿನ ಆವರಣದಲ್ಲಿ ಜಿಪಂ ಕೋಲಾರ, ಶಾಲಾ ಶಿಕ್ಷಣ ಇಲಾಖೆ, ಶ್ರೀಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್, ಕೆಎಂಎಫ್‌ನಿಂದ ಕರ್ನಾಟಕ ರಾಜ್ಯ ಸರ್ಕಾರದ ನೂತನ ಕಾರ್ಯಕ್ರಮವಾದ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ‘ಸಾಯಿ ಶೂರ್ ಹೆಲ್ತ್‌ಮಿಕ್ಸ್’ ರಾಗಿಮಾಲ್ಟ್‌ಅನ್ನು ವಾರಕ್ಕೆ ಮೂರು ದಿನ ನೀಡುವ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಸಮವಸ್ತ್ರ, ಬಿಸಿಯೂಟ, ಕ್ಷೀರಭಾಗ್ಯ, ಇದೀಗ ರಾಗಿಮಾಲ್ಟ್, ಶೂ ಎಲ್ಲವನ್ನು ಉಚಿತವಾಗಿ ನೀಡುತ್ತಿದ್ದು, ದೇಶದ ಭವಿಷ್ಯವಾದ ಮಕ್ಕಳನ್ನು ಸಾಕ್ಷರರನ್ನಾಗಿ, ಸಾಧಕರನ್ನಾಗಿ ಕಾಣುವ ಆಶಯ ಹೊಂದಿದೆ, ಇಂದು ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಯುವಶಕ್ತಿ ಹೊಂದಿರುವ ದೇಶ ಭಾರತ ಎಂಬ ಹೆಗ್ಗಳಿಕೆ ಇದೆ, ನೀವು ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸುವ ಮೂಲಕ ದೇಶಕ್ಕೆ ಆಸ್ತಿಯಾಗಿ ಎಂದು ಕಿವಿಮಾತು ಹೇಳಿದರು.ಜ್ಞಾನಾಭಿವೃದ್ದಿಗೆ ಸಹಕಾರಿಡಿಡಿಪಿಐ ಕೃಷ್ಣಮೂರ್ತಿ ಮಾತನಾಡಿ, ಶಾಲೆಗಳಿಗೆ ಬರುವ ಮಕ್ಕಳು ಹಸಿವಿನಿಂದ ಬಂದರೆ ಅವರಲ್ಲಿ ಕಲಿಯುವ ಮತ್ತು ಶಿಕ್ಷಕರ ಪಾಠ ಕೇಳುವ ಆಸಕ್ತಿ ಕ್ಷೀಣಿಸಿರುತ್ತದೆ, ಈ ನಿಟ್ಟಿನಲ್ಲಿ ರಾಗಿಮಾಲ್ಟ್ ನೀಡುತ್ತಿರುವುದು ಅತ್ಯಂತ ಉತ್ತಮ ಕಾರ್ಯವಾಗಿದೆ ಎಂದರು.ಬಿಇಓ ಎಸ್.ಎನ್.ಕನ್ನಯ್ಯ, ಅಕ್ಷರದಾಸೋಹ ಶಿಕ್ಷಣಾಧಿಕಾರಿ ಸುಬ್ರಮಣಿ, ಬಾಲಕಿಯರ ಪಿಯು ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ, ಬಾಲಕರ ಕಾಲೇಜು ಉಪಪ್ರಾಂಶುಪಾಲೆ ರಾಧಮ್ಮ, ಬಾಲಕಿಯರ ಕಾಲೇಜು ಉಪಪ್ರಾಂಶುಪಾಲೆ ಮಂಜುಳಾ ರಾಗಿಮಾಲ್ಟ್ ಮಕ್ಕಳಿಗೆ ವಿತರಿಸಿದರು.ಸಾಯಿಶೂರ್ ಅನ್ನಪೂರ್ಣ ಟ್ರಸ್ಟ್‌ನ ಕವಿತಾ, ಎಸ್‌ಡಿಎಂಸಿ ಅಧ್ಯಕ್ಷೆ ಹೇಮಲತಾ, ಸದಸ್ಯೆ ರಮ್ಯಚಂದ್ರಶೇಖರ್, ಶಿಕ್ಷಕರಾದ ರಾಜಣ್ಣ, ನಾರಾಯಣಸ್ವಾಮಿ, ಪ್ರಮೀಳಾ, ವೀಣಾ, ವಿಜಯಕುಮಾರ್, ಫಣಿ ಮಲ್ಲಾರ್, ಕೌಡರ್ ಜೈಬಾ, ವಿಜಯಲಕ್ಷ್ಮಿ, ಫರೀದಾಬೇಗಂ ಇದ್ದರು.