ಶಿವಮೊಗ್ಗದಲ್ಲಿ ರಾಹುಲ್ ಗಾಂಧಿ ಜನ್ಮ ದಿನಾಚರಣೆ

KannadaprabhaNewsNetwork |  
Published : Jun 19, 2025, 11:49 PM IST
ಪೊಟೋ: 19ಎಸ್‌ಎಂಜಿಕೆಪಿ04ಶಿವಮೊಗ್ಗ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ರಾಹುಲ್ ಗಾಂಧಿ ಅವರ ಜನ್ಮದಿನ ಅಂಗವಾಗಿ ಮೆಗ್ಗಾನ್ ಆಸ್ಪತ್ರೆಯ  ಸ್ತ್ರೀರೋಗ  ವಿಭಾಗದ ಗರ್ಭಿಣಿಯರ ವಾರ್ಡಿನಲ್ಲಿ ವಿವಿಧ ರೀತಿಯ ಹಣ್ಣು ಗಳನ್ನು ವಿತರಿಸಲಾಯಿತು. | Kannada Prabha

ಸಾರಾಂಶ

ಶಿವಮೊಗ್ಗ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ರಾಹುಲ್ ಗಾಂಧಿ ಅವರ ಜನ್ಮದಿನ ಅಂಗವಾಗಿ ಮೆಗ್ಗಾನ್ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಗರ್ಭಿಣಿಯರ ವಾರ್ಡಿನಲ್ಲಿ ವಿವಿಧ ರೀತಿಯ ಹಣ್ಣುಗಳನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ರಾಹುಲ್ ಗಾಂಧಿ ಅವರ ಜನ್ಮದಿನ ಅಂಗವಾಗಿ ಮೆಗ್ಗಾನ್ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಗರ್ಭಿಣಿಯರ ವಾರ್ಡಿನಲ್ಲಿ ವಿವಿಧ ರೀತಿಯ ಹಣ್ಣುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಅಧ್ಯಕ್ಷ ಗಿರೀಶ್ ಮಾತನಾಡಿ, ರಾಹುಲ್ ಗಾಂಧಿಯವರು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಪಾದಯಾತ್ರೆ ಮೂಲಕ ಭಾರತ್ ಜೋಡೋ ಐತಿಹಾಸಿಕ ಕಾರ್ಯಕ್ರಮ ನೀಡಿ ಒಡೆದ ಮನಸ್ಸುಗಳ ಜೋಡಿಸುವ ಕೆಲಸ ಮಾಡಿದಂತಹ ಧೀಮಂತ ನಾಯಕ ಎಂದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮೇಲೆತ್ತುವ ಆಲೋಚನೆ ಹೊಂದಿರುವ ಬಡವರ ಬಂಧು ನಮ್ಮ ರಾಹುಲ್ ಗಾಂಧಿಯವರು ಮುಂದಿನ ದಿನಗಳಲ್ಲಿ ನಮ್ಮ ದೇಶದ ಪ್ರಧಾನಿ ಆಗುವ ಎಲ್ಲಾ ಗುಣಗಳು ಅವರಲ್ಲಿ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶಿವಕುಮಾರ್, ಕಲೀಂಪಾಶ, ಆಶ್ರಯ ಸಮಿತಿ ಸದಸ್ಯರಾದ ಯಮನಾರಂಗೇಗೌಡ, ಹಿಂದುಳಿದ ವರ್ಗದ ರಾಜ್ಯಪ್ರಧಾನ ಕಾರ್ಯದರ್ಶಿಯಾದ ಕಾಶಿ ವಿಶ್ವನಾಥ್, ಯುವ ಮುಖಂಡರುಗಳಾದ ಮಧುಸೂಧನ್, ಅಕ್ಬರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್, ಎನ್‌ಎಸ್‌ಐ ರಾಜ್ಯ ಕಾರ್ಯದರ್ಶಿ ಬಾಲಾಜಿ, ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಗಳಾದ ಗೌತಮ್, ಮಲಗೊಪ್ಪ ಶಿವು, ನಾಗೇಂದ್ರ ಹಾಗೂ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಯುವ ಕಾಂಗ್ರೆಸ್‌ನಿಂದ ವನ ಮಹೋತ್ಸವ:

ಕಾಂಗ್ರೆಸ್ ಪಕ್ಷದ ನಾಯಕರು, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಗುರುವಾರ ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ಗಿಡಗಳನ್ನು ನೆಡುವ ಮುಖಾಂತರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ , ಸೂಡ ಸದಸ್ಯರಾದ ಎಂ ಪ್ರವೀಣ್ ಕುಮಾರ್ , ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋನಿಯಾ ಎಂ, ಜಿಲ್ಲಾ ಯುವ ಕಾಂಗ್ರೆಸ್ ನ ಎಚ್.ಪಿ. ಗಿರೀಶ್, ಶಿವಮೊಗ್ಗ ವಿಧಾನಸಭಾ ಯುವ ಕಾಂಗ್ರೆಸ್ ಬಿ ಲೋಕೇಶ್ ,ಪಕ್ಷದ ಮುಖಂಡರಾದ ಡಾ.ಶರತ್ ಮರಿಯಪ್ಪ, ಆರ್ ಕಿರಣ್ , ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಎಸ್ ಕುಮಾರೇಶ್, ಎಸ್.ಬಸವರಾಜ್, ಯುವ ಕಾಂಗ್ರೆಸ್ ನ ಜಿಲ್ಲಾ ಪದಾಧಿಕಾರಿಗಳಾದ ಎಂ ರಾಕೇಶ್, ಕೆ .ಎಲ್. ಪವನ್, ಗುರುಪ್ರಸಾದ್, ರಾಹಿಲ್, ಸಚಿನ್ ಈಡಿಗ, ರಾಜೇಶ್ ಮಂದಾರ, ಸೈಯದ್ ಸಾಯಿಲ್, ಮಿಥುನ್ ಎಸ್ ಜೆ, ವಿನಯ್ ಬಜಾರ್, ಕಿರಣ್, ಶಬರೀಶ್ ಆರ್ಯ, ಎಸ್ ಶರತ್ ಇತರರು ಇದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ