ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಕೇಂದ್ರ ರೈಲ್ವೆ ನಿಲ್ದಾಣದ 152ನೇ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರಯಾಣಿಸುವಾಗ ಇಲ್ಲಿ ಕೆಲ ಕಾಲ ಕಳೆದಿದ್ದರು. ಗುಂಪುಗುಂಪಾಗಿ ಸೇರಿದರೆ ಬ್ರಿಟೀಷರು ದಂಡಿಸುತ್ತಿದ್ದರು. ಇಂತಹ ಸಂದರ್ಭದಲ್ಲಿಯೂ ಗಾಂಧೀಜಿ ಬರುವ ಸುದ್ದಿ ಕೇಳಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ನನಗೆ 10 ಜನರನ್ನು ಕರೆತರುವ ಸೂಚನೆಯಿತ್ತು. 200 ಜನರನ್ನು ಕರೆ ತಂದಿದ್ದೆ. ಗಾಂಧೀಜಿಯವರ ಮಾತು ಕೇಳಿದ ನಾನು ಕಣ ಕಣಕಣದಲ್ಲೂ ದೇಶಪ್ರೇಮ ಬೆರೆಸಿಕೊಂಡಿದ್ದೆ ಎಂದು ಮೆಲಕು ಹಾಕಿದರು.
ಸ್ವಾತಂತ್ರ್ಯ ಬಂದು ಎರಡು ಪೀಳಿಗೆ ನೋಡಿದ್ದೇನೆ. ಅನೇಕ ಬದಲಾವಣೆ ಕಂಡಿದ್ದೇನೆ. ಇಂದಿನ ಯುವಕರು ಪುಣ್ಯವಂತರು. ಸ್ವಾತಂತ್ರ್ಯಕ್ಕಾಗಿ ಹೋರಾಡುವಂತಿಲ್ಲ. ಆದರೆ, ದೇಶದ ಕಾಯ್ದೆ, ಕಾನೂನುಗಳಿಗೆ ಗೌರವಿಸಿ ನಡೆದರೆ ಸಾಕು ಅದೇ ದೇಶ ಸೇವೆ. ಎಲ್ಲರಿಗೂ ವಿಚಾರ ಶಕ್ತಿ ಇದೆ. ಒಳ್ಳೆಯ ನಡೆತೆ ರೂಪಿಸಿಕೊಳ್ಳಬೇಕು. ಹಿರಿಯರು ಮೂಲಸ್ಥಂಬ. ಅವರಿಗೆ ಗೌರವ ನೀಡಬೇಕು. ಅವರು ಬಂಗಾರದ ಗಣಿ. ಅದರ ಫಲ ನಿಮಗೆ ಸಿಗುತ್ತದೆ. ಅಪಾರ ಅನುಭವ ಪಡೆದಿರುತ್ತಾರೆ. ಅವರವಿಚಾರ ತಿಳಿದುಕೊಳ್ಳಬೇಕು ಎಂದರು.ಗುಂತಕಲ್ ವಿಭಾಗೀಯ ಹಿರಿಯ ಎಂಜಿನಿಯರ್ ಕಿಷ್ಟಪ್ಪ ಮಾತನಾಡಿ, ರೈಲ್ವೆ ಸಂಚಾರ ಅನೇಕ ಕುಟುಂಬಗಳಿಗೆ ಜೋಡಿಸುವ ಜೊತೆಗೆ ಸಂಬಂಧಗಳ ಮಹತ್ವ ತಿಳಿಸಲು ಅನುಕೂಲವಾಗಿದೆ. ಸಾರ್ವಜನಿಕ ಸೇವಾ ವಲಯವಾಗಿದೆ. ಅನೇಕರಿಗೆ ಉದ್ಯೋಗ, ಜೀವನದ ಭದ್ರತೆ ನೀಡಿದೆ. ಪ್ರಯಾಣಿಕರು ಸ್ವಚ್ಛತೆ ಕಾಪಾಡಿ ಜವಾಬ್ದಾರಿ ನಾಗರಿಕರಾಗಬೇಕು ಎಂದರು.
ಸ್ಟೇಶನ್ ಮ್ಯಾನೇಜರ್ ಅಶೋಕ ಮೇನಾ, ಕಮರ್ಷಿಯಲ್ ಮ್ಯಾನೇಜರ್ ಎಸ್ ಜಿ ಚೌಹಾಣ್, ರಾಯಚೂರು ಸ್ಟೇಷನ್ ಕನ್ಸಲ್ಟೇಟಿವ್ ಕಮಿಟಿ ಸದಸ್ಯ ಜಂಬಣ್ಣ, ,ಎ. ಚಂದ್ರಶೇಖರ, ಎಂ. ಡಿ ಹನೀಫ್ ಶೇಖ್, ಕೆ. ಮಹೇಶ, ಅಫ್ರುದ್ದೀನ್, ವಿ.ಎನ್ ಕೊಂಡ, ಎಂ. ಮಾರೆಪ್ಪ, ಸಂಜೀವ, ಶ್ರೀಧರ ಬಾಬು, ಇದ್ದರು.