ಕನ್ನಡಪ್ರಭ ವಾರ್ತೆ ಸಿಂಧನೂರು
ಮುಖ್ಯ ಪ್ರವಚನಕಾರರಾಗಿ ಆಗಮಿಸಿದ್ದ ಶ್ರೀ ಪರಮಹಂಸ ಅಥರ್ವ ಆಯುರ್ಧಾಮ ಆಯುರ್ವೇದ ಹಾಗೂ ಯೋಗ ಕೇಂದ್ರ ಶಿವಮೊಗ್ಗದ ಸಂಸ್ಥಾಪಕರಾದ ಡಾ.ಮಲ್ಲಿಕಾರ್ಜುನ ಡಂಬಳ ಅವರು ಆಹಾರ, ಆರೋಗ್ಯ ಮತ್ತು ಆಧ್ಯಾತ್ಮ ವಿಷಯದ ಕುರಿತು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಆಹಾರದ ಕ್ರಮ, ಆಸ್ಪತ್ರೆ ರಹಿತ ಜೀವನ ನಡೆಸುವ ಬಗ್ಗೆ ಅಪರೂಪದ ಸಂಗತಿಗಳನ್ನು ಹಂಚಿಕೊಂಡರು. ಜೊತೆಗೆ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡುವುದರಿಂದ ಆಧ್ಯಾತ್ಮಿಕ ಜೀವನ ನಡೆಸಬಹುದೆಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸಿಂಧನೂರು ಹೆಲ್ತ್ ಕ್ಲಬ್ ಸಂಸ್ಥಾಪಕ ಕೆ.ಲಕ್ಷ್ಮಯ್ಯ ಶೆಟ್ಟಿ ಅವರು, ಪ್ರಪಂಚಕ್ಕೆ ಭಾರತ ನೀಡಿದ ಆಯುರ್ವೇದ ಚಿಕಿತ್ಸಾ ಪದ್ಧತಿ ಮತ್ತು ಭಾರತದ ಶ್ರೇಷ್ಠ ಕೊಡುಗೆಗಳ ಬಗ್ಗೆ ಮಾತನಾಡಿದರು.ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಸದಾನಂದ ಮಹಾರಾಜ್ ಆಶೀರ್ವಚನ ನೀಡಿದರು. ಈ ವೇಳೆ ಆಶ್ರಮದ ಭಕ್ತರು ಹಾಜರಿದ್ದರು.