ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರಸಭೆ ಪೌರಾಯುಕ್ತರು ಕೆಲವು ರೆಸ್ಟೋರೆಂಟ್‌ಗಳ ಅಡುಗೆ ಕೋಣೆಗೆ ಭೇಟಿನೀಡಿ ಅಡುಗೆಗೆ ಉಪಯೋಗಿಸುವ ಎಲ್ಲಾ ವಿಧವಾದ ಪದಾರ್ಥಗಳನ್ನು ಖುದ್ದಾಗಿ ಪರಿಶೀಲಿಸಿ, ಅಡುಗೆ ತಯಾರಸುವವರಿಗೆ ಅಡುಗೆ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸೂಚಿಸಿದರು.ವಾಗ್ವಾದ:ನಗರದ ಬಾರ್ ಒಂದರಲ್ಲಿ ನಿಷೇಧಿತ ಪ್ಲಾಸಿಕ್ ಕವರ್ ಮತ್ತು ದೊಡ್ಡಮಟ್ಟದಲ್ಲಿ ಪ್ಲಾಸಿಕ್ ಲೋಟಗಳನ್ನು ನಗರಸಭೆ ಅಧಿಕಾರಿಗಳು ವಶಪಡಿಸಿಕೊಂಡು ದಂಡ ಕಟ್ಟುವಂತೆ ಮನವಿ ಮಾಡಿದರು. ಬಳಿಕ ಅಧಿಕಾರಿಗಳು ಮತ್ತು ಬಾರ್ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು. ದಾಳಿ ನಡೆಸುವುದಕ್ಕೂ ಮುಂಚೆ ನಗರಸಭೆಯಿಂದ ನೋಟಿಸ್ ನೀಡಿದ್ದರೂ ನೀವು ನಿಷೇಧಿತ ಪ್ಲಾಸ್ಟಿಕ್ ಲೋಟಗಳನ್ನು ಬಳಸುತ್ತಿದ್ದೀರಿ, ಸರ್ಕಾರಿ ಆದೇಶವನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಬಾರ್ ಮಾಲೀಕರಿಗೆ ತಿಳಿಸಿದರು.ಪ್ರತಿ ಬಾರಿಯು ನಗರಸಭೆ ವತಿಯಿಂದ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಗ್ಲಾಸ್, ಮತ್ತಿತರ ನಿಷೇಧಿತ ಪ್ಲಾಸ್ಟಿಕ್ ಬಳಕೆ ತಡೆಯಲು ಸಾಧ್ಯವಿಲ್ಲ. ಸಾರ್ವಜನಿಕರು ಸಹ ನಮ್ಮ ಜೊತೆಯಲ್ಲಿ ಕೈಜೋಡಿಸಿ ಸಹಕರಿಸಬೇಕು. ಸಾರ್ವಜನಿಕರಿಗೆ ಮನೆಯಿಂದಲೇ ಕೈ ಚೀಲಗಳನ್ನು ತರಲು ಅಭ್ಯಾಸ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸ್ಥಳಿಯವಾಗಿ ಲಭ್ಯವಿರುವ ಬಟ್ಟೆ ಚೀಲಗಳನ್ನು ಖರೀದಿಸಲು ಮನವಿ ಮಾಡಿದರು. ಇನ್ನು ಮುಂದೆ ಅಂಗಡಿ, ಬಾರ್ ಮಾಲಿಕರಾಗಲಿ ನಿಷೇಧಿತ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸದಿದ್ದಲ್ಲಿ ಕಾನೂನು ರಿತ್ಯ ಕಠಿಣ ಕ್ರಮಕೈಗೊಳ್ಳುವುದಾಗಿ ನಗರಸಭೆಯ ಪೌರಾಯುಕ್ತೆ ಡಿ.ಎಂ. ಗೀತಾ ಎಚ್ಚರಿಕೆ ನೀಡಿದರು.ಪ್ರತಿ ಬಾರಿಯೂ ನಗರದ ಬಾರ್, ಹೋಟೆಲ್, ಅಂಗಡಿ ಮುಗ್ಗಟುಗಳ ಮೇಲೆ ದಾಳಿ ನಡೆಸಿ ಅವರಿಗೆ ಕಿರಿಕಿರಿ ನೀಡುವ ಬದಲಿಗೆ ಪ್ಲಾಸ್ಟಿಕ್ ಉತ್ಪಾದನಾ ಘಟಕದ ಮೇಲೆ ದಾಳಿ ಮಾಡಿ ಸ್ಥಳದಲ್ಲೇ ಫ್ಯಾಕ್ಟರಿಯನ್ನು ಮುಚ್ಚಿಸಬೇಕು. ಕನಿಷ್ಠ ಪಕ್ಷ ಪರಿಸರವನ್ನು ಲೆಕ್ಕಿಸದೆ ಹಾಳು ಮಾಡುತ್ತಿರುವ ಮಾಲೀಕರಲ್ಲಿ ಒಬ್ಬನಿಗಾದರೂ ಕಠಿಣ ಶಿಕ್ಷೆಯಾದಲ್ಲಿ ಎಲ್ಲರಿಗೂ ಒಳಿತು ಎಂದು ಪರಿಸರಪ್ರೇಮಿಯೊಬ್ಬರು ತಿಳಿಸಿದರು.ಚಿಕ್ಕಬಳ್ಳಾಪುರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ರಂಜಿತಾ, ನಗರಸಭೆಯ ಪೌರಾಯುಕ್ತರು ಡಿ.ಎಂ.ಗೀತಾ, ಆರೋಗ್ಯಾಧಿಕಾರಿ ಶ್ವೇತಾ, ಸಿಬ್ಬಂದಿ ಹಾಜರಿದ್ದರು.