ಸ್ಥಗಿತಗೊಂಡಿದ್ದ ಎತ್ತಿನಹೊಳೆ ನಾಲೆ ನಿರ್ಮಾಣ ಕಾಮಗಾರಿಗೆ ರೈಲ್ವೆ ಇಲಾಖೆ ಹಸಿರು ನಿಶಾನೆ

KannadaprabhaNewsNetwork |  
Published : Apr 03, 2025, 12:32 AM IST
ಪೋಟೋ- ಹಬ್ಬನಘಟ್ಟ ರೈಲ್ವೆ ನಿಲ್ದಾಣದ ಕೂಗಳತೆ ದೂರದಲ್ಲಿ ಎತ್ತಿನಹೊಳೆ ನಾಲೆ ನಿರ್ಮಾಣ ಕಾಮಗಾರಿಗೆ ರೈಲ್ವೆ ಇಲಾಖೆ ಸಿಬ್ಬಂದಿ ಸಹಕಾರ ನೀಡಿದ್ದು ಕೆಲಸ ನಡೆಯುತ್ತಿರುವ ದೃಶ್ಯ | Kannada Prabha

ಸಾರಾಂಶ

ಹಬ್ಬನಘಟ್ಟ ರೈಲ್ವೆ ನಿಲ್ದಾಣ ಹಾಗೂ ಮೈಲನಹಳ್ಳಿ ಗ್ರಾಮದ ಕೂಗಳತೆ ದೂರದಲ್ಲಿ ಸ್ಥಗಿತಗೊಂಡಿದ್ದ ಎತ್ತಿನಹೊಳೆ ನಾಲೆ ನಿರ್ಮಾಣ ಕಾಮಗಾರಿಗೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿದೆ. ಸದ್ಯದ ಬೆಳವಣಿಗೆಯಿಂದಾಗಿ ಬಹುಕಾಲದಿಂದ ನೆನಗುದಿಗೆ ಬಿದ್ದಿದ್ದ ದೊಡ್ಡಮಟ್ಟದ ಕೆಲಸ ಮೊದಲ ಹಂತದಲ್ಲಿ ಹಬ್ಬನಘಟ್ಟ ಬಳಿ ಮಂಗಳವಾರ ಆರಂಭವಾಗಿದೆ. ಅರಸೀಕೆರೆ, ಹಾಸನ ಮಾರ್ಗವಾಗಿ ಮೈಸೂರು ಹಾಗೂ ಅರಸೀಕೆರೆ- ಬೆಂಗಳೂರು ಸಂಪರ್ಕಿಸುವ ರೈಲ್ವೆ ಮಾರ್ಗದಲ್ಲಿ ನಾಲೆ ಹಾದು ಹೋಗಬೇಕಿದ್ದ ಹಿನ್ನಲೆಯಲ್ಲಿ ಅನುಮತಿ ಪಡೆಯವುದು ಕಡ್ಡಾಯವಾಗಿತ್ತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಆಯಕಟ್ಟಿನ ಜಾಗಗಳಲ್ಲಿ ಒಂದಿಲ್ಲೊಂದು ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಎತ್ತಿನಹೊಳೆ ಕಾಮಗಾರಿ ಪುನಾರಂಭಗೊಂಡಿದೆ.

ಹಬ್ಬನಘಟ್ಟ ರೈಲ್ವೆ ನಿಲ್ದಾಣ ಹಾಗೂ ಮೈಲನಹಳ್ಳಿ ಗ್ರಾಮದ ಕೂಗಳತೆ ದೂರದಲ್ಲಿ ಸ್ಥಗಿತಗೊಂಡಿದ್ದ ಎತ್ತಿನಹೊಳೆ ನಾಲೆ ನಿರ್ಮಾಣ ಕಾಮಗಾರಿಗೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿದೆ. ಸದ್ಯದ ಬೆಳವಣಿಗೆಯಿಂದಾಗಿ ಬಹುಕಾಲದಿಂದ ನೆನಗುದಿಗೆ ಬಿದ್ದಿದ್ದ ದೊಡ್ಡಮಟ್ಟದ ಕೆಲಸ ಮೊದಲ ಹಂತದಲ್ಲಿ ಹಬ್ಬನಘಟ್ಟ ಬಳಿ ಮಂಗಳವಾರ ಆರಂಭವಾಗಿದೆ. ಅರಸೀಕೆರೆ, ಹಾಸನ ಮಾರ್ಗವಾಗಿ ಮೈಸೂರು ಹಾಗೂ ಅರಸೀಕೆರೆ- ಬೆಂಗಳೂರು ಸಂಪರ್ಕಿಸುವ ರೈಲ್ವೆ ಮಾರ್ಗದಲ್ಲಿ ನಾಲೆ ಹಾದು ಹೋಗಬೇಕಿದ್ದ ಹಿನ್ನಲೆಯಲ್ಲಿ ಅನುಮತಿ ಪಡೆಯವುದು ಕಡ್ಡಾಯವಾಗಿತ್ತು. ತ್ವರಿತ ಗತಿಯಲ್ಲಿ ಕೆಲಸ ಪೂರ್ಣಗೊಳಿಸಲು ಪಣ ತೊಟ್ಟಿದ್ದ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಗಮನಕ್ಕೆ ತಂದಿದ್ದರು. ಕೆಲ ದಿನಗಳ ಹಿಂದಷ್ಟೇ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದ ಶಾಸಕ ಕೆಎಂಶಿ ಹಾಗೂ ವಿಜೆಎನ್‌ಎಲ್ ಅಧಿಕಾರಿಗಳ ತಂಡ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿತ್ತು. ತುಮಕೂರು, ಹಾಸನ ಉಭಯ ಜಿಲ್ಲೆಗಳ ಕುಡಿಯುವ ನೀರಿನ ಸಂಕಷ್ಟ ಆಲಿಸಿದ ಕೇಂದ್ರ ಸಚಿವರು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಪೂರ್ಣಗೊಳಿಸಲು ಅನುವು ಮಾಡಿಕೊಡುವಂತೆ ಸೂಚಿಸಿದ್ದರು. ಇದರಿಂದಾಗಿ ಹಬ್ಬನಘಟ್ಟ ಗ್ರಾಮದ ಬಳಿ ೭೨ ಮೀ.ಹಾಗೂ ಮೈಲನಹಳ್ಳಿ ಸಮೀಪ ೬೦ ಮೀ. ಕಾಲುವೆ ತೆಗೆಯುವ ಕೆಲಸ ಶೀಘ್ರವೇ ಪೂರ್ಣಗೊಳ್ಳಲಿದೆ.ಬೃಹತ್ ಯೋಜನೆಗೆ ಎದುರಾಗಿದ್ದ ಬಹುದೊಡ್ಡ ತೊಡಕು ನಿವಾರಣೆಯಾಗಿರುವುದು ಮುಂಗಾರು ವೇಳೆಗೆ ಕೆರೆ ಪಾತ್ರದ ಜನರಲ್ಲಿ ನೀರು ಹರಿಯುವ ವಿಶ್ವಾಸ ಹೆಚ್ಚಿದೆ.

ತಾಲೂಕಿನಲ್ಲಿ ೪೫ ಕಿ.ಮೀ ಹಾದುಹೋಗಿರುವ ಎತ್ತಿನಹೊಳೆ ನಾಲೆ ಹತ್ತು ಹಲವು ವಿಶೇಷತೆಗಳನ್ನು ಹೊಂದಿದೆ. ನೀರು ಸರಾಗವಾಗಿ ಗುರುತ್ವಾಕರ್ಷಣೆ ಮೂಲಕ ಹರಿಯುವಂತೆ ಕೋಡಿಮಠ ಬಳಿ ೮೧೦ ಮೀ ಹಾಗೂ ೨ ಮೈಲನಹಳ್ಳಿ ಗ್ರಾಮದ ಬಳಿ ೭೫೦ ಮೀ ಬಹೃತ್ ಸುರಂಗ ಕೊರೆಯಲಾಗಿದ್ದು, ೭ ಮೇಲ್ಗಾಲುವೆ, ೬೦ಕ್ಕೂ ಹೆಚ್ಚು ಮೇಲ್ಸೇತುವೆಗಳು ಸೇರಿವೆ. ಇದಕ್ಕಾಗಿ ೯೮೪ ಕೋಟಿ ರು. ಹಣ ಮೀಸಲಿರಿಸಲಾಗಿದ್ದು ಕೆಲಸ ಭಾಗಶಃ ಪೂರ್ಣಗೊಂಡಿದೆ.

ಸಕಲೇಶಪುರ ತಾಲೂಕಿನ ಎತ್ತಿನ ಹಳ್ಳ, ಆಲೂರು,ಬೇಲೂರು ಮಾರ್ಗವಾಗಿ ಅರಸೀಕೆರೆ, ತಿಪಟೂರು, ಚಿಕ್ಕನಾಯ್ಕನಹಳ್ಳಿ, ಮಾರಿಕಣಿವೆ ಸಂಪರ್ಕ, ಕೊರಟಗೆರೆ ತಲುಪುವ ಬೃಹತ್ ನಾಲೆ ನಿರ್ಮಾಣ ಕಾರ್ಯ ಭೈರಗೊಂಡ್ಲು ಜಲಾಶಯ ತಲುಪಲಿದೆ. ಅಲ್ಲಿಂದ ಚಿಕ್ಕಬಳ್ಳಾಪುರ, ಕೊಲಾರ ಜಿಲ್ಲೆಯ ಹಲವು ತಾಲೂಕಿನ ಕೆರೆಗಳಿಗೆ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.ಇದೀಗ ಬಹುದೊಡ್ಡ ಕಾಮಗಾರಿಗೆ ಹಿಡಿದಿದ್ದ ಗ್ರಹಣ ಬಿಟ್ಟಿದ್ದು ಕಾಮಗಾರಿ ಬಿರುಸಿನಿಂದ ಸಾಗಿರುವುದು ಬಯಲು ಸೀಮೆಯ ಜನರಿಗೆಭೂ ಪರಿಹಾರ ವ್ಯಾಜ್ಯದ ಹಿನ್ನಲ್ಲೆಯಲ್ಲಿ ರೈತರು ಭೂಮಿ ಬಿಟ್ಟುಕೊಡಲು ತಗಾದೆ ತೆಗೆದಿದ್ದ ಮುದುಡಿ-ವೆಂಕಟಾಪುರ,ಕಲ್ಕೆರೆ ಹಾಗೂ ನಾಯಕನಕೆರೆ ಕಾವಲು ಗ್ರಾಮಗಳ ಸರಹದ್ದಿನ ೩.೫ ಕಿ.ಮೀ ಅಂತರದ ಕೆಲಸ ನಡೆಯುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ