ರೈಲ್ವೆ ರಕ್ಷಣಾ ಪಡೆಯಿಂದ 51 ಮಕ್ಕಳ ರಕ್ಷಣೆ

KannadaprabhaNewsNetwork |  
Published : Oct 09, 2025, 02:01 AM IST
ಕಳೆದ ಸೆಪ್ಟಂಬರ್‌ ತಿಂಗಳಲ್ಲಿ ಸತರ್ಕ ಕಾರ್ಯಾಚರಣೆಯಡಿ ರೈಲ್ವೆ ರಕ್ಷಣಾ ಪಡೆಯು ವಶಪಡಿಸಿಕೊಂಡ ಮದ್ಯದ ಬಾಟಲಿಗಳು. | Kannada Prabha

ಸಾರಾಂಶ

ರೈಲ್ವೆ ಆಸ್ತಿ, ಪ್ರಯಾಣಿಕರ ಸುರಕ್ಷತೆ ಕಾಪಾಡುವಲ್ಲಿ ನಿರತವಾಗಿರುವ ರೈಲ್ವೆ ರಕ್ಷಣಾ ಪಡೆ(ಆರ್‌ಪಿಎಫ್) ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ 12 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 51 ಮಕ್ಕಳನ್ನು ರಕ್ಷಿಸಿದೆ.

ಹುಬ್ಬಳ್ಳಿ:

ರೈಲ್ವೆ ಆಸ್ತಿ, ಪ್ರಯಾಣಿಕರ ಸುರಕ್ಷತೆ ಕಾಪಾಡುವಲ್ಲಿ ನಿರತವಾಗಿರುವ ರೈಲ್ವೆ ರಕ್ಷಣಾ ಪಡೆ(ಆರ್‌ಪಿಎಫ್) ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ 12 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 51 ಮಕ್ಕಳನ್ನು ರಕ್ಷಿಸಿದೆ.

ರೈಲುಗಳಲ್ಲಿ ನಿಷೇಧಿತ ವಸ್ತುಗಳನ್ನು ಸಾಗಿಸುತ್ತಿದ್ದ 14 ಜನರನ್ನು ಬಂಧಿಸಿ ₹86,833 ಮೌಲ್ಯದ ವಸ್ತು ವಶಪಡಿಸಿಕೊಂಡಿದೆ. ವಿವಿಧ ಕಾರಣಗಳಿಂದ ಮನೆ ಬಿಟ್ಟು ಬಂದಿದ್ದ 51 ಮಕ್ಕಳನ್ನು "ನನ್ನೆ ಪರಿಸ್ತೆ " ಕಾರ್ಯಾಚರಣೆ ಅಡಿ ರಕ್ಷಿಸಿ, ಎನ್‌ಜಿಒ ಹಾಗೂ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆರೈಕೆ ಮತ್ತು ರಕ್ಷಣೆಯ ಅಗತ್ಯವಿದ್ದ ಓರ್ವ ಮಹಿಳೆ ಸೇರಿದಂತೆ 6 ವೃದ್ಧರನ್ನು ಡಿಗ್ನಿಟಿ ಕಾರ್ಯಾಚರಣೆ ಅಡಿ ರಕ್ಷಿಸಿ, ಅವರ ಕುಟುಂಬ ಅಥವಾ ಎನ್‌ಜಿಒಗಳಿಗೆ ಹಸ್ತಾಂತರಿಸಲಾಗಿದೆ.

ವಿವಿಧ ರೈಲುಗಳಲ್ಲಿ 66 ಜನ ಬಿಟ್ಟು ಹೋದ ₹17.33 ಲಕ್ಷ ಮೌಲ್ಯದ ಲ್ಯಾಪ್‌ಟಾಪ್, ಆಭರಣ ಹಾಗೂ ಇನ್ನಿತರ ಮೌಲ್ಯಯುತ ವಸ್ತುಗಳನ್ನು ಆರ್‌ಪಿಎಫ್ ಸಿಬ್ಬಂದಿ ಸಂಬಂಧಿಸಿದ ಪ್ರಯಾಣಿಕರಿಗೆ ಹಸ್ತಾಂತರಿಸಿದರು.ಸಾಮಾನ್ಯ ಪ್ರಯಾಣಿಕರಿಗೆ ನ್ಯಾಯಯುತವಾಗಿ ಟಿಕೆಟ್‌ ಲಭ್ಯವಾಗಲು ಮತ್ತು ಬ್ಲಾಕ್‌ ಮಾರ್ಕೆಟ್‌ನಲ್ಲಿ ನಡೆಯುವ ಟಿಕೆಟ್‌ ಮಾರಾಟ ತಡೆಗಟ್ಟಲು ಕರ್ನಾಟಕ ಹಾಗೂ ಗೋವಾದಾದ್ಯಂತ ಟ್ರಾವೆಲ್ ಏಜೆನ್ಸಿಗಳಲ್ಲಿ ತಪಾಸಣೆ ನಡೆಸಲಾಯಿತು. ಇದರ ಫಲವಾಗಿ 35 ಪ್ರಕರಣಗಳಲ್ಲಿ 46 ದಂಧೆಗಾರರನ್ನು ಬಂಧಿಸಲಾಯಿತು. ಒಟ್ಟು 96 ಟಿಕೆಟ್‌ಗಳು (₹1,19,956.85 ಮೌಲ್ಯ) ಮತ್ತು 140 ಬಳಕೆ ಮುಗಿದ ಟಿಕೆಟ್‌ಗಳು (₹2,02,045.95 ಮೌಲ್ಯ) ವಶಪಡಿಸಕೊಳ್ಳಲಾಯಿತು.ಸತರ್ಕ ಕಾರ್ಯಾಚರಣೆಯಡಿ ಒಟ್ಟು 9 ಮದ್ಯ ಪ್ರಕರಣಗಳಲ್ಲಿ ₹86,833 ಮೌಲ್ಯದ 168 ಮದ್ಯದ ಬಾಟಲಿ (170.010 ಲೀಟರ್) ವಶಪಡಿಸಿಕೊಂಡು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ನಾರ್ಕೋ ಕಾರ್ಯಾಚರಣೆಯಡಿ 7 ಪ್ರಕರಣಗಳಲ್ಲಿ 53.958 ಕೆ.ಜಿ ಗಾಂಜಾ (₹41.26 ಲಕ್ಷ) ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗಿದೆ.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ