ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕೊರಿಯಾ, ಯುರೋಪ್, ನೇಪಾಳ, ಶ್ರೀಲಂಕಾ, ಊಟಿ, ಅಯೋಧ್ಯೆ, ಕಾಶ್ಮೀರ ಮುಂತಾದ ದೇಶ- ವಿದೇಶಗಳ ವಿಶೇಷ ಸ್ಥಳಗಳಿಗೆ ಪ್ರವಾಸ ಪ್ಯಾಕೇಜ್ ಪ್ರಕಟಿಸುವ ಮೂಲಕ ಪ್ರವಾಸೋದ್ಯಮ ಉತ್ತೇಜನಕ್ಕೆ ಮುಂದಾಗಿದೆ. ಭಾರತೀಯ ರೈಲ್ವೆಯಡಿ ಕಾರ್ಯನಿರ್ವಹಿಸುವ ಐಆರ್‌ಸಿಟಿ ಇದನ್ನು ಆಯೋಜಿಸುತ್ತಿದೆ ಎಂದು ಆರ್‌ಸಿಟಿಸಿ ಜಂಟಿ ಮಹಾ ಪ್ರಬಂಧಕ (ಪ್ರವಾಸೋದ್ಯಮ) ಸ್ಯಾಮ್ ಜೋಸೆಫ್ ಮಂಗಳೂರಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಮೇ 16 ರಂದು ಅಯೋಧ್ಯೆ, ವಾರಣಾಸಿ:ಮಂಗಳೂರಿನಿಂದ ವಾರಣಾಸಿ, ಅಯೋಧ್ಯೆ, ಪ್ರಯಾಗ್‌ರಾಜ್ ಏರ್ ಟೂರ್ ಪ್ಯಾಕೇಜ್ ಇದೆ. ಅಯೋಧ್ಯೆ ದರ್ಶನದೊಂದಿಗೆ ವಾರಣಾಸಿಗೆ ವಿಶೇಷ ವಿಮಾನ ಪ್ಯಾಕೇಜ್ ಹೊಂದಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಮೇ 16 ರಂದು ಪ್ರವಾಸ ಆರಂಭವಾಗಲಿದೆ ಎಂದರು.
ವಿಶೇಷ 6 ದಿನಗಳ ವಿಮಾನ ಪ್ರಯಾಣದೊಂದಿಗೆ ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುವ ಕಾಶ್ಮೀರಕ್ಕೆ ಮಂಗಳೂರಿನಿಂದ ನೇರ ಪ್ರವಾಸ ಆಯೋಜಿಸಲಾಗಿದೆ. ಆಗಸ್ಟ್ 25 ರಂದು ಶುರುವಾಗಿ ಐದು ರಾತ್ರಿಗಳಲ್ಲಿ ಕೊನೆಗೊಳ್ಳಲಿದೆ.
ಮಂಗ್ಳೂರು-ಊಟಿ ರೈಲು ಪ್ರವಾಸ: ಪ್ರತಿ ಗುರುವಾರ ಮಂಗಳೂರಿನಿಂದ ಹೊರಡುವ ಊಟಿಗೆ ಐಆರ್‌ಸಿಟಿಸಿ ಐದು ದಿನಗಳ ರೈಲು ಪ್ರವಾಸ ಪ್ಯಾಕೇಜನ್ನು ಆರಂಭಿಸಿದೆ. ಈ ಪ್ಯಾಕೇಜ್ ರೌಂಡ್ ಟ್ರಿಪ್ ರೈಲು ಟಿಕೆಟ್, ಸ್ಥಳೀಯ ಸಾರಿಗೆ, ಹೋಟೆಲ್ ವಸತಿ ಮತ್ತು ಪ್ರಯಾಣ ವಿಮೆ ಒಳಗೊಂಡಿದೆ. ಬೆಂಗ್ಳೂರಿಂದ ಅಂತಾರಾಷ್ಟ್ರೀಯ ಪ್ಯಾಕೇಜ್:
ಬೆಂಗಳೂರುನಿಂದ ಮೇ 19 ರಂದು ಹೊರಡುವ 13 ದಿನಗಳ ಯುರೋಪ್ ಪ್ರವಾಸ ಪ್ಯಾಕೇಜ್ ಪ್ರಕಟಿಸಲಾಗಿದೆ.
ರಜೆಯ ಪ್ರಯಾಣ ರಿಯಾಯಿತಿ (ಎಲ್ಟಿಸಿ) ಸೌಲಭ್ಯವು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳ ಉದ್ಯೋಗಿಗಳಿಗೆ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಎಲ್ಲ ದೇಶೀಯ ಪ್ರವಾಸ ಪ್ಯಾಕೇಜ್‌ಗಳಿಗೆ ಲಭ್ಯವಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಇದಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗೆ ಐಆರ್‌ಸಿಟಿಸಿ ಜಾಲತಾಣ www.irctctourism.com ಅಥವಾ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ: 8287932064 / 8287932042 ಸಂಪರ್ಕಿಸುವಂತೆ ಸೂಚಿಸಲಾಗಿದೆ.