ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಮರಂದೋಡ ಗ್ರಾಮದ ಅನ್ನಾಡಿಯಂಡ ಕುಟುಂಬಸ್ಥರ ಐನ್ ಮನೆಯ ಒಂದು ಭಾಗವು ವಿಪರೀತ ಗಾಳಿ ಮಳೆಯಿಂದ ಭಾನುವಾರ ಸಂಪೂರ್ಣವಾಗಿ ಬಿದ್ದು ಹೋಗಿ ಹಾನಿಗೊಳಗಾಗಿದೆ.ಬೆಂಗಳೂರಿನಲ್ಲಿ ನೆಲೆಸಿರುವ ಅನ್ನಡಿಯಂಡ ಮೋನಿಷ್ ಎಂಬವರು ತೋಟದಲ್ಲಿನ ಕೆಲಸದ ನಿಮಿತ್ತ ಆಗ್ಗಾಗ್ಗೆ ಬಂದು ಈಮನೆಯಲ್ಲಿ ನೆಲೆಸುತ್ತಿದ್ದರು. ಮನೆಯ ಒಂದು ಭಾಗ ಕುಸಿದು ಬಿದ್ದುದ್ದರಿಂದ ಮನೆಯಲ್ಲಿನ ವಸ್ತುಗಳು ಹಾನಿಗೊಳಗಾಗಿವೆ. ಮರಂದೊಡ ಗ್ರಾಮ ಪಂಚಾಯಿತಿ ಸದಸ್ಯರಾದ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಮತ್ತು
ಅನ್ನಾಡಿಯಂಡ ಮಂದಣ್ಣ ಹಾಗೂ ಗ್ರಾಮ ಲೆಕ್ಕಾಧಿಕಾರಿ ಶರ್ಮಿಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.----------------------------
ಕೊಡಗಿನಲ್ಲಿ ಸಾಧಾರಣ ಮಳೆಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲೆಯಾದ್ಯಂತ ಮಂಗಳವಾರ ಸಾಧಾರಣ ಮಳೆಯಾಗಿದೆ.ಕಳೆದ ಎರಡು ದಿನಗಳಿಂದ ಅಬ್ಬರಿಸಿದ್ದ ಮಳೆ ಮಂಗಳವಾರ ಸ್ವಲ್ಪ ಬಿಡುವು ನೀಡಿದ್ದು, ಜಿಲ್ಲಾ ಕೇಂದ್ರ ಮಡಿಕೇರಿ ಸೇರಿ ಹಲವು ಕಡೆ ಸಾಧಾರಣ ಮಳೆ ಸುರಿದಿದೆ.ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 26.28 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 5.80 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2416.94 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2408.70 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 27.60 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 15.90 ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ 26.40 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 54.50 ಮಿ.ಮೀ ಹಾಗೂ ಕುಶಾಲನಗರ ತಾಲೂಕಿನಲ್ಲಿ 7 ಮಿ.ಮೀ. ಮಳೆಯಾಗಿದೆ.ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 17, ನಾಪೋಕ್ಲು 26.80, ಸಂಪಾಜೆ 31, ಭಾಗಮಂಡಲ 35.60, ವಿರಾಜಪೇಟೆ 11.80, ಅಮ್ಮತ್ತಿ 20, ಹುದಿಕೇರಿ 21.60, ಶ್ರೀಮಂಗಲ 60, ಪೊನ್ನಂಪೇಟೆ 13, ಬಾಳೆಲೆ 11, ಸೋಮವಾರಪೇಟೆ 32, ಶನಿವಾರಸಂತೆ 36, ಶಾಂತಳ್ಳಿ 111, ಕೊಡ್ಲಿಪೇಟೆ 39, ಕುಶಾಲನಗರ 2, ಸುಂಟಿಕೊಪ್ಪ 12 ಮಿ.ಮೀ.ಮಳೆಯಾಗಿದೆ.----------------------------
ಕೊಡಗಿನ ಸೂರ್ಲಬ್ಬಿಯಲ್ಲಿ ಅತ್ಯಧಿಕ ಮಳೆಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಹಾಗೂ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ಅತ್ಯಧಿಕ ಮಳೆಯಾಗಿದೆ.
ಪುಷ್ಪಗಿರಿ ವನ್ಯಶ್ರೇಣಿಯ ಸೂರ್ಲಬ್ಬಿ ಪ್ರದೇಶಕ್ಕೆ ಜನವರಿಯಿಂದ ಇಲ್ಲಿಯ ವರೆಗೆ 287 ಇಂಚು ಮಳೆಯಾಗಿದೆ. ಬ್ರಹ್ಮಗಿರಿ ವನ್ಯಧಾಮ ವ್ಯಾಪ್ತಿಯ ತಲಕಾವೇರಿಯಲ್ಲಿ 276 ಇಂಚು ಮಳೆಯಾಗಿದೆ. ಎರಡು ಪ್ರದೇಶಕ್ಕೂ ಕೂಡ ವಾಡಿಕೆ ಮಳೆಯಾಗಿದೆ. ಅಂದಾಜಿಗೆ ಇನ್ನೂ 100 ಇಂಚು ಮಳೆಯಾಗುವ ಸಾಧ್ಯತೆಯಿದೆ. ಸೂರ್ಲಬ್ಬಿ ಭಾಗಕ್ಕೆ ವಾರ್ಷಿಕ ಸರಾಸದಿ 300 ಇಂಚು ಮಳೆಯಾಗುತ್ತದೆ. ಆದರೆ ಈ ಬಾರಿ 400 ಇಂಚಿಗೂ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.