ಕನ್ನಡಪ್ರಭ ವಾರ್ತೆ ಕಲಾದಗಿ
ಶಾರದಾಳ, ಉದಗಟ್ಟಿ, ಕಲಾದಗಿ, ಖಜ್ಜಿಡೋಣಿ, ಮುರುನಾಳ ಗ್ರಾಮದಲ್ಲಿ ಅಪಾರ ಹಾನಿ ಉಂಟಾಗಿದೆ. ಶಾರದಾಳ ಗ್ರಾಮದ ದುಸ್ಯಂಗೆಪ್ಪ ಗಂಗಪ್ಪ ಕುರಿ ಎಂಬುವವರ ಮನೆಯ ಛಾವಣಿ ಹಾರಿ ಹೋಗಿ ಬಹುದೂರ ಬಿದ್ದಿದ್ದು, ಮನೆಯೊಳಗಿದ್ದ 24 ಚೀಲ ಗೋದಿ ಮಳೆಗೆ ಹಾನಿಯಾಗಿದೆ. ನಿಂಗಪ್ಪ ರಂಗಪ್ಪ ಕೊಕ್ಕನ್ನವರ ಮನೆಯ ಪಕ್ಕದ ಬೃಹತ್ ಬೇವಿನ ಮರದ ಕೊಂಬೆ ಮುರಿದು ಬಿದ್ದಿವೆ. ಬೃಹತ್ ಜಾಲಿ ಮರ ಉರುಳಿಬಿದ್ದು ನಿಂಗಪ್ಪ ಸೂಳಿಕೇರಿ ಹಾಗೂ ದ್ರಾಕ್ಷಾಯಣಿ ರಾಮ್ಕಿ ಅವರ ಮನೆಗೆ ಭಾಗಶಃ ಹಾನಿಯಾಗಿದೆ. ಛಾವಣಿ ಹಾರಿ ಕೆಂಚನಗೌಡ ಪಾಟೀಲ ಅವರ ಮನೆಯ ಮುಂದೆ ಬಿದ್ದಿದ್ದು, ಅವರ ಮನೆಯ ದನದ ಶೆಡ್ ತಗಡು ಹಾರಿ ಹೋಗಿವೆ. ಉದಗಟ್ಟಿ ಗ್ರಾಮದಲ್ಲಿ ಸುಭಾಸ ಜಕ್ಕನ್ನವರ ಮನೆಯ ಮುಂದಿನ ಮರ ಧರೆಗುರುಳಿದೆ, ಜೋರಾದ ಗಾಳಿಗೆ ಕಬ್ಬು ನೆಲಕ್ಕುರುಳಿ ಬೆಳೆ ಹಾನಿಯಾಗಿದೆ. ಮುರುನಾಳ ಗ್ರಾಮದಲ್ಲಿ ಗದಿಗೆಪ್ಪ ಮುರುನಾಳ ಎಂಬುವವರ ತೋಟದಲ್ಲಿ ಸಾಗವಾನಿ ಮರ, ತೆಂಗಿನ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಯಾವುದೇ ಪ್ರಣಾಪಾಯ ಸಂಭವಿಸಿಲ್ಲ, ಮನೆ ಹಾನಿ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಸಂಜಯಕುಮಾರ ಕೊಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
-------------ಲೋಕಾಪುರ ಸುತ್ತಮುತ್ತಲು ಮಳೆಯಿಂದ ಅವಾಂತರ
ಹಲವು ಮನೆಗಳ ಛಾವಣೆ, ಅಂಗಡಿಗಳ ಬೋರ್ಡ್, ತಗಡಿನ ಶೆಡ್‌ಗಳು ಹಾರಿ ಹೋಗಿದ್ದು, ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ.
ಕಚೇರಿಯ ದಾಖಲಾತಿಗಳ ಮತ್ತು ವಸ್ತುಗಳನ್ನು ಕೈಯಿಲ್ಲಿ ಹಿಡಿದು ರಾತ್ರಿ ಪೂರ್ತಿ ಜಾಗರಣೆ ಮಾಡಿದ್ದು ಕಂಡು ಬಂತು. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಗೆ ರಕ್ಷಣೆ ನೀಡುವ ಪೋಲಿಸರ ಕಚೇರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಡಿಕೊಂಡರು.